ಅರಣ್ಯ ನಾಟ ಕಳ್ಳಸಾಗಾಣಿಕೆ ಮಾಲು ಸಮೇತ ಆರೋಪಿ ಬಂಧನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೊರವಲಯದಲ್ಲಿ ಅಮೂಲ್ಯ ಅರಣ್ಯ ನಾಟವನ್ನ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯೋರ್ವನನ್ನ ಅರಣ್ಯ ಇಲಾಖೆಯವರು ಬಂಧಿಸಿ 4 ಲಕ್ಷ ಮೌಲ್ಯದ ಬೀಟೆ ಮತ್ತು ಕರಿ ಮರವಮ್ನ ವಶಕ್ಕೆ ಪಡೆದಿದ್ದಾರೆ.
ಕರಿಮರ ತಮಿಳು ನಾಡಿನಲ್ಲಿ ಅಮೂಲ್ಯ ಮರವಾಗಿದ್ದು ಈಗ ನಶಿಸುವ ಹಂತತಲುಪಿದೆ ಅರಣ್ಯ ಸಂಪತ್ತಿನಲ್ಲಿ ಶೆಡ್ಯೂಲ್ಡ್ ಒನ್ ಆಗಿರುವುದರಿಂದ ಈ ಮರ ಹೆಚ್ಚಿನಮೌಲ್ಯ ಪಡೆದುಕೊಂಡಿದೆ.
ಸಯ್ಯದ ಅಜೀಜ್ ಉರ್ ರೆಹಮಾನ್ ಎಂಬ ಶಿವಮೊಗ್ಗದ ಲಷ್ಕರ್ ಮೊಹಲ್ಲಾ ನಿವಾಸಿ ನಿನ್ನೆ ಬೆಂಗಳೂರಿನಿಂದ ಹೊರಟು ಭದ್ರಾವತಿ ಮತ್ತು ಶಿವಮೊಗ್ಗಕ್ಕೆ ಮಾಲು ಸಪ್ಲೆ ಮಾಡಲು ಬುಲೆರೋ ಪಿಕಪ್ ವಾಹನದಲ್ಲಿ ಟರ್ಪಲ್ ಮುಚ್ಚಿಕೊಂಡು ಹೊಳೆಹೊನ್ನೂರು ರಸ್ತೆಗೆ ಬಂದಾಗ ಅರಣ್ಯ ಶಂಕರ ವಲಯದವರು ದಾಳಿ ನಡೆಸಿದ್ದಾರೆ.
ದಾಈಯಲ್ಲಿ ಒಟ್ಟು 32 ಬೀಟೆ ಮತ್ತು ಕರಿ ಮರ ಪತ್ತೆಯಾಗಿದೆ.ಪತ್ತೆಯಾದ ವಸ್ತುಗಳನ್ನ ಅರಣಗಯ ಇಲಾಖೆ ವಶಕ್ಕೆಪಡೆದಿದ್ದಾರೆ. ಈ ಆರೋಪಿಯು ಮರಳ್ಯ ಸಾಗರದ ಅರಣ್ಯ ಇಲಾಖೆಗೆ ನುಗ್ಗೆ ಸಿಬ್ಬಂದಿಯೋರ್ವನನ್ನ ಕೊಲೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಈಗ ಮತ್ತೆ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾನೆ.
ಇದನ್ನೂ ಓದಿ-https://suddilive.in/archives/2906
