ರಾಜ್ಯ ಸುದ್ದಿಗಳು

ಹೆದ್ದಾರಿ ರಸ್ತೆಯಲ್ಲಿ ಎಡವಟ್ಟು ಡಾಂಬರೀಕರಣ ಪರಿಸರವಾದಿಗಳು ಕೆಂಡಮಂಡಲ

ಸುದ್ದಿಲೈವ್/ಶಿವಮೊಗ್ಗ

ಸಂಸದ ರಾಘವೇಂದ್ರರವರ ಕನಸಿನ ಪ್ರೊಜೆಕ್ಟ್ ನಲ್ಲಿ ಒಂದಾಗಿರುವ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಕಾಮಗಾರಿಯ ವೇಳೆ ಮರಗಳನ್ನ ರಸ್ತೆಯಲ್ಲೇ ಬಿಟ್ಟು ಡಾಂಬಾರು ಹಾಕಲಾಗಿರುವುದು ಬೆಳಕಿಗೆ ಬಂದಿದೆ.

ಶಿವಮೊಗ್ಗದ, ಸಾಗರದ ಬಟ್ಟೆಮಲ್ಲಪ್ಪ ಎಂಬ ಹಳ್ಳಿಯಲ್ಲಿ ರಾಣೆಬೆನ್ನೂರು-ಬೈಂದೂರು ಹೆದ್ದಾರಿ 766C ಕಾಮಗಾರಿ ನಡೆಸಲಾಗಿದೆ. ಎಂಪಿ ತಾಲೂಕಿನಿಂದ ಲೋಕಸಭೆ ಕೊನೆಯ ಕ್ಷೇತ್ರ ಉಡುಪಿ ಬೈಂದೂರಿಗೆ ಸಂಪರ್ಕ ಮಾರ್ಗ ಇದಾಗಿದೆ.

ಸುಮಾರು 250 ಕೋಟಿ ರೂಪಾಯಿ, ದ್ವೀಪದ ರಸ್ತೆಗೆ 2022ರಲ್ಲಿ ಚಾಲನೆ, ನೀಡಾಗಿತ್ತು. ಮರ ಕಡಿಯಲು ಅರಣ್ಯ ಇಲಾಖೆ ಹಿಂದೇಟು ಹಾಕಿದ ಕಾರಣ ಮರವನ್ನ ರಸ್ತೆಯ ಮಧ್ಯದಲ್ಲಿಯೇ ಬಿಟ್ಟು ಸುತ್ತಲು ಡಾಂಬಾರು ಹಾಕಲಾಗಿದೆ ಎಂದು ಪರಿಸರ ಆಸಕ್ತರು ಆರೋಪಿಸಿದ್ದಾರೆ.

ಚುನಾವಣಾ ತರಾತುರಿ, ಕಾಂಟ್ರಾಕ್ಟ್ ಅವಧಿ ಜೂನ್ ಗೆ ಮುಕ್ತಾಯವಾಗಲಿದೆ. ಅರಣ್ಯ ಇಲಾಖೆಯೊಂದಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಂಪರ್ಕ ಕೊರತೆಯಿಂದಾಗಿ ಮಗಮರಗಳನ್ನ ರಸ್ತೆಯ ಮಧ್ಯೆಯ ಬಿಟ್ಟು  ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ ಎಂಬ ಆರೋಪಕೇಳಿ ಬಂದಿದೆ. ಆನಂದಪುರಂ-ಬಟ್ಟೆಮಲ್ಲಪ್ಪ ಮಧ್ಯೆ ಹತ್ತು ಕಿಲೋಮೀಟರ್, ಇದ್ದು,

ಮೂರು ಮರಗಳ ಸುತ್ತ ಡಾಂಬಾರ್ ಎರಕ ಹೊಯ್ದು, ಎಚ್ಚರಿಕೆ ಬೋರ್ಡ್ ಹಾಕಲಾಗಿದೆ. ಮರಗಳ ಸುತ್ತ ಮರಳು ಮೂಟೆ ಇಟ್ಟು ಅಪಘಾತವಾಗದಂತೆ ಎಚ್ಚರಿಕೆ ನೀಡಲಾಗಿದೆ. ಹೆದ್ದಾರಿ ಅಧಿಕಾರಿಗಳ ಕ್ರಮಕ್ಕೆ ಪರಿಸರಾಸಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸರಾಸಕ್ತರನ್ನೂ ನಿಂದಿಸಿರುವ ಅಧಿಕಾರಿಗಳ ವಿರುದ್ಧ ಪರಿಸರವಾದಿ ಅಖಿಲೇಶ್ ಕೆಂಡಮಂಡಲರಾಗಿದ್ದಾರೆ.

ಇದನ್ನೂ ಓದಿ-https://suddilive.in/archives/6403

Related Articles

Leave a Reply

Your email address will not be published. Required fields are marked *

Back to top button