ರಾಜಕೀಯ ಸುದ್ದಿಗಳು

ಲೋಕಸಭಾ ಚುನಾವಣೆ ನಂತರ ಬಿ.ವೈ ವಿಜೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಕಳೆದು ಕೊಳ್ತಾರೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿರುವ ಈಶ್ವರಪ್ಪ ನಿವಾಸದಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ನೂರಾರು ಮಂದಿ‌ ಕಾರ್ಯಕರ್ತರು ಭಾಗಿಯಾಗಿದ್ದು, ಬಿಜೆಪಿಯಿಂದ ಆದ ನೋವನ್ನು ಕಾರ್ಯಕರ್ತರ ಎದುರು ತೋಡಿಕೊಂಡಿದ್ದಾರೆ.

ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಸಭೆಯಲ್ಲಿ ಮತ್ತೊಮ್ಮೆ ಹಿಂದೂ ಹುಲಿ ಈಶ್ವರಪ್ಪ ಘರ್ಜಿಸಿದ್ದಾರೆ. ಬಂಡಾಯ ಅಭ್ಯರ್ಥಿ ಆಗಿ ನಾನು ನಿಲ್ಲುವುದು ಪಕ್ಕಾ. ಕಾರ್ಯಕರ್ತರು ಮತ್ತು ಬೆಂಬಲಿಗರ ಮುಂದೆ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ನಾಮಪತ್ರ ಸಲ್ಲಿಸಲು ಹೆಚ್ಚು ಜನರು ಬರಬೇಕೆಂದು ಈಶ್ವರಪ್ಪ ಕರೆ ನೀಡಿದ್ದು, ನಾನು ಸಾಗರ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕರು ಅಳಲು ತೋಡಿಕೊಂಡರು. ಹಾಲಪ್ಪ ಮತ್ತು ರಾಘವೇಂದ್ರ ವಿರುದ್ಧ ಪ್ರಮುಖರ ಬೇಸರ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಸಾಗರದ ಪ್ರಮುಖರು ತಿಳಿಸಿದರು.

ಈಶ್ವರಪ್ಪ ಸ್ಪರ್ಧೆ ಬಗ್ಗೆ ಇಡಿ ರಾಜ್ಯದಲ್ಲಿ ಚರ್ಚೆ ಆಗ್ತಿದೆ. ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಲೋಕಸಭಾ ಚುನಾವಣಾ ಫಲಿತಾಂಶ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌.ವಿಜಯೇಂದ್ರ‌ ಹುದ್ದೆ ಕಳೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ತಿಳಿಸಿದರು.

ಜೂನ್ ನಲ್ಲಿ ಪರಿಷತ್ ಸ್ಥಾನ ಖಾಲಿ ಆಗ್ತದೆ ನಿಮ್ಮ ಮಗನಿಗೆ ಕೊಡ್ತೀನಿ‌ ಅಂದ್ರು. ನನಗೆ ರಾಜ್ಯಪಾಲನಾಗಿ ಮಾಡ್ತೀನಿ ಅಂದ್ರು. ನನಗೆ ಯಾವುದೇ ಸ್ಥಾನಮಾನ ಮುಖ್ಯವಲ್ಲನನಗೆ ಸ್ಥಾನಮಾನ ಬೇಡ, ಪಕ್ಷ ಉಳಿಯಬೇಕು ಅಷ್ಟೇ ಎಂದು ಪುನರುಚ್ಚರಿಸಿದರು.

ಇದನ್ನೂ ಓದಿ-https://suddilive.in/archives/11084

Related Articles

Leave a Reply

Your email address will not be published. Required fields are marked *

Back to top button