ಶೈಕ್ಷಣಿಕ ಸುದ್ದಿಗಳು
ಮುಸ್ಲಿಂ ಸಮುದಾಯ: ಸಹಬಾಳ್ವೆಗೆ ನಾಂದಿಯಾದ ಲಕ್ಷ್ಮೀ ಪೂಜೆ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆಯಲ್ಲಿ ಭಾನುವಾರ ಮುಸ್ಲಿಂ ಸಮುದಾಯದ ಯುವಕರು ಹಿಂದೂ ಸಂಪ್ರದಾಯದಂತೆ ಲಕ್ಷ್ಮೀ ಪೂಜೆ ನೆರೆವೇರಿಸಿದರು.
ಅರಸಾಳು ಮೂಲದ ತನು ಎಂಬ ಯುವಕ ರಿಪ್ಪನ್ ಪೇಟೆಯ ಮುಖ್ಯ ರಸ್ತೆಯಲ್ಲಿ ತನ್ವಿ ಮೊಬೈಲ್ ವರ್ಡ್ ಎಂಬ ಅಂಗಡಿ ತೆರೆದಿದ್ದಾರೆ. ಪ್ರತೀ ವರ್ಷ ತಮ್ಮ ಅಂಗಡಿಯಲ್ಲಿ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು ಕಾಯಿ ನೈವೆದ್ಯ ಅರ್ಪಿಸುವ ಮೂಲಕ ಪುರೋಹಿತರಿಂದ ಪೂಜೆ ನೆರೆವೇರಿಸುತ್ತಾ ಬಂದಿದ್ದಾರೆ. ಅಕ್ಕಪಕ್ಕದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ-https://suddilive.in/archives/2973
