ಕ್ರೈಂ ನ್ಯೂಸ್

ರಾಗಿಗುಡ್ಡದಲ್ಲಿನ ಅಲಂಕಾರದ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ-ದಾಖಲಾಯಿತು ಸುಮೋಟೊ ಪ್ರಕರಣ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆಯನ್ನ ಮತ್ತೊಮ್ಮೆ ಸುದ್ದಿಮಾಡಿದೆ. ಈ ಬಾರಿ ಯುವಕನೋರ್ವ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವ ವಿಡಿಯೊ ಬಹಳ ಸದ್ದು ಮಾಡಿದೆ.

ಖಚಿತ ಮಾಹಿತಿಯ ಆಧಾರದ ಮೇರೆಗೆ ದೊಡ್ಡಪೇಟೆ ಪೊಲೀಸರಿಗೆ ಒಂದು ಮಾಹಿತಿ ಲಭ್ಯವಾಗುತ್ತೆ. dxdu_07 ಎಂಬ ಇನ್ಯಾಎಗ್ರಾಮ್ ಪೇಜ್ ನಲ್ಲಿ ಶಾಹುಲ್ ಸುಲ್ತಾನ್ ಎಂಬುವವನು ಫೆ.16 ರಂದು ಸುಮಾರು ಸಂಜೆ 07.00ರಿಂದ 08.00 ಗಂಟೆಯ ಸಮಯದಲ್ಲಿ ಶಿವಮೊಗ್ಗ ನಗರದ ಕೆ.ಆರ್.ಪುರಂನ ಜಿ ಕಾರ್ನರ್ ಹತ್ತಿರ Land Mark Shoe Point Opening ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋವೊಂದು ಸದ್ದು ಮಾಡಿತ್ತು.

ವಿಡಿಯೋದಲ್ಲಿ ಅ. 01 ರಂದು ರಾಗಿಗುಡ್ಡದಲ್ಲಿ ನಡೆದ ಹಿಂದೂ ಮತ್ತು ಮುಸ್ಲಿಂ ಕೋಮು ಗಲಭೆ ಹಿನ್ನಲೆಯಾಗಿಸಿಕೊಂಡು ಕಾರ್ಯಕ್ರಮದಲ್ಲಿ ಸೇರಿದ ಜನರನ್ನು ಉದೇಶಿಸಿ “ಸ್ಪೆಷಲ್ ಆಗಿ ರಾಗಿಗುಡ್ಡದವರು ಯಾರಿದ್ದೀರಾ! ನೀವೆಲ್ಲ ರಾಗಿಗುಡ್ಡದವರ! ಹಾಗಾದರೆ ರಾಗಿಗುಡ್ಡದವರು ಇಲ್ಲಿ ಇದ್ದೀರಾ? ಲೈಟಿಂಗ್ ಚೆನ್ನಾಗಿ ಮಾಡಿದ್ರಿ. ನೀವು ಇಲ್ಲಿ ಲೈಟಿಂಗ್ ಮಾಡಿದ್ರಿ, ಆದ್ರೆ ಸ್ವಿಚ್ ಬೇರೆ ಕಡೆ ಇತ್ತು.

ನೀವು ಲೈಟಿಂಗ್ ಇಲ್ಲಿ ಮಾಡಿದ್ರಿ, ಆದ್ರೆ ಬೆಳಕು ಬೇರೆ ಕಡೆ ಬಿದ್ದಿತ್ತು. ಈ ಸರಿ 60 ವೋಲ್ಟ್ ಬೆಳಕ್ ಹಾಕಿದ್ರಿ ನೆಕ್ಸ್ಟ್ 6,000 ವೋಲ್ಡ್ ಅಷ್ಟು ಬೆಳಕು ಹಾಕೋಣ. ಎಂಥ! ಫೆಕ್ಸ್ ಇತ್ತು ಅದು. ಅಷ್ಟು ದೊಡ್ಡ ಪ್ಲೆಕ್ಸ್”.(ರಾಗಿಗುಡ್ಡದಲ್ಲಿ ಹಾಕಿದ್ದ ಔರಂಗಜೇಬ್ ಪ್ಲೆಕ್ಸ್ ವಿಚಾರದಲ್ಲಿ ನಡೆದ ಕೋಮು ಗಲಭೆಯ ವಿಚಾರವನ್ನು ಒತ್ತಿ ಹೇಳುವ ಉದ್ದೇಶ ಅದರಲ್ಲಿತ್ತು) ಎಂದು ಉರ್ದು ಹಾಗೂ ಕನ್ನಡ ಭಾಷೆಯಲ್ಲಿ ಸಿದ್ದಪಡಿಸಲಾಗಿತ್ತು.‌

ಅಲ್ಲಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಹುಲ್ ಸುಲ್ತಾನ್ ವಿಡಿಯೋವನ್ನ dxdu_07 ಎಂಬ ಇನ್ಮಾಗ್ರಾಮ್ ಪೇಜ್ ನಲ್ಲಿ, ಸ್ಟೇಟಸ್ ಹಾಕಿ ಕೊಂಡು ಇತರೆಯವರಿಗೆ ಶೇರ್ ಮಾಡುತ್ತಾ ಒಂದು ಕೋಮಿನ ಜನರನ್ನು ಎತ್ತಿಕಟ್ಟುತ್ತಾ, ಜನರನ್ನು ಉದ್ರಿಕ್ತಗೊಳಿಸಿ ಪ್ರೇರೇಪಿಸುವ ಅಂಶ ಹೊರಬಿದ್ದಿದೆ.
ಸಮಾಜದ ಶಾಂತಿ ಕದಡುತ್ತಿರುವುದು ಕಂಡು ಬಂದಿದೆ.

ವಿಡಿಯೋ ವಿರುದ್ಧ ಮತ್ತು ಶಾಹುಲ್ ಸುಲ್ತಾನ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮ ಜರುಗಿಸಲಾಗಿದೆ.‌

ಇದನ್ನೂ ಓದಿ-https://suddilive.in/archives/9334

Related Articles

Leave a Reply

Your email address will not be published. Required fields are marked *

Back to top button