ರಾಜಕೀಯ ಸುದ್ದಿಗಳು

ಮೋದಿಯ ಮಾಂಗಲ್ಯ ಹೇಳಿಕೆ, ಈಶ್ವರಪ್ಪ, ಸಂಸದ ರಾಘವೇಂದ್ರ ವಿರುದ್ಧ ಸಚಿವ ಮಧು ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ನಾಮಪತ್ರ ಹಿಂಪಡೆಯಲು ನಿನ್ನೆ ಕಡೆಯ ದಿನವಾಗಿದ್ದು, ಗೀತಾ ಶಿವರಾಜ್ ಕುಮಾರ್ ಅವರಿಗೆ ಕ್ರಮ ಸಂಖ್ಯೆ ಒಂದು ಸಿಕ್ಕಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳಿಗೆ ಮಾತನಾಡಿ,  ಗೀತಕ್ಕ ಪರ ಉತ್ತಮವಾದ ಚುನಾವಣೆ ಪ್ರಚಾರ ಲಭಿಸಿದೆ. ಗೀತಕ್ಕ ಮತ್ತು ಶಿವಣ್ಣ ಇಬ್ಬರು ಇದುವರೆಗೂ ಮೂರುವರೆ ಲಕ್ಷ ಜನರ ಭೇಟಿ ಮಾಡಿದ್ದಾರೆ.‌ಬರುವ 12 ದಿನ ಇನ್ನೂ ಲಕ್ಷಾಂತರ ಜನರನ್ನೂ ಸಂಪರ್ಕ ಮಾಡುತ್ತಾರೆ. ಗೀತಕ್ಕ ಗೆಲ್ಲುವುದು ಗ್ಯಾರಂಟಿ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಹೆಗ್ಗಣ ಹಿಡಿದುಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವು ವಿಚಾರಕ್ಕೆ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿದೆ. ಈಶ್ವರಪ್ಪ ಅವರಿಗೆ ವಯಸ್ಸು ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಈಶ್ವರಪ್ಪ ಅವರು ಪದೇ ಪದೇ ಡಮ್ಮಿ ಅಭ್ಯರ್ಥಿ ಟೀಕೆ ವಿಚಾರಕ್ಕೆ ವಾಗ್ದಾಳಿ ನಡೆಸಿದ ಸಚಿವರು, ಈಶ್ವರಪ್ಪ ಗಂಡಸು ಆದರೆ… ಅವರಿಗೆ ಮಗನಿಗೆ ಟಿಕೆಟ್ ಕೊಡಿಸುವ ಯೋಗ್ಯತೆ ಇಲ್ಲ. ಈಶ್ವರಪ್ಪ ಒಬ್ಬ ಕೀಳುಮಟ್ಟ ರಾಜಕಾರಣಿ. ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅಂತಾ ಈಶ್ವರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಗೀತಕ್ಕ ತಂಟೆಗೆ ಬಂದರೆ ಅವರ ಅಭಿಮಾನಿಗಳೇ ಬ್ರೇಕ್ ಹಾಕ್ತಾರೆ ಎಂದು ಆರೋಪಿಸಿದರು.

ನಾಲಿಗೆಗೆ ಮೇಕಪ್ ಹಾಕಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಮಾತನಾಡುತ್ತಾರೆ ಎಂಬ ಈಶ್ವರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು ಈಶ್ವರಪ್ಪ ಅವರು ಒಬ್ಬ ಹೇಸಿಗೆ ಮನುಷ್ಯ, ನೀವು ಗಂಡಸು ಆಗಿದ್ದರೆ ಒಬ್ಬ ಲೀಡರ್ ಆಗಿದ್ದರೆ, ಇಡೀ ರಾಜ್ಯದ ಜನರು ಉಳಿಸುತ್ತಿದ್ದರು ಎಂದು ದೂರಿದರು.

ಈಶ್ವರಪ್ಪನವರಿಗೆ ಅವರ ಮಗನಿಗೆ ಟಿಕೆಟ್ ತೆಗೆದುಕೊಳ್ಳಲು ಆಗಲಿಲ್ಲ. ರಾಜಕೀಯ ಮಾಡುವ ಯೋಗ್ಯತೆ ಇಲ್ಲ.ಈಶ್ವರಪ್ಪ ಅವರಿಗೆ ಮಾನ ಮರ್ಯಾದೆ ಇಲ್ಲ. ಬಿಜೆಪಿ ಹೊಲಸನ್ನು ನಮ್ಮ ಕಾಂಗ್ರೆಸ್ ಮೇಲೆ ಹಾಕಿ ತಂಟೆಗೆ ಬರಬೇಡಿ ಎಂದು ಎಚ್ಚರಿಸಿದರು.

ನಿಮ್ಮ ಮುಖಕ್ಕೆ ಎಷ್ಟು ಮತ ಬೀಳುತ್ತದೆ… ಕಾದು ನೋಡಿ… ಫಲಿತಾಂಶ ಬರುತ್ತದೆ. ಈ ಚುನಾವಣೆಯಲ್ಲಿ ರಾಘವೇಂದ್ರ ಮತ್ತು ಈಶ್ವರಪ್ಪ ಇಬ್ಬರನ್ನು ಗೀತಕ್ಕ ಸೋಲಿಸುತ್ತಾರೆ ಎಂದ ಮಧು ಬಂಗಾರಪ್ಪ ಮೋದಿ ವಿರುದ್ಧನೂ  ವಾಗ್ದಾಳಿ ನಡೆಸಿದರು.

ಮಾಂಗಲ್ಯ ಕುರಿತು ಮೋದಿ ಹೇಳಿಕೆಗೆ ಮಧು ತಿರುಗೇಟು ನೀಡಿದ ಅಟ ಅವರು, ಮೋದಿ ಅವಧಿಯಲ್ಲಿ ಹೆಚ್ಚು ಅಪರಾಧ ಕೇಸ್ ನಡೆದಿವೆ ಎಂದರು.

ಈಶ್ವರಪ್ಪ ಕಸ ಇದ್ದಂಗೆ, ಅವರನ್ನು ಅದೇ ರೀತಿ ನೋಡಬೇಕು. ಮೋದಿ ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ. ಪವಿತ್ರವಾದ ತಾಳಿಯನ್ನು ಕೀಳುಮಟ್ಟದ ರಾಜಕಾರಣಕ್ಕೆ ಮೋದಿ ತಂದಿದ್ದಾರೆ. ಭಾರತಾಂಬೆ ಎನ್ನುವ ಬಿಜೆಪಿ ನಾಯಕರು ಇದಕ್ಕೆ ಉತ್ತರ ಕೊಡಬೇಕು. ಮೋದಿ ಮಾಂಗಲ್ಯ ಹೇಳಿಕೆಗೆ ಬಿಜೆಪಿ ನಾಯಕರು ಯಾವ ರೀತಿ ಸಮರ್ಥನೆ ಮಾಡುತ್ತಾರೆ. ನಾನು ಬಿಜೆಪಿ ನಾಯಕರಿಗೆ ಸವಾಲು ಹಾಕ್ತೀನಿ ಮೋದಿಯ ಮಾಂಗಲ್ಯದ ಹೇಳಿಕೆಗೆ ಉತ್ತರ ಕೊಡಿ ಎಂದರು.

ಇದನ್ನೂ ಓದಿ-https://suddilive.in/archives/13493

Related Articles

Leave a Reply

Your email address will not be published. Required fields are marked *

Back to top button