ಕ್ರೈಂ ನ್ಯೂಸ್

ಅರ್ಧಂಬರ್ಧ ರಸ್ತೆ ಕಾಮಗಾರಿಗೆ ನಡೆಯಿತ ರಸ್ತೆ ಅಪಘಾತ?

ಸುದ್ದಿಲೈವ್/ಶಿವಮೊಗ್ಗ

ಕೊಮ್ಮನಾಳ್ ಬೂದಿಗೆರೆಯಿಂದ ಆನ್ವೇರಿಗೆ ಹೋಗುವ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಈ ಅಪಘಾತಕ್ಕೆ ರಸ್ತೆ ಅರ್ದಂಬರ್ಧ ಆಗಿರುವುದರಿಂದ ರಸ್ತೆ ಫಲಕಗಳನ್ನೂ ಸಹ  ನಿರ್ಮಿಸದೆ ಇರುವುದು ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ರಸ್ತೆ ನಿರ್ಮಾಣ ಆನ್ವೇರಿಯ ಬಳಿ  ಲಿಂಕ್‌ ಆಗಬೇಕಿದ್ದು ರಸ್ತೆ ಜೋಡಣೆಯಾಗುವ ಸ್ಥಳದಲ್ಲಿ ಸವಾರರಿಗೆ ನಾಮಫಲಕವನ್ನೂ ನಿರ್ಮಿಸಿಲ್ಲ. ಇದರಿಂದ ರಸ್ತೆ ಅಪಘಾತವಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.  ಲಿಂಗಾಪುರದಲ್ಲಿ ಮಾರಿಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಇಬ್ವರು ಅಪ್ರಾಪ್ತರು ಮತ್ತು ಇಬ್ವರಿಗೆ ಅಪಘಾತ ಸಂಭವಿಸಿದೆ.

ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಮೂವರು ಸವಾರರು ರಸ್ತೆ ಕಾಮಗಾರಿ ಆಗುತ್ತಿರುವ ಪಕ್ಕದಲ್ಲಿ ಸಂಚರಿಸಿ ಮುಖ್ಯ ರಸ್ತೆಯಲ್ಲಿ ಸಾಗಬೇಕಿತ್ತು. ಆದರೆ ಸೀದ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಸಾಗಿದ್ದರಿಂದ ಬಿದ್ದು ಗಾಯಗೊಂಡಿದ್ದಾರೆ.   ಮೂವರಲ್ಲಿ ಹನುಮಂತು ಎಂಬ ಯುವಕನಿಗೆ ತೀವ್ರತರನಾದ ಗಾಯವಾಗಿದೆ.

ಲಿಂಗಾಪುರದ ಜಾತ್ರೆ ಮುಗಿಸಿಕೊಂಡು ಆನ್ವೇರಿಯ ಬಳಿಯ ರಸ್ತೆಯಲ್ಲಿ ಬರುವಾಗ ಎದುರಿನಿಂದ ಬರುತ್ತಿದ್ದ ವಾಹನದ ಹೆಡ್ ಲೈಟ್ ನ ಬೆಳಕು ಕಣ್ಣಿಗೆ ಹೊಡೆಯುತ್ತಿದ್ದರಿಂದ ಮತ್ತು ರಸ್ತೆ ಕಾಮಗಾರಿಗಾಗಿ ಅಳವಡಿಸಬೇಕಿದ್ದ ನಾಮಫಲಕಗಳು ಇಲ್ಲದ ಕಾರಣ  ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಹನುಮಂತು ಕಾರ್ಮಿಕನಾಗಿದ್ದು ಮೆಗ್ಗಾನ್ ನಲ್ಲಿ ದಾಖಲಿಸಲಾಗಿದೆ. ಈತನ ಹಣೆಗೆ ಗಾಯವಾದಂತೆ ಕಂಡು ಬಂದಿದೆ. ಇನ್ನು ಇಬ್ಬರು ಅಪ್ರಾಪ್ತರನ್ನೂ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ-https://suddilive.in/archives/9933

Related Articles

Leave a Reply

Your email address will not be published. Required fields are marked *

Back to top button