ರಾಜಕೀಯ ಸುದ್ದಿಗಳು

ಆಯನೂರು ಟೀಕೆಗೆ ಅಖಾಡಕ್ಕಿಳಿದ ಸಂಸದರು

ಸುದ್ದಿಲೈವ್/ಶಿವಮೊಗ್ಗ

ಕೆಪಿಸಿಸಿ ವಕ್ತಾರ ಆಯೂರು ಮಂಜುನಥ್ ಆರೋಪಕ್ಕೆ ಸಂಸದ ರಾಘವೇಂದ್ರ ಅಖಾಡಕ್ಕೆ ಇಳಿದಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಹಾಗೂ‌ ತಮ್ಮ ಅಭಿವೃದ್ಧಿ ವಿರುದ್ಧ ಮಾತನಾಡಿದ ಆಯನೂರು ಮಂಜುನಾಥ್ ಗೆ ಟಾಂಗ್ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಈಶ್ವರಪ್ಪನವರು ಕಾನೂನು ತನ್ನ ಎಂಬ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಕ್ಕೆ ಆಯನೂರು ಅವರು ಅವರುಕಡಿ ಬಡಿ ಮಾತನಾಡುತ್ತಾರೆ ಎಂದು ಆಯನೂರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ರಾಷ್ಟಪತಿಗಳ ವಿರುದ್ಧ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ವಿರುದ್ಧ ಏಕವಚನದಲ್ಲಿ ಮಾತನಾಟಿದ್ದಕ್ಕೆ ಅವರ ಸ್ಪಷ್ಟನೆ ಏನಿತ್ತು ? ನಂತರ ಕ್ಷಮೆ ಕೇಳಲಾಯಿತು ಯಾಕೆ ಎಂದು ಪ್ರಶ್ನಿಸಿದರು.

ಸಂಸದ ಡಿಕೆಸುರೇಶ್ ಅನುದಾನದ ವಿಚಾರದಲ್ಲಿ ದಕ್ಷಿಣ ರಾಜ್ಯಗಳು ಇಬ್ಭಾಗ ಮಾಡುವ ಮಾತನಾಡಿರುವುದು ಎಷ್ಟು ಸರಿ? ಅವರ ಪಕ್ಷದ ಹೇಳಿಕೆ ಬಗ್ಗೆ ಏನಾದರೂ ಮಾಡಿಕೊಳ್ಳಿ ಆದರೆ ನಮ್ಮ(ಬಿಜೆಪಿ) ವಿರುದ್ಧ ಮಾತನಾಡುವುದನ್ನ‌ ಸಹಿಸೊಲ್ಲ ಎಂದರು.

ಅಭಿವೃದ್ಧಿ ವಿಚಾರದಲ್ಲಿ ಅವರರವರ ವೇದಿಕೆಯಲ್ಲಿ ಹೇಳಿಬೇಕು. ಮೋದಿ ಸರ್ಕಾರದಿಂದ ಮಲೆನಾಡಿಗೆ ಅನ್ಯಾಯವಾಗಿದೆ ಎಂದು ಆಯನೂರು ಹೇಳಿದ್ದಾರೆ. ಹೆಲ್ತ್ ಸೆಕ್ಟರ್, ಸೇತುವೆ ನಿರ್ಮಾಣ, ರೈಲ್ವೆ ಹೈವೆ ವಿಚಾರದಲ್ಲಿ ಯುಪಿಎ ಸರ್ಕಾರ ಏನು ಮಾಡಿತ್ತು. ಅವರದಲ್ಲಿರುವ ಗೊಂದಲವನ್ನ ಮುಚ್ಚಲು, ಗ್ಯಾರೆಂಟಿಗೆ ತೊಂದರೆ ಆಗಲಿದೆ ಎಂಬ ಉದ್ದೇಶದಿಂದ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಭದ್ರಾವತಿ ಮೇಲ್ಸೇತುವೆ, ಶರಾವತಿ, ವಿಐಎಸ್ ಎಲ್, ಹೈವೆ ಬಗ್ಗೆ ಯಾವ ನೈತಿಕತೆ ಇಟ್ಟುಕೊಂಡು ಆಯನೂರು ಪ್ರಶ್ನಿಸಿದ್ದೀರಿ. ಶರಾವತಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಾಗಿಲ್ಲ. ನಿಮ್ಮ ಅಧಿಕಾರದಲ್ಲಿ ಮಾಡಬೇಕಾದ ಕೆಲಸ ಮಾಡದೆ ಶರಾವತಿ ಸಂತ್ರಸ್ತರಿಗೆ ಅನಾನುಕೂಲವಾಗಿದೆ. ಸರ್ಕಾರ ಬಂದು 8 ತಿಂಗಳು ಕಳೆದಿದೆ. ಈಗ ತಯಾರಿ ಮಾಡಿಕೊಂಡಿರುವ ಸುದ್ದಿಕೇಳಿ ಬರುತ್ತಿದೆ. ಸಂತೋಷ ನನ್ನ ಕೆಲಸ ನಾನು ಮಾಡುವೆ. ನಿಮ್ಮ ಕೆಲಸ ನೀವು ಮಾಡಿ ಎಂದು ಗುಟರ್ ಹಾಕಿದ್ದಾರೆ.

ಭದ್ರಾ ಮೇಲ್ಸೇತುವೆ ಫೌಂಡೇಷನ್ ಸ್ಟೋನ್ ಹಾಕಿ ಎರಡು ವರ್ಷದಲ್ಲಿ ಸೋಮಿನಕೊಪ್ಪ, ಸವಳಂಗ ರಸ್ತೆ ಸಾರ್ವಜನಿಕ ಬಳಕೆಗೆ ಬಿಡಲಾಗಿದೆ. ಭದ್ರಾವತಿ ಮೇಲ್ಸೇತುವೆ ಆಗಿಲ್ಲ. ಸವಳಂಗ ರಸ್ತೆಯಲ್ಲಿ ನಮ್ಮಪ್ಪನ ಯಾವ ಆಸ್ತಿ ಇಲ್ಲ. ಆದರೆ ವಿದ್ಯಾನಗರ ಶನಿವಾರದ ಆಜೂಬಾಜುವಿನಲ್ಲಿ ಆರಂಭವಾಗಲಿದೆ ಎಂದರು.

ಮುಚ್ಚಬೇಕಿದ್ದ ವಿಐಎಸ್ ಎಲ್ ನ್ನ ಮುಚ್ಚದಂತೆ ಇಷ್ಟು ವರ್ಷ ಎಳೆದುಕೊಂಡು ಬಂದಿರುವೆ. ಎಂಎಸ್ ಐ ಎಲ್ ನ್ನ‌ಕೊನೆ ಮೊಳೆ ಹೊಡೆದಿದ್ದೀರಿ. ಯಾಕೆ ಆರಂಭಿಸಿಲ್ಲ. ಇದನ್ನ ಪ್ರಶ್ನಿಸಬೇಕಿದ್ದ ಆಯನೂರು ಯಾಕೆ ಸುಮ್ಮನಿದ್ದಾರೆ. ಬಂಡವಾಳ ಹಿಂಪಡೆದ ನಂತರ ಸರ್ಕಾರ ಲಿಖಿತ ರೂಪದಲ್ಲಿ ನೀಡಿದ್ದಾರೆ. ಗೃಹಸಚಿವ ಅಮಿತ್ ಶಾ, ಮೊದಲ ಬಾರಿಗೆ ಜಗಯೋತಿರಾಧಿತ್ಯ ಸಿಂದ್ಯರಿಗೆ 13/1/24 ಕ್ಕೆ ಭದ್ರಾವತಿ ವಿಐಎಸ್ ಎಲ್ ಪುನಶ್ಚೇತನಗೊಳಿಸಲು ಪತ್ರ ಬರೆದಿದ್ದಾರೆ. ಅಮಿತ್ ಬಂಡವಾಳ ಹಿಂತೆಗೆತದ ಸಮಿತಿಯಲ್ಲಿರುವವರು ಎಂದರು.

ಪತ್ರ ವ್ಯವಹಾರದಲ್ಲಿ ನಾಟಕೀಯ ಎಂದು ಆಯನೂರು ಹೇಳಿದ್ದಾರೆ. ಕೈಗಾರಿಕೆಯನ್ನ‌ ಒಂದು ಒಳ್ಳೆ ಅಂತ್ಯ ಕಾಣಿಸುವ ಗುರಿ ಇದೆ. ಗುರಿ ಮುಟ್ಟುತ್ತೇವೆ. ನಮ್ಮ‌ಪಕ್ಷದಲ್ಲಿ ಇದ್ದಾಗ ನಮ್ಮ ಪಕ್ಷವನ್ನ ಹೊಗಳಿದ ನೀವು ಪಕ್ಷ ಬದಲಿಸಿದಾಗ ಮಾತು ಬದಲಿಸುವ ಅವಶ್ಯಕತೆ ನಿಮಗಿದೆ ನಮಗಿಲ್ಲ ಎಂದರು.

ಮಲವಗೊಪ್ಪದ ಸಂಪೂರ್ಣ ಆಸ್ತಿ ಶುಗರ್ ಫ್ಯಾಕ್ಟರಿ ಆಸ್ತಿಯಲ್ಲಿದೆ. ಅದು ರಾಜ್ಯ ಸರ್ಕಾರದ ಕೆಲಸವಾಗಿದೆ. ಭೂಸ್ವಾಧೀನ ಸಮಸ್ಯೆಯಿಂದ ಹಿಂದೇಟು ಹೊಡೆದಿದೆ. ಮಧು ಬಂಗಾರಪ್ಪ ಮತ್ತು‌ಕಾಂಗ್ರೆಸ್ ಪಕ್ಷದವರು ಮುಂದಿನ ದಿನಗಳನ್ನ‌ಎಲ್ಲವನ್ಬೂ ಬಿಚ್ಚಿಡುತ್ತೇನೆ ಎಂದಿದ್ದಾರೆ. ಅವರಿಗೆ ಬಿಚ್ಚಿಡುತ್ತೇನೆ ಎಂದು ಹೇಳುವುದು ಅಭ್ಯಾಸವಾಗಿದೆ. ಮೊದಲು ಬಿಚ್ಚಿಡಿ ಎಂದರು.

ಶಿವಮೊಗ್ಗದ ಬೈಪಾಸ್ ಪಿಎಂ ಕಚೇರಿಯಲ್ಲಿ ಚರ್ಚೆ ಆಗ್ತಾ ಇದೆ. ಕಾಙಗ್ರೆಸ್ ಸರ್ಕಾರ ಹೋದಾಗ ಉದಾಸಿ ಪಿಡಬ್ಲೂಡಿ ಸಚಿವರಾಗಿದ್ದಾಗ ವರ್ಲ್ಡ್ ಬ್ಯಾಂಕ್ ರೂಪದಲ್ಲಿ ಹಣ ತರಲಾಗಿತ್ತು.‌ ಈಗ ರಾಜ್ಯ ಸರ್ಕಾರ ಶಿಕಾರಿಪುರ ರಸ್ತೆಯಲ್ಲಿ ಟೋಲ್ ನಿರ್ಮಿಸಲಾಗುತ್ತಿದೆ. ಆಗ ನಾವು ಬೇಡ ಎಂದಿದ್ದವಿ ಎಂದರು.‌

ಇದನ್ನೂ ಓದಿ-https://suddilive.in/archives/8951

Related Articles

Leave a Reply

Your email address will not be published. Required fields are marked *

Back to top button