ಶೈಕ್ಷಣಿಕ ಸುದ್ದಿಗಳು

ಕಾಲೇಜಿಗೆ ಹೋಗುತ್ತಿದ್ದ ಬಸ್ಸಿನಿಂದಲೇ ಅಪಘಾತ

ಸುದ್ದಿಲೈವ್/ಶಿವಮೊಗ್ಗ

ತಾಲೂಕಿನ ಗುಡ್ಡದ ಅರಕೆರೆಯಲ್ಲಿರುವ ಖಾಸಗಿ ಕಾಲೇಜಿನ ವಾಹನದ ಚಾಲಕನ ಅಜಾಗರೂಕತೆಯಿಂದಾಗಿ ಕಾಲೇಜಿನ ವಿದ್ಯಾರ್ಥಿಗೆ ಗಾಯಗಳಾಗಿದ್ದು ಅಪಘಾತ ಪಡಿಸಿದ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ವಿದ್ಯಾರ್ಥಿಯು ಶಿವಮೊಗ್ಗದ ಪೊಲೀಸ್ ಅಧಿಕಾರಿ ಎಂದು ತಿಳಿದು ಬಂದಿದೆ.

ರಿತೇಶ್‌.ರಾವ್ ಎಂಬ  ಶಿವಮೊಗ್ಗ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ ವಿದ್ಯಾಭ್ಯಾಸ ಮಾಡಿಕೊಂಡಿದ್ದು,  ಫೆ.03 ರಂದು ಕಾಲೇಜಿನ ಬಸ್ಸಿನಲ್ಲಿ ಹತ್ತಿಕೊಂಡು ಹೋಗಿರುತ್ತಾನೆ.  ಶನಿವಾರಆಗಿದ್ದರಿಂದ ಕಾಲೇಜು ಬೇಗನೆ ಬಿಟ್ಟಿದ್ದು ರಿತೇಶ್  ಕಾಲೇಜಿನ ಕ್ಯಾಂಪಸ್ ಒಳಗಡೆ ಇರುವ ಬಸ್ ಸ್ಟಾಂಡ್ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಮಧ್ಯಾಹ್ನ  ಕಾಲೇಜಿನ ಬಸ್ಸನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿದೆ.

ಪರಿಣಾಮ ವಿದ್ಯಾರ್ಥಿ ಕೆಳಗೆ ಬಿದ್ದಿದ್ದು, ಹಣೆಯ ಹತ್ತಿರ ರಕ್ತಗಾಯವಾಗಿದೆ. ರಿತೇಶ್ ಅವರ ತಾಯಿ ಫೆ.03 ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ವಿದ್ದುದ್ದರಿಂದ ಬಂದೋಬಸ್ತ್ ಗೆ ತೆರಳಿದ್ದರು.  ಪರಿಚಯಸ್ತ ಶ್ರೀನಿವಾಸ್ ಎಂಬುವರು ಸ್ಥಳಕ್ಕೆ ಹೋಗಿದ್ದಾಗ ಅಪಘಾತ ಪಡಿಸಿದ್ದ ಬಸ್ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಬಸ್ಸಿನ ನೊಂದಣಿ ಸಂಖ್ಯೆ ಕೆ.ಎ-14 ಸಿ-5498 ಹಾಗೂ ಚಾಲಕನ ಹೆಸರು ಮಧುಸೂಧನ್ ಗೌಡ ಎಂಬುದಾಗಿ ತಿಳಿದಿದ್ದರಿಂದ ಬಸ್ಸು ಪೆಸೆಟ್ ಕಾಲೇಜಿಗೆ ಸೇರಿದ ಬಸ್ಸು ಆಗಿರುತ್ತದೆ. ನಂತರ ರಕ್ತಗಾಯಗೊಂಡ ಪಿರ್ಯಾದಿ ಮಗನನ್ನು ಶ್ರೀನಿವಾಸ ಮತ್ತು ಅವರ ಸಹಚರರು ಯಾವುದೋ ವಾಹನದಲ್ಲಿ ಕೂರಿಸಿಕೊಂಡು ಬಂದು ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕೆ.ಎ-14 ಸಿ-5498 ನೇ ಪೆಸೆಟ್ಟಾಲೇಜಿನ ಬಸ್ಸಿನ ಚಾಲಕನಾದ ಮಧುಸೂಧನ್ ಗೌಡ ಈತನು ಬಸ್ಸನ್ನು ನಿರ್ಲಕ್ಷತನದಿಂದ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಿತೇಶ್‌ಎ.ರಾವ್ ಈತನಿಗೆ ಅಪಘಾತಪಡಿಸಿ ಉಪಚರಿಸದೇ ಅಪಘಾತ ಸ್ಥಳದಿಂದ ಪರಾರಿಯಾಗಿದ್ದರಿಂದ ರಿತೇಶ್ ತಾಯಿ ತುಂಗ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8672

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373