ಕ್ರೈಂ ನ್ಯೂಸ್

ಹೋರಿ ಬೆದರಿಸುವ ಸ್ಪರ್ಧೆಗೆ ಮತ್ತೋರ್ವ ಯುವಕ ಬಲಿ

ಸುದ್ದಿಲೈವ್/ಶಿಕಾರಿಪುರ

ಹೋರಿ ಹಬ್ಬ ವೀಕ್ಷಿಸಲು ಹೋದ ಯುವಕನಿಗೆ ಹೋರಿ ತಿವಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದಲ್ಲಿ ಯುವಕ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಹೋಗಿದ್ದ ಯುವಕ ಪುನೀತ್ ಆಚಾರ್ ಎಂಬ ಯುವಕನಿಗೆ ಹೋರಿ ತಿವಿದಿದೆ.

ಹೋರಿ ತಿವಿತದಿಧಾಗಿ ಕುಸಿದುಬಿದ್ದ ಯುವಕನನ್ನ  ತಕ್ಷಣ  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದು ತರುವಾಗ ಆತ ಮಾರ್ಗ ಮದ್ಯದಲ್ಲಿಯೇ ಸಾವನ್ಬಪ್ಪಿದ್ದಾನೆ. ತಾಲೂಕಿನಲ್ಲಿ ಹೋರಿ ಹಬ್ಬಕ್ಕೆಇದು ಎರಡನೇ ಸಾವಾಗಿದೆ.

ಯುವಕ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿಯಾಗಿದ್ದಾನೆ. ಪುನೀತ್ ಆಚಾರ್ (19) ಪಟ್ಟಣದಲ್ಲಿ ಐಟಿಐ ನಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿನ್ನೆ ಕಲ್ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋರಿ ಸ್ಪರ್ಧೆ ವೀಕ್ಷಿಸಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ.

ಪುನೀತ್ ತಂದೆ ಗಜೇಂದ್ರ ಆಚಾರ್ ಹೋರಿ ಆಯೋಜಕರ ವಿರುದ್ಧ ಕ್ರಮ ಜರುಗಿಸುವಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ತರಲಘಟ್ಟದ ಯುವಕ‌ ಜನವರಿಯಲ್ಲಿ ಹೋರಿ ಹಬ್ಬ ನೋಡಲು ಹೋದ ಯುವಕ ಸಾವನ್ಬಪ್ಪಿದ್ದು ಆತನ ಬಡ ಕುಟುಂಬ ಬೀದಿಗೆ ಬಂದಿತ್ತು.

ಪ್ರತಿ ವರ್ಷ ಹೋರಿ ಹಬ್ಬದಲ್ಲಿ ಸಾವು ನೋವುಗಳು ಸಂಭವಿಸಿದರೂ ಸಾವಿನ ಬಗ್ಗೆ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ. ಆಯೋಜಕರ ಒತ್ತಡಕ್ಕೆ ಮಣಿದು ರಾಜಕೀಯ ವ್ಯಕ್ತಿಗಳು ಕಾನೂನು ಮೀರಿ ಬೆಂಬಲಿಸುತ್ತಿರುವ ಸಂಗತಿಗಳು ಕಂಡು ಬರುತ್ತಿದೆ. ಇವೆಲ್ಲದರ ಪರಿಣಾಮ ಬಡವರ ಸಾವಿನ ಮೆರವಣಿಗೆ ಮುಂದು ವರೆದಿದೆ.

ಇದನ್ನೂ ಓದಿ-https://suddilive.in/archives/8866

Related Articles

Leave a Reply

Your email address will not be published. Required fields are marked *

Back to top button