ಕ್ರೈಂ ನ್ಯೂಸ್

ಜಿಂಕೆ ಶಿಕಾರಿ-ಮೂವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಸುದ್ದಿಲೈವ್/ಶಿವಮೊಗ್ಗ

ಜಿಂಕೆ ಶಿಕಾರಿ ಮಾಡಿದ್ದ ಮೂವರನ್ನ ಅರಣ್ಯ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಉಂಬಳೇಬೈಲು ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಜಿಂಕೆ ಶಿಕಾರಿ ಮಾಡಿದ ಕಾರಣ 03 ಜನ ಆರೋಪಿಗಳ ವಿರುದ್ಧ ವನ್ಯಜೀವಿ ಮೊಕದ್ದಮೆಯನ್ನು ದಾಖಲಿಸಿ, ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ.

ಸೆರೆಸಿಕ್ಕವರನ್ನ ಉಂಬಳೇಬೈಲು ಗ್ರಾಮದ A1. ಹನುಮಂತಪ್ಪ s/o ತಿಮ್ಮಪ್ಪ, A2. ಅಂಜನಪ್ಪ s/o ತಿಮ್ಮಪ್ಪ, A3. ರಾಮ s/o ತಿಮ್ಮಾಭೋವಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕಾರ್ಯಾಚರಣೆಯಲ್ಲಿ ಭದ್ರಾವತಿ ಡಿಸಿಎಫ್‌ ಶ್ರೀ ಆಶಿಶ್ ರೆಡ್ಡಿ, IFS ಹಾಗೂ ಶ್ರೀಮತಿ ರತ್ನಪ್ರಭ, ACF ರವರ ಮಾರ್ಗದರ್ಶನದಲ್ಲಿ ಉಂಬಳೇಬೈಲು RFO ಶ್ರೀ ಎಸ್.ಎಂ ಶಿವರಾತ್ರೆಶ್ವರ ಸ್ವಾಮಿ, ಶ್ರೀ ಪವನ್ ಮಹೇಂದ್ರಕರ್ DyRFO, ಶ್ರೀ ಗಿಡ್ಡಸ್ವಾಮಿ DyRFO, ಗಸ್ತು ವನಪಾಲಕರಾದ ಶ್ರೀ ಸುನಿಲ್ ಸಾಸಲವಾಡ, ಶ್ರೀ ಮಾಲತೇಶ ಸೂರ್ಯವಂಶಿ, ಶ್ರೀ ಶ್ರೀಕಾಂತ್, ಶ್ರೀ ದಿನೇಶ, ಹಾಗೂ ಇತರೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/8872

Related Articles

Leave a Reply

Your email address will not be published. Required fields are marked *

Back to top button