ಶೈಕ್ಷಣಿಕ ಸುದ್ದಿಗಳು
ಮಲೆನಾಡಿನಲ್ಲಿ ಸಂಭ್ರಮದ ಗೋಪೂಜೆ

ಸುದ್ದಿಲೈವ್/ಶಿವಮೊಗ್ಗ

ದೀಪಾವಳಿಯ ಹಬ್ಬದಲ್ಲಿ ಗೋಪೂಜೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಗೋಪೂಜೆಯ ಮೂಲಕ ಮುಂದಿನ ಸಂಕ್ರಮಣದ ವರೆಗೆ ಗೋವುಗಳ ಓಟ/ಸ್ಪರ್ಧೆ ಗರಿಗೆದರಲಿದೆ. ಮಲೆನಾಡಿನ ಮೂರು ತಾಲೂಕಿನಲ್ಲಿ ಹೋರಿ ಸ್ಪರ್ಧೆ ವಿಜೃಂಭಣೆಯಿಂದ ನಡೆಯಲಿದೆ.
ಮಲೆನಾಡಿನಲ್ಲಿ ದೀಪಾವಳಿ ಸಂಭ್ರಮ ನುಗಿಲು ಮುಟ್ಟಿದೆ. ಗೋ ಪೂಜೆ ನೆರವೇರಿಸಿ ಪುಣ್ಯನಾದ ಮಲೆನಾಡ ರೈತ. ಶಿವಮೊಗ್ಗ ಜಿಲ್ಲೆಯಾದ್ಯಂತ ಗೋ ಪೂಜೆ ನಡೆಯುತ್ತಿದೆ. ಗೋವುಗಳಿಗೆ ಹೂವಿನ ಹಾರ ಹಾಕಿ ರೈತ ಕುಟುಂಬ ಆರತಿ ಬೆಳಗಿಸಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಗೋವುಗಳಿಗೆ ಅಕ್ಕಿ ಬೆಲ್ಲ ಹಣ್ಣು ನೀಡಿ ಪೂಜೆ ಸಲ್ಲಿಸಲಾಗುತ್ತಿದೆ. ಹಲಸುಗಳನ್ನು ತೊಳೆದು, ಮೈ ಮೇಲೆ ಬಣ್ಣ ಹಚ್ಚಿಯೂ ಸಹ ಸಂಭ್ರಮ ಪಡಲಾಗುತ್ತಿದೆ. ಹಸುಗಳಿಗೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/3012
