ರಾಜಕೀಯ ಸುದ್ದಿಗಳು

ಶಾಸಕ ಚೆನ್ನಬಸಪ್ಪ, “ಪುಣ್ಯಾತ್ಮನೂ” ಗೆಲ್ಲಲ್ಲ ಎಂದಿದ್ದು ಯಾರಿಗೆ?

ಸುದ್ದಿಲೈವ್/ಶಿವಮೊಗ್ಗ

ಪುಣ್ಯಾತ್ಮನೂ ಗೆಲ್ಲಲ್ಲ ಎನ್ನುವ ಮೂಲಕ ತಮ್ಮ ಗುರುಗಳಾದ ಮಾಜಿ ಡಿಸಿಎಂ ಕೆ.ಎಸ್ ಈಸ್ವರಪ್ಪನವರಿಗೆ ಶಾಸಕ ಚೆನ್ನಬಸಪ್ಪ ಟಕ್ಕರ್ ನೀಡುದ್ರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ.

ಅವರು ನಗರದ ಸೈನ್ಸ್ ಮೈದಾನದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿ,  ಹಿಂದೂಸ್ಥಾನ್ ಜಿಂದಾಬಾದ್ ರಾಘಣ್ಣ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ಸಮಾವೇಶ ಭರ್ಜರಿಯಾಗಿ ನಡೆದಿತ್ತು.

ಈ ಘೋಷಣೆ ಕೂಗನ್ನ ಕೇಳಿಸಿಕೊಂಡ ಶಾಸಕ ಚೆನ್ನಬಸಪ್ಪ ಈ ಘೋಷಣೆ ಮೊಳಗಿದ ಮೇಲೆ ಗೀತಕ್ಕನೂ ಬರೊಲ್ಲ, ಪುಣ್ಯಾತ್ಮನೂ ಬರೊಲ್ಲ ಎನ್ನುವ ಮೂಲಕ ರಾಜಕೀಯ ಗುರು ಈಶ್ವರಪ್ಪನವರಿಗೆ ಠಕ್ಕರ್ ನೀಡುದ್ರಾ ಎಂಬ ಭಾವನೆ ಮೂಡಿದೆ. ಈ ಪುಣ್ಯಾತ್ಮ ಯಾರು ಎಂದು ಸ್ಪಷ್ಟಪಡಿಸದ ಕಾರಣ  ಕುತೂಹಲ ಮೂಡಿಸಿದೆ. ರಾಜಕೀಯ ಗುರುಗಳಿಗೆ ಉಲ್ಲೇಖವಾ ಎಂಬ ಅನುಮಾನ ಹುಟ್ಟಿಸಿದೆ.

ಕಾರ್ಯಕರ್ತರ ಪಾರ್ಟಿ ಬಿಜೆಪಿ, ಕಾರ್ಯಕರ್ತನಿಗೆ ಗೌರವವಿದೆ, ಕಾರ್ಯಕರ್ತ ಮಾಜಿ ಆಗಲು ಸಾಧ್ಯವಿಲ್ಲ ಕೆಬಿ ಅಶೋಕ್ ನಾಯ್ಕ್  ಗ್ರಾಮಾಂತರ ಭಾಗದ ಶಾಸಕರಾದಾಗ ಪುಸ್ತಕ ಬರೆಯುವ ಕೆಲಸ ಮಾಡಿದ್ದಾರೆ. ಬೂತ್ ಗೆದ್ದರೆ ದೇಶ ಗೆದ್ದಹಾಗೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರ ಕಾರ್ಯವೈಖರಿಯೇ ಬೇರೆ. ಬಿಜೆಪಿಯ ಶಾಸಕರಾಗಿದ್ದ ಅಶೋಕನಾಯ್ಕ್ ಈ ಬಾರಿ ಸೋತರು ಆದರೆ ದೈವ ಸಂಕಲ್ಪ ನಮ್ಮೊಂದಿಗೆ ಶಾರದಾ ಪೂರ್ಯನಾಯ್ಕ್ ನಮ್. ಜೊತೆ ಕೈಜೋಡಿಸಿದರು.

ಜ.22 ರಂದು ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿತು. ಹಿಂದೂಗಳು ಒಟ್ಟಾಗದೆ ಕಾರಣ ಸಂಸ್ಕೃತಿಯನ್ನ ಕಳೆದುಕೊಂಡಿದ್ದೇವೆ. ಹಿಂದೂ ಹಿಂದೂ ಹಿಂದೂಸ್ತಾನ್ ಗೋಲಿ ಮಾರ್ ಪಾಕಿಸ್ತಾನ್ ಎಂದಾಗ ಅಪರಾಧಿಗಳಾಗಿದ್ದ ದಿನಗಳಿದ್ದವು.

ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದಾಗ ಕಾಂಗ್ರೆಸ್ ಬಜಾವ್ ಮಾಡಲುಮುಂದಾಗಿತ್ತು. ಪಾಕಿಸ್ತಾನ್ ಜಿಂದಾಬಾದ್ ಕೂಗಿದವರನ್ನ ರಕ್ಷಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸ್ಕೃತಿ ಹೀನ ಪಕ್ಷವಾಗಿದೆ. ಮೊದಲಿನಿಂದಲೂ ಕಾಂಗ್ರೆಸ್ ದೇಶವಿರೋಧಿ ಕೆಲಸ ಮಾಡಿಕೊಂಡು ಬರ್ತಾ ಇದೆ ಎಂದು ದೂರಿದರು.

ಗಣಪತಿ ವಿಸರ್ಜನಾ ಸಙದರ್ಭದಲ್ಲಿ ಭಾಜಾಭಜಂತ್ರಿಯೊಂದಿಗೆ ಹೊರಟ ಶಿವಮೂರ್ತಿ, ಕಾಲೇಜಿನ‌ಪ್ರಾಂಶುಪಾಲರನ್ನ ಕೊಲೆ ಮಾಡಿದಾಗ ನಡೆದ ಹತ್ಯೆಗೆ ಕಾಂಗ್ರೆಸ್ ಕಾರಣ. ಎಲ್ಲಾ ಗ್ರಾಮಲ್ಲಿ ಕಮಲ ಮತ್ತು ಭಾಗವಾಧ್ವಜ ಹಾರಿಸಲು ಹಿಂದೂ ಸಂಘಟನಾಕಾರ್ಯಕರ್ತರು ಕಾರಣ ಎಂದರು.

ಧಾರ್ಮಿಕ ಕೇಂದ್ರಗಳ ಮುಂದೆ ಭಾಜಾಭಜಂತ್ರಿಯನ್ನ ತೆಗೆದುಕೊಂಡು ಹೋಗಬಾರದು ಎಂದು ನ್ಯಾಯಾಲಯಕ್ಕೆ ಹೋದ ಉದಾಹರಣೆಯೂ ಇದೆ. ನ್ಯಾಯಾಲಯಕ್ಕೆ ಹೋಗಿ ಸೋತಿದ್ದು ಇದೆ ಎಙದು ಹೇಳಿದರು.

ಇದನ್ನೂ ಓದಿ-https://suddilive.in/archives/11890

Related Articles

Leave a Reply

Your email address will not be published. Required fields are marked *

Back to top button