ಬಿಜೆಪಿಯ ಆಪರೇಷನ್ ಫ್ಲಾಪ್ ಆಗಲಿದೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಆಪರೇಷನ್ ಕಮಲ – ಶಾಸಕರ ಆಫರ್ ವಿಚಾರ ಕುರಿತು ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಬಿಜೆಪಿಯವರ ಆಪರೇಷನ್ ಕಮಲ ಫ್ಲಾಪ್ ಆಗುತ್ತೆ. ಸಕ್ಸಸ್ ಆಗಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಅವರಿಗೆ ಇದು ಪ್ಲಾಫ್ ಆಗುತ್ತೆ ಎಂಬುದರ ಮುನ್ಸೂಚನೆ ಇದು. ಆಪರೇಷನ್ ಕಮಲ ಮಾಡುವುದು ತಪ್ಪು, ಪ್ರಜಾಪ್ರಭುತ್ವವನ್ನು ಹಾಳು ಮಾಡಬೇಡಿ. ಪ್ರಜಾಪ್ರಭುತ್ವ ವಿರುದ್ಧವಾಗಿ ಹೋಗೋದು ಯಾವಾಗಲೂ ಸಕ್ಸಸ್ ಆಗಲ್ಲ ಎಂದರು.
ನಮ್ಮ ಸರ್ಕಾರ ಇರಬೇಕಾದರೆ ಇದೆಲ್ಲಾ ಆಗಲ್ಲ. ಶಾಸಕ ಸರ್ಕಾರಕ್ಕೆ ಸ್ಥಿರತೆ ತರಲು ಶಾಸಕ ರವಿ ಹೇಳಿದ್ದಾರೆ. ಅಸ್ಥಿರತೆ ಮಾಡುವವರೆ ಅಡ್ಜಸ್ಟ್ ಮಾಡಿಕೊಂಡು ಹೋಗೋದು.ಆದರೆ, ಅಸ್ಥಿರತೆಯನ್ನ ಮಾಡುವವರು ಯಾರು ಕಾಂಗ್ರೆಸ್ ನಲ್ಲಿ ಇಲ್ಲ ಎಂದು ಸಚಿವರು ತಿಳಿಸಿದರು.
ಡಿಕೆಶಿ ಸಿಎಂ ಆಗ್ತಾರೆ- ಶಾಸಕ ರವಿ ಗಣಿಗ ಹೇಳಿಕೆ ವಿಚಾರ
ಡಿಕೆಶಿ ಸಿಎಂ ಆಗುವ ವಿಚಾರವನ್ನ ಶಾಸಕ ರವಿ ಗಣಿಗ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಅದು ಅವರ ವೈಯಕ್ತಿಕ ಭಾವನೆ ಹೇಳಿದ್ದಾರೆ. ಇಂತಹ ವಿಚಾರ ಸಾರ್ವಜನಿಕ ಚರ್ಚೆ ಮಾಡಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸಿಸ್ಟಮ್ ಇದೆ. ಈಗಿನ ನಿರ್ಧಾರ ಕೂಡ ಹೈಕಮಾಂಡ್ ಮಾಡಿರೋದು.ಅದಕ್ಕೆ ನಾವೆಲ್ಲರೂ ಗೌರವ ಕೊಡಬೇಕು ಎಂದರು.
ಮಾತಾಡುವಾಗ ಯೋಚಿಸಬೇಕು. ವೈಯಕ್ತಿಕ ಹೇಳಿಕೆಗೆ ಅವರೇ ಉತ್ತರ ಕೊಡಬೇಕು. ಶಾಲೆಗಳ ಎಸ್ ಡಿ ಎಂಸಿ ಕಮಿಟಿಯಲ್ಲಿ ರಾಜಕೀಯ ವಿಚಾರ. ಶಾಲೆಗೆ ಎಸ್ ಡಿ ಎಂಸಿ ಸಮಿತಿ ಇರಲೇಬೇಕು. ಸಮಿತಿ ರಾಜಕೀಯವಾಗಿ ಬಳಸಿದ್ರೇ, ಇಲಾಖೆಯಿಂದ ಸ್ಪಷ್ಟ ಕ್ರಮ ಆಗುತ್ತೇ. ಒಂದೆರಡು ಸ್ಕೂಲ್ ಅಗಿದ್ರೇ ಪರಿಶೀಲನೆ ಮಾಡ್ತೇವೆ. ಸಮಿತಿ ಶಾಲೆಗೆ ಸೀಮಿತ – ರಾಜಕೀಯ ಪಕ್ಷ ಅಥವಾ ಸರ್ಕಾರಕ್ಕೆ ಅಲ್ಲ ಎಂದರು.
ಬೃಹತ್ ಉದ್ಯೋಗ
ಶಿವಮೊಗ್ಗದಲ್ಲಿ ನವೆಂಬರ್ 8 ರಂದು ಬೃಹತ್ ಉದ್ಯೋಗ ಮೇಳ ಮಾಡ್ತಿದ್ದೇವೆ. ಹಲವು ಕಂಪನಿ ಭಾಗಿಯಾಗಲಿದ್ದು, ಜಿಲ್ಲೆಯ ಯುವಕರು ಸದುಪಯೋಗ ಪಡೆದುಕೊಳ್ಳಲಿ ಎಂದು ಸಚಿವರು ತಿಳಿಸಿದರು.
ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇಸ್ರೇಲ್ ನಲ್ಲಿ ಸಿಲುಕಿರುವ ಶಿವಮೊಗ್ಗದ ಸ್ವಾಮಿಗೆ ಧೈರ್ಯ ತುಂಬಿದ ಸಚಿವರು ಏನಾದರೂ ಸಮಸ್ಯೆಯಾದರೆ ನಮ್ಮನ್ನ ಸಂಪರ್ಕಿಸಿ ಎಂದು ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ಸಾಂತ್ವಾನ ಹೇಳಿದರು.
ಇದನ್ನೂ ಓದಿ-https://suddilive.in/archives/1979
