ರಾಜಕೀಯ ಸುದ್ದಿಗಳು

ನನ್ನನ್ನ ತುಳಿಯುವ ಯತ್ನ ಮಾಡಲಾಗಿತ್ತು.ಸಿಡಿದೆದ್ದೇನೆ-ಸಮುದಾಯಕ್ಕಾಗಿ ಹೋರಾಡುವೆ-ಯತ್ನಾಳ್

ಸುದ್ದಿಲೈವ್/ಶಿವಮೊಗ್ಗ

ಸಮುದಾಯದ ಭವಿಷ್ಯದ ಸಲುವಾಗಿ ಹೋರಾಟ ಮಾಡಾಗುತ್ತಿದೆ. ಅಯೋಧ್ಯ ಮಂದಿರ ನಿರ್ಮಾಣದ ಹೋರಾಟ ಎರಡು ಮೂರು ವರ್ಷದ ಹೋರಾಟವಲ್ಲ. ಅದು ಶತಮಾನಗಳ ಹೋರಾಟವಾಗಿದೆ ಅದರಂತೆ ನಮಗೆ ಮೀಸಲಾತಿ ನೀಡುವ ಹೋರಾಟನಡೆಸೋಣ ಎಂದು ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ಅವರು ಪಂಚಮಸಾಲಿ ಲಿಂಗಾಯಿತರಿಗೆ 2 ಎ ಮೀಸಲು ನೀಡುವಂತೆ ನಡೆದ‌ ಹೋರಾಟದಲ್ಲಿ ಮಾತನಾಡಿ, ನಾವು ಹಿಂದೂ ಗಳಲ್ಲ ಎಂದು ಹೇಳಲಾಗುತ್ತಿತ್ತು. ಇದೆಂತ ದೌರ್ಭಾಗ್ಯ ಎಂದ ಯತ್ನಾಳ್ ನಾವು ಮೊದಲು ಹಿಂದೂ ಆ ನಂತರ‌ ಪಂಚಮಸಾಲಿ ಲಿಂಗಾಯತರು ಎಂದರು.

ಪಂಚಮಸಾಲಿ ಮೀಸಲಾತಿ ನೀಡುವ ಹೋರಾಟ ತಡೆಯುವ ಪ್ರಯತ್ನ ನಡೆಯಿತು. ಒಬ್ಬ ಮಂತ್ರಿ ಪತ್ರ ತೆಗೆದುಕೊಂಡು 10ಕೋಟಿ ಕೊಡಲು ಜಯಮೃತ್ಯುಂಜಯ ಸ್ವಾಮೀಜಿಗೆ ಕೊಡಲು ಬಂದಿದ್ದರು.ಸ್ವಾಮೀಜಿ ಸಮುದಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಹಣವನ್ನ ತಿರಸ್ಕರಿಸಿದರು. ನಾನು ಯಾವುದೇ ಲಾಭಿ ಮಾಡಿ‌ ಸ್ಥಾನ ಮಾನ ಪಡೆಯೊಲ್ಲ. ನನ್ನ ಎಂಎಲ್ಎ ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನ ನಡೆದಿತ್ತು ಎಂದರು.

ಆದರೆ ಜನ ಅವರವನ್ನ ಹಣ ಪಡೆದು ನನ್ನ ಬೆನ್ನಿಗೆ ನಿಂತರು. ಈಹೋರಾಟ ಯಾವುದೇ ನಾಯಕತ್ವ ಕೊಡಿಸುವ ಹೋರಾಟ ಅಲ್ಲ. ನನಗೂ ಶಿವಶಂಕರ್ ಗೆ ಮೀಸಲಾತಿ ಬೇಡ. ನಮ್ಮ ಸಮುದಾಯಕ್ಕೆ ಬೇಕಾದ ಹೋರಾಟ ಎಂದರು.

ಮೈಸೂರಿನಲ್ಲಿ ಗೌಡ ಲಿಂಗಾಯತ, ಧೀಕ್ಷಿತ್ ಲಿಂಗಾಯತರು ಇದ್ದಾರೆ. ಸಮಾಜ‌ ಹೊಡೆಯಲು‌ ಬಂದಿಲ್ಲ. ಲಿಂಗಾಯಿತರು ಅಲ್ಲದವರುಲಿಂಗಾಯಿತ ನಾಯಕರಾಗಿದ್ದಾರೆ. ನನನ್ನ‌ಮನೆಯಲ್ಲಿ ಕೂರಿಸುವ ಯತ್ನವೇ ನಿರಂತರವಾಗಿದೆ. ಲಿಂಗಾಯಿತರಿಗೆ ಒಬಿಸಿ ಕೊಡಿ ಮತ್ತು‌ಕುರುಬರಿಗೆ ಎಸ್ ಟಿ ಮೀಸಲಾತಿ ಕೊಡಿ ಎಂದರು.

ಕೆಲ ಮಾಧ್ಯಮದವರು ಯತ್ನಾಳ್ ವಿರುದ್ಧ ಬರೆಯುವುದೆ ಕಾಯಕ. ನಮಗೆ ಏನು ಬೇಡಸಮುದಾಯದಕ್ಕೆ ಅನ್ಯಾಯವಾಗಿದೆ ಕೊಡಿ ಎಂದಿದ್ದೇನೆ. ಅಟಲ್ ಇದ್ದಾಗ ನಾನು ಏನು ಕೇಳಿರಲಿಲ್ಲ. ಅವರೆ ಕರೆದು‌ ಸ್ಥಾನ ಮಾನ ಕೊಟ್ಟರು. ನನ್ನ ವಿರೋಧಿಗಳು ಹೊರಹಾಕುವ ಪ್ರಯತ್ನ ಮಾಡಿದ್ದರು. ಆದರೆ ಮೇಲಿನ ನಾಯಕರು ಕೈಬಿಡಲಿಲ್ಲ.

ನಮ್ಮ ಹೋರಾಟದ ಬಗ್ಗೆ ವಿರೋಧಿಗಳು ವಿಫಲವಾಗಿದೆ‌ ಹೋರಾಟ ಎಂದು ಮಾಧ್ಯಮಗಳಲ್ಲಿ ಬರೆಸಲಾಗುತ್ತದೆ. ಶಿವಮೊಗ್ಗಕ್ಕೆ ಬಹಳ ಬಾರಿ ಬಂದಿದ್ದೆ. ನಾನು ಶಿವಮೊಗ್ಗಕ್ಕೆ ಬಂದರೆ ಭಯೋತ್ಪಾದಕನ ರೀತಿ ಬಿಂಬಿಸಲಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನ ಮುಖಂಡರು ಬಿಜೆಪಿ ರ್ಕಾರ ಇದ್ದಾಗ‌ಆ್ಟಿವ್ ಇದ್ದರು. ಈಗ ನಮ್ಮದೇ ಸರ್ಕಾರ ಇದೆ. ಹೇಗೆ ಮಾತನಾಡುವುದು ಎನ್ನುತ್ತಾರೆ. ಆಗ ನನಗೆ ಆಸೆ ಇರಲಿಲ್ಲ. ನಾನು ಬೊಮ್ಮಾಯಿಗೆ‌ ಒತ್ತಾಯಿದಿರಲಿರಲಿಲ್ವಾ? ಲೋಕ ಸಭೆ ಚುನಾವಣೆ ಒಳಗೆ ಮೀಸಾತಿ ಘೋಷಿಸಲಿಲ್ಲ ಎಂದರೆ ಚುನಾವಣೆಯಲ್ಲಿ ಏನು‌ಮಾಡಬೇಕು‌ ಮಾಡುತ್ತೇನೆ ಎಂದರು.

ಸದನದಲ್ಲಿಯೂ ನಾನು ಸಿಎಂ ಸಿದ್ದರಾಮಯ್ಯರಿಗೆ ಪ್ರಶ್ನಿಸುವೆ. ಸರಿಯಾಗಿ ಉತ್ತರಕೊಡಲಿಲ್ಲ ಎಂದರೆ ಹೋರಾಟ ಅನಿವಾರ್ಯ. ಹೋರಾಟ ಹತ್ತಿಕ್ಕಲು ಪೊಲೀಸ್ ಅಧಿಕಾರಿಯನ್ನ ಕಳುಹಿಸಿದ್ದರು. ಆ ಅಧಿಕಾರಿ ನನ್ನನ್ನ ಬಂಧಿಸುವುದಾಗಿ ಹೇಳಿದ್ದ. ಬಂ್ಇಸು ಏನು ಆಗಿರ್ತಾ ಮುಂದಿನ ದಿನಗಳಲ್ಲಿ ನೋಡು ಎಂದಿದ್ದರು. ಆ ಅಧಿಕಾರಿ ಯಾರು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button