ರಾಜಕೀಯ ಸುದ್ದಿಗಳು

ಈಶ್ವರಪ್ಪನವರ ಸೊಸೆಯಿಂದ ಭರ್ಜರಿ ಮತಯಾಚನೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ಮೊದಲನೇ ಹಂತದ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಎರಡನೇ ಹಂತದ ಚುನಾವಣೆಗೆ ಉಳಿದ 14 ಕ್ಷೇತ್ರದಲ್ಲಿ ಅಖಾಡ ಸಿದ್ದವಾಗಿದೆ. ಅದರಂತೆ ಶಿವಮೊಗ್ಗದಲ್ಲಿ ಸಿದ್ದವಾಗಿರುವ ಅಖಾಡದಲ್ಲಿ 23 ಜನ ಅಭ್ಯರ್ಥಿಗಳು ಉಳಿದಿದ್ದಾರೆ.

23 ಜನರಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಪ್ರಚಾರದಲ್ಲಿ ಪ್ರಮುಖರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಲ್ಲಿ ಈಶ್ವರಪ್ಪನವರು ಸಹ ಭರ್ಜರಿ ಪ್ರಚಾರದಲ್ಲಿ ಮುಂದಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೈಚಳಿ ಬಿಟ್ಟು ಉಳಿದ 10 ದಿನಗಳಲ್ಲಿ ಪ್ರಚಾರಕ್ಕೆ ಧುಮಿಕಿದ್ದಾರೆ.

ಅದರಂತೆ ವಾರ್ಡ್ ನಂಬರ್ 2 ರಲ್ಲಿ ಈಶ್ವರಪ್ಪನವರ ಸೊಸೆ ಶಾಲಿನಿ ಅವರಿಂದ ಭರ್ಜರಿ ಮತಯಾಚನೆಯಾಗಿದೆ. ಮನೆ ಮನೆಗೆ ತೆರಳಿದ ಶಾಲಿನಿ ಕಾಂತೇಶ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಈಶ್ವರಪ್ಪನವರ ಸೊಸೆ ಶಾಲಿನಿ ಕಾಂತೇಶ್, ಈಶ್ವರಪ್ಪನವರ ಮಗಳಾದ ಜ್ಯೋತಿ, ಸುಮಾ  ಹಾಗೂ ಕುಟುಂಬಸ್ಥರು ಮತ್ತು ಕಾರ್ಯಕರ್ತರೊಂದಿಗೆ  ಪ್ರಚಾರಕ್ಕೆ ಇಳಿದಿರುವ ಸೊಸೆ ಮಾವನವರ ಚಿಹ್ನೆ, ಮತ್ತು ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರೊಂದಿಗೆ ಮಾತನಾಡಿ ಮತಯಾಚಿಸಿದ್ದಾರೆ.

ಇಂದು ಈಶ್ವರಪ್ಪ ಸಾಗರದಲ್ಲಿ ಪ್ರಚಾರದಲ್ಲಿ ಇದ್ದಾರೆ. ಅವರ ಕುಟುಂಬ ಶಿವಮೊಗ್ಗದ ವಾರ್ಡ್ ಗಳಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ.

ಸುದ್ದಿಲೈವ್ ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಸೊಸೆ  ಪ್ರಚಾರದಲ್ಲಿ  ಜನರ ಸ್ಪಂದನೆ ತುಂಬಾ ಚೆನ್ನಾಗಿದೆ. ನಾವು ಹೇಳುವ ಮುಂಚೆ ಅವರೇ ಚಿಹ್ನೆ ಮತ್ತು ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ. ಮವನವರನ್ನ ಅಪ್ಪಾಜಿ ಎಂದು ಕರೆಯುವ ಸೊಸೆ ಶಾಲಿನಿ ಅಪ್ಪಾಜಿ  ಗೆದ್ದು ಮತ್ತೆ ಮೋದಿಯವರ ಕೈ ಬಲಪಡಿಸಲಿದ್ದಾರೆ.

ಅಪ್ಪಾಜಿ ಹೇಳುವ ಹಾಗೆ ನಾವು ಗೆದ್ದು ಬಿಜೆಪಿ ಪಕ್ಷಕ್ಕೆ ಹೋಗುತ್ತೇವೆ. ಪಕ್ಷ ಅವರ ತಾಯಿ ಇದ್ದ ಹಾಗೆ  ಗೆದ್ದ ತಕ್ಷಣ ಅವರು ಮೋದಿಗೆ ಬೆಂಬಲ ಸೂಚಿಸುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/13734

Related Articles

Leave a Reply

Your email address will not be published. Required fields are marked *

Back to top button