ಕ್ರೈಂ ನ್ಯೂಸ್

ಅಂತೂ ಇಂತೂ…KSRTC ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾಗಳು ಇಲ್ಲ, ಈ ಹಿನ್ನಲೆಯಲ್ಲಿ ಕಳವು ಪ್ರಕರಣಗಳು ಪತ್ತೆಯಾಗುತ್ತಿಲ್ಲ ಎಂಬ ಸುದ್ದಿಲೈವ್ ಅಭಿಯಾನಕ್ಕೆ ಕೊನೆಗೂ ಯಶಸ್ವಿ ದೊರೆತಿದೆ.

ಈ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲಾಡಳಿತವೇ ಕ್ರಮ ಜರುಗಿಸಿದೆ. ಇದರ ಪರಿಣಾಮ 8 ಹೆಚ್ಚುವರಿ ಕ್ಯಾಮೆರಾಗಳು ಅಳವಡಿಕೆಯಾಗುತ್ತಿದೆ. ಈಗಾಗಲೇ 8 ಕ್ಯಾಮೆರಾಗಳ ಇದ್ದರೂ ಇವುಗಳಲ್ಲಿ 5 ಕ್ಯಾಮೆರಾಗಳು ವರ್ಕ್ ಮಾಡುತ್ತಿವೆ. ವರ್ಕಿಂಗ್ ನಲ್ಲಿರುವ ಕ್ಯಾಮೆರಾಗಳು  ಬಸ್ ಗಳನ್ನ ಹತ್ತುವ ಪ್ರಯಾಣಿಕರನ್ನ ತೋರಿಸುತ್ತಿರಲಿಲ್ಲ.

ಇದಕ್ಕೆ ಈ ಐದರ ನಡುವೆಯೂ ಹೆಚ್ಚುವರಿಯಾಗಿ 8 ಕ್ಯಾಮೆರಾಗಳು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಪೊಲೀಸ್ವಮತ್ತು ಕೆಎಸ್ ಆರ್ ಟಿ ಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಭೆಯಲ್ಲೇ 8 ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನ‌ ಅಳವಡಿಸಲು ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ.

ಡಿಸಿ ನೇತೃತ್ವದಲ್ಲಿ ನಡೆದ ಸಭೆಗೆ ಕೊನೆಗೂ ಅಂತ್ಯ ಹಾಡುವ ಮೊದಲ ಹೆಜ್ಜೆ ಗೋಚರಿಸುತ್ತಿದೆ.  ಇಂದು ಸಹ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಬಸ್ ನಿಲ್ದಾಣದ ಕಳುವು ಪ್ರಕರಣಗಳ ಪತ್ತೆಯ ಕುರಿತು ಮಾತನಾಡಿದ್ದಾರೆ. ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಪತ್ತೆಹಚ್ಚಲು ಕಷ್ಟವಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ವಿಂಗ್ ರಚಿಸಲಾಗಿದ್ದು ಈ ವಿಂಗ್ ಫುಲ್ ಆಕ್ಟಿವ್ ಆಗಿದೆ. ಪ್ರಕರಣಗಳನ್ನ ಪತ್ತೆ ಮಾಡುವುದಾಗಿ ಹೇಳಿದ್ದಾರೆ.

17 ಬೈಕ್ ಪತ್ತೆಗೆ ಈ ವಿಂಗೇ ಕಾರಣ ಎಂದು ಎಸ್ಪಿ ಹೇಳಿದ್ದಾರೆ.  ಕಠಿಣ ಕಾರ್ಯಾಚರಣೆಗೆ ಈ ವಿಂಗ್ ನಿಂದ ಪತ್ತೆಹಚ್ಚಲಾಗುವುದಾಗಿ ತಿಳಿಸಿದ್ದಾರೆ. ಮಾಹಿತಿ ಪ್ರಕರಣ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಈ ವರ್ಷ 23 ಕಳವು ಪ್ರಕರಣಗಳು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದರಲ್ಲಿ ಪತ್ತೆಯಾದ ಪ್ರಕರಣ ವಿರಳವಾಗಿದೆ.

ಶಕ್ತಿಯೋಜನೆಯಿಂದಾಗಿ ಬಸ್ ನಿಲ್ದಾಣದಲ್ಲಿ ಕಳವು ಪ್ರಕರಣ ಹೆಚ್ಚಾಗಿದೆ ಎನ್ನಬಹುದು. ಅಧಿಕ ರಶ್ ನಿಂದಾಗಿ ಕಳುವು ಹೆಚ್ಚಾಗಿದೆ. ಇದಕ್ಜೆ ಪುಷ್ಠಿ ನೀಡುವಂತೆ ಕಳೆದ ವರ್ಷ 12 ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದವು. ಆದರೆ ಈ ವರ್ಷ ಡಬ್ಬಲ್ ಆಗಿದೆ.

ಇದನ್ನೂ ಓದಿ-https://suddilive.in/archives/4801

Related Articles

Leave a Reply

Your email address will not be published. Required fields are marked *

Back to top button