ರಾಜ್ಯ ಸುದ್ದಿಗಳು

ಬಾಬು ಆಂಜನಪ್ಪ, ವಿಜಯಕುಮರ್‌ ಅಧಿಕಾರ ಸ್ವೀಕಾರ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಅಧಿಕಾರಿಗಳ ಗೊಂದಲದ ವರ್ಗಾವಣೆಯ ಮಧ್ಯೆದಲ್ಲಿಯೇ ಇಬ್ಬರು ಅಧಿಕಾರಿಗಳು ಅಧಿಕಾರ ಸ್ವೀಕರಿಸಿದ್ದಾರೆ. ಡಿವೈಎಸ್ಪಿ ಆಗಿ ಜೆಜೆ ತಿರುಮಲೇಶ್ ವರ್ಗಾವಣೆ ಆಗಿದ್ದರೂ ಕಾರಣಾಂತರದಿಂದ ಅವರ ವರ್ಗಾವಣೆ ರದ್ದಾಗಿತ್ತು.

ಅವರ ಸ್ಥಾನಕ್ಕೆ ಬಾಬು ಅಂಜನಪ್ಪನವರನ್ನ ಡಿವೈಎಸ್ಪಿ ಆಗಿ ಸರ್ಕಾರ ವರ್ಗಾಯಿಸಿದೆ. ಇವರ ವರ್ಗಾವಣೆಗೊಂಡ 5 ದಿನಗಳ ನಂತರ ಶಿವಮೊಗ್ಗಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದಾರೆ.

ರಾಜ್ಯ ಗುಪ್ತಚರ ಇಲಾಖೆಯಲ್ಲಿದ್ದ ಬಾಬು ಅಂಜನಪ್ಪರವರಿಗೆ ನಕ್ಸಲ್ ಕಾರ್ಯಚರಣೆಯಲ್ಲಿ ಅಪಾರ ಅನುಭವವಿದೆ. ಹೀಗಾಗಿ ಅವರಿಂದ ಉತ್ತಮ ನಿರೀಕ್ಷೆ ಕೂಡ ಇದೆ. ಕಾದು ನೋಡಬೇಕಿದೆ.

ಕುಲಸಚಿವರಾಗಿ ವಿಜಯ ಕುಮಾರ್‌‌ ಅಧಿಕಾರ ಸ್ವೀಕಾರ

ಅದರಂತೆ ಕುವೆಂಫು ವಿವಿಯ ಕುಲಸಚಿವರ ಗೊಂದಲದ ವರ್ಗಾವಣೆ ಬೆನ್ನಲ್ಲೇ ವಿಜಯಕುಮಾರ್ ನಿನ್ನೆ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಜಾಗಕ್ಕೆ ಮೈಸೂರಿನ ಶಿವರಾಜು ಪಿ ವರ್ಗಾವಣೆ ಗೊಂಡಿದ್ದರು. ಇವರ ವರ್ಗಾವಣೆ ಎರಡೇ ದಿನಕ್ಕೆ ರದ್ದಾಗಿ ವಿಜಯಕುಮಾರ್ ರನ್ನ ನೇಮಿಸಿ ಆದೇಶಿಸಿತ್ತು.

ನಿನ್ನೆ ಇವರು ಬಂದು ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಿವಾಸಿಯಾಗಿರುವ ವಿಜಯ ಕುಮಾರ್ 2014 ರ ಕೆಎಎಸ್ ಬ್ಯಾಚ್ ನವರು. ಈ ಹಿಂದೆ ಶಿವಮೊಗ್ಗದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವವವೂ ಇದೆ. ಅಲ್ಲದೆ ಇವರು ಕುವೆಂಪು ವಿವಿಯ ಹಳೆಯ ವಿದ್ಯಾರ್ಥಿಯೂ ಹೌದು!

ಇದನ್ನೂ ಓದಿ-https://suddilive.in/archives/8504

Related Articles

Leave a Reply

Your email address will not be published. Required fields are marked *

Back to top button