ರಾಜ್ಯ ಸುದ್ದಿಗಳು

ನಿಗಮ‌ ಮಂಡಳಿ ಸ್ಥಾನ ಕೊಟ್ರು ಸಂತೋಷ, ಕೊಡದಿದ್ದರೂ ಸಂತೋಷ-ಆರ್ ಎಂ ಎಂ

ಸುದ್ದಿಲೈವ್/ಶಿವಮೊಗ್ಗ

ರೈತರ ಮಧ್ಯಾಮಾವಧಿ ಮತ್ತು ಧೀರ್ಘಾವಧಿ ಮೇಲಿನ ಸಾಲದ ಮೇಲಿನ ಬಡ್ಡಿಯನ್ನ ಮನ್ನ ಮಾಡಲಾಗುತ್ತಿದೆ. ಫೆಬ್ರವರಿ ಅಂತ್ಯಕ್ಕೆ ಡಿಸಿಸಿ ಬ್ಯಾಂಕ್ ಅಥವಾ ಸಂಬಂಧಿತ ಬ್ಯಾಂಕ್ ನಲ್ಲಿ ರೈತರು ಮಾಡಿರುವ ಸಾಲವನ್ನ ಇಡಿಗಂಟಲ್ಲಿ ತೀರಿಸಿದರೆ ಬಡ್ಡಿ ಮನ್ನವಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ ಎಂ ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 178 ಪ್ರಾಥಮಿಕ ಸಹಕಾರ ಸಂಘ, 8 ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಗಳು, ಡಿಸಿಸಿ ಬ್ಯಾಂಕ್ ನಲ್ಲಿ ರೈತರು ಸಾಲ ಮಾಡಿದಲ್ಲಿ ರೈತರ ಬಡ್ಡಿ ಮನ್ನವಾಗಲಿದೆ. ಈ ನಿರ್ಧಾರವನ್ನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ತಿಳಿಸಿದ್ದರು. ಈಗ ಒಂದು ತಿಂಗಳು ಐದು ದಿನ ಬಾಕಿಯಿದೆ ಎಂದರು.

ಈಗ ಅವಕಾಶ ಪಡೆದು ರೈತರು ಸದುಯೋಗ ಪಡೆದುಕೊಳ್ಳಲು ಆರ್ ಎಂ ಮಂಜುನಾಥ್ ಗೌಡ ತಿಳಿಸಿದರು. ಇದು ಕಡೆ ಅವಕಾಶ ಆಗಿದೆ. ಸಾವಿರಾರು ಜನ ರೈತರು ಸುಸ್ಥಿಬಡ್ಡಿ ಸಾಲಗಾರರಿದ್ದು, ಕೆಲವರ ಬಡ್ಡಿಯೇ ಸಾಲಕ್ಕಿಂತ ಹೆಚ್ಚಿಗೆ ಆಗಲಿದೆ. ಹಾಗಾಗಿ ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿಕೊಂಡರು.

2 ಲಕ್ಷ 33 ಸಾವಿರ ಯಶಸ್ವಿನಿ ಕಾರ್ಡ್ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದರು.
ಡಿ.1 2023 ರವರೆಗೆ ಯಶಸ್ವಿನಿಆರೋಗ್ಯ ರಕ್ಷಕವಚದ ಯೋಜನೆಗೆ ಅವಕಾಶ ಇತ್ತು. ಈಗ ಜ.31ವರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಅನುವುಮಾಡಿಕೊಡಲಾಗುವುದು ಎಂದರು.

ತನಿಖೆ ವರದಿ ಯಾವಾಗಾದರೂ ಬರಬಹುದು

ಡಿಸಿಸಿ ಬ್ಯಾಂಕ್ ನಲ್ಲಿ ನೇಮಕಾತಿ ಪ್ರಕರಣದ ತನಿಖೆ ಮುಗಿದಿದೆ. ವರದಿಗಾಗಿ ಕಾಯಲಾಗುತ್ತಿದೆ. ಯಾವಾಗ ಬೇಕಾದರೂ ತನಿಖಾ ವರದಿ ಹೊರಬರಬಹುದು. ನೇಮಕಾತಿ ಬಗ್ಗೆ ಬಹುತೇಕ ಎಲ್ಲರೂ ಧ್ವನಿ ಎತ್ತಲಾಗಿದೆ. ಹಾಗಾಗಿ ತನಿಖೆ ಆರಂಭವಾಗಿದೆ. ಸರ್ಕಾರ ಎಲ್ಲಿಯ ವರೆಗೆ ಆಸಕ್ತಿ‌ ತೋರುತ್ತೋ ಅಲ್ಲಿಯ ವರೆಗೆ ಪ್ರಕರಣ ಗಟ್ಟಿಗೊಳ್ಳುತ್ತದೆ ಎಂದರು.

ನಿಗಮ ಮಂಡಳಿ ಆಕಾಂಕ್ಷಿ ನಾನಲ್ಲ

ನಿಗಮ‌ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ನಾನು ಅಕಾಂಕ್ಷಿ ಅಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ನಿಗಮ ಮಂಡಳಿ ಕೊಡುವುದಾಗಿ ಸಿಎಂ‌ ಮತ್ತು ಡಿಸಿಎಂ ಭರವಸೆ ನೀಡಿದ್ದರು. ಪಕ್ಷ ಗುರುತಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೂ ಸಂತೋಷ ನೀಡದಿದ್ದರೂ ಸಂತೋಷ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನ‌ನಿರ್ದೇಶಕರಾದ ಯೋಗೀಶ್, ದುಗ್ಗಪ್ಪ ಗೌಡ, ಬ್ಯಾಂಕ್ ಮ್ಯಾನೇಜರ್ ವಾಸುದೇವ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/7651

Related Articles

Leave a Reply

Your email address will not be published. Required fields are marked *

Back to top button