ಶೈಕ್ಷಣಿಕ ಸುದ್ದಿಗಳು

ಡಿಎಆರ್ ಪೊಲೀಸ್ ಪರೀಕ್ಷಾ ಕೇಂದ್ರದಲ್ಲಿ ಮಾನವೀಯತೆ ಮೆರೆದ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಡಿಎಆರ್ ಪೊಲೀಸ್ ಹುದ್ದೆಗೆ ಪರೀಕ್ಷೆ ಆರಂಭಗೊಂಡಿದೆ. ರಾಜ್ಯದಲ್ಲಿ 3064 ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿದೆ.

ಅದರಂತೆ ಶಿವಮೊಗ್ಗದ 22 ಕೇಂದ್ರದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 8 ಸಾವಿರಕ್ಕು ಅಧಿಕ ಅಭ್ಯರ್ಥಿಗಳು ಪರೀಕ್ಷೆ ನ ಬರೆಯಲಿದ್ದಾರೆ.‌ ಪೊಲೀಸ್ ಇಲಾಖೆಯಿಂದ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ 3 ಹಂತದಲ್ಲಿ ಅಭ್ಯರ್ಥಿಗಳ ತಪಾಸಣೆ ನಡೆದಿದೆ.

ಜೀನ್ಸ್ ಪ್ಯಾಂಟ್, ಫುಲ್ ಶರ್ಟ್ ಪರೀಕ್ಷಾರ್ಥಿಗಳಿಗೆ ನಿಷೇಧಿಸಲಾಗಿದೆ. ಜೀನ್ಸ್ ಪ್ಯಾಂಟ್, ಫುಲ್ ಶರ್ಟ್ ಹಾಕಿಕೊಂಡು ಬಂದವರಿಗೆ  ಪೊಲೀಸರು ಶಾಕ್ ನೀಡಿದ್ದಾರೆ. ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನ ಪರೀಕ್ಷೆ ಬರೆಯದೇ ವಾಪಸ್ ಕಳುಹಿಸಲಾಗಿತ್ತು.

ನಂತರ ಅಭ್ಯರ್ಥಿಗಳನ್ನ ವಾಪಸ್ ಕರೆದು ನೈಟ್ ಪ್ಯಾಂಟ್ ಖರೀದಿಗೆ ಪೊಲೀಸರೇ ಹಣಕೊಟ್ಟ ದೃಶ್ಯಗಳು ಲಭ್ಯವಾಗಿದೆ. ನೈಟ್ ಪ್ಯಾಂಟ್ ಖರೀದಿಸಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ನೈಟ್ ಪ್ಯಾಂಟ್ ಖರೀದಿಗೆ ಹಣ ಸಹಾಯ ಮಾಡಿದ ವಿನೋಬನಗರ ಪೊಲೀಸ್ ಕಾನ್ಸ್‌ಟೇಬಲ್ ಮಲ್ಲಪ್ಪರ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ.

ಫುಲ್ ಶರ್ಟ್ ಹಾಕಿಕೊಂಡು ಬಂದವರಿಗೂ ಶಾಕ್ ನೀಡಲಾಗಿದೆ. ಫುಲ್ ಶರ್ಟ್ ಹಾಕಿಕೊಂಡು ಬಂದವರಿಗೆ ಪ್ರವೇಶವನ್ನ ನಿರಾಕರಿಸಲಾಯಿತು.ಈ ವೇಳೆ ತಾಯಿಯೊಬ್ಬಳು  ಮಗನಿಗಾಗಿ ಹೊಸ ಶರ್ಟ್ ತಂದು ಕೊಟ್ಟಿದ್ದಾರೆ. ತಾಯಿ ತಂದುಕೊಟ್ಟ ಶರ್ಟ್ ತೊಟ್ಟು ನಂತರ ಯುವಕರು ಪರೀಕ್ಷೆಗೆ ಹಾಜರಾಗಿದ್ದಾರೆ.

ಶಿವಮೊಗ್ಗದಲ್ಲಿ ಡಿಎಆರ್ ಪೊಲೀಸ್ ಹುದ್ದೆಗೆ ಪರೀಕ್ಷೆಗಾಗಿ 3064 ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯುತ್ತಿದೆ. ಶಿವಮೊಗ್ಗದ 22 ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/7869

Related Articles

Leave a Reply

Your email address will not be published. Required fields are marked *

Back to top button