ಕ್ರೈಂ ನ್ಯೂಸ್

ವೃದ್ಧೆಯ ಅಂಗಡಿಗೆ ಬೆಂಕಿ

ಸುದ್ದಿಲೈವ್/ಶಿವಮೊಗ್ಗ

ಸೂಳೆಬೈಲಿನಲ್ಲಿ ಪೆಟ್ಟಿಗೆ ಅಂಗಡಿಯೊಂದನ್ನ ಬೆಂಕಿ ಹಚ್ಚಿ ಸುಡಲಾಗಿದೆ. ನಿಂಗಪ್ಪ ಲೇ ಔಟ್ ನಲ್ಲಿ 78 ವರ್ಷದ ವೃದ್ಧೆ ಓರ್ವಳು ಜೀವನೋಪಯಕ್ಕಾಗಿ ಇದ್ದ ಪೆಟ್ಟಿಗೆ ಅಂಗಡಿಯನ್ನ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ.

ಮೊಮ್ಮಗನ ಮದುವೆ ಇದ್ದುದ್ದರಿಂದ ಒಂದು ವಾರದಿಂದ ನಿಂಗವ್ವ ಎಂಬ 78 ವರ್ಷದ ವೃದ್ಧೆ ಅಂಗಡಿ ಬಾಗಿಲು ತೆಗೆದಿರಲಿಲ್ಲ. ಈ ಘಟನೆ ಬಗ್ಗೆ ಪೆಟ್ಟಿಗೆ ಅಂಗಡಿಯ ಪಕ್ಕದ ಮನೆಯವರು ಅಜ್ಜಿಯ ಮೊಮ್ಮಗನಿಗೆ ಕರೆ ಮಾಡಿದ್ದರು.

ನಂತರ ವೃದ್ಧೆ ಅಂಗಡಿಗೆ ವಿಷಯ ಗೊತ್ತಾಗಿಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಅಂಗಡಿ ಸುಟ್ಟು ಕರಕಲಾಗಿದೆ. ಸುಮಾರು 50 ಸಾವಿರ ರೂ ನಷ್ಟವಾಗಿದೆ ಎಂದು ನಿಂಗವ್ವ ತುಂಗ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/12179

Related Articles

Leave a Reply

Your email address will not be published. Required fields are marked *

Back to top button