ಸ್ಥಳೀಯ ಸುದ್ದಿಗಳು

ಸುಲಿಗೆ ಪ್ರಕರಣ‌ ಬೆನ್ನುಹತ್ತಿದ ಪೊಲೀಸರಿಗೆ ಪತ್ತೆಯಾಗಿದ್ದು‌ ಬರೋಬ್ಬರಿ 10 ಪ್ರರಣ

ಸುದ್ದಿಲೈವ್/ಶಿವಮೊಗ್ಗ

ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನ ಸುಲಿಗೆ ಮಾಡಿದ ಪ್ರಕರಣವನ್ನ‌ ಬೆನ್ನುಹತ್ತಿದ ಪೊಲೀಸರಿಗೆ ನಗರದ ವಿವಿಧ ಠಾಣೆಗಳಲ್ಲಿ  ದಾಖಲಾಗಿದ್ದ 10 ಪ್ರಕರಣಗಳು ಬೆಳಕಿಗೆ ಬಂದಿದೆ. ದ್ವಿಚಕ್ರ ವಾಹನ ಕಳುವು, ಎರಡು ಸುಲಿಗೆ, ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನ ತುಂಗನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಸ್ ಬಿಐ ಬ್ಯಾಂಕ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಮುರುಳೀಧರ್ ಡೋಂಗ್ರೆ ಎಂಬುವರು ಜ.04 ರಂದು ಬೆಳಗ್ಗಿನ‌ ಜಾವ ಲಗಾನ್ ಮಂದಿರದಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು ಶಿಕಾರಿಪುರದ ದಾರಿ ಕೇಳುವ ನೆಪದಲ್ಲಿ ರಾಬರಿ‌ ಮಾಡಿ ಹೊಗಿದ್ದರು.

ಅಮ್ಮನ ಅನಾರೋಗ್ಯ ಕಾರಣ ಹಣ ಹಿಡಿದುಕೊಂಡು ಬಂದಿದ್ದ 36 ಸಾವಿರ ನಗದು, ಮೊಬೈಲ್ ಇಯರ್ ಪೋಡ್ ಗಳನ್ನ ರಾಬರಿ ಮಾಡಿಕೊಂಡು ಹೋಗಿದ್ದ ಬಗ್ಗೆ ಜ.04ರಂದೇ ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.

ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಸುಲಿಗೆ ಪ್ರಕರಣಗಳ ಆರೋಪಿ ಮತ್ತು ಮಾಲು ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಹೆಚ್ಚುವರಿ ಎಸ್ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ   ಕಾರಿಯಪ್ಪ ಎ.ಜಿ, ಡಿವೈಎಸ್ಪಿ ಬಾಲರಾಜ್ ಬಿ  ಮೇಲ್ವಿಚಾರಣೆಯಲ್ಲಿ, ತುಂಗನಗರ ಪಿಐ ಮಂಜುನಾಥ್.ಬಿ, ನೇತೃತ್ವದಲ್ಲಿ , ಪಿಎಸ್ಐಗಳಾದ ಶಿವಪ್ರಸಾದ್ ವಿ. ಮಂಜುನಾಥ್, ರಘುವೀರ್ ಎಮ್,  ಕುಮಾರ ಕೂರಗುಂದ, ದೂದ್ಯಾನಾಯ್ಕ ಎಎಸ್ಐ ಮನೋಹರ್

ಮತ್ತು ಸಿಬ್ಬಂದಿಗಳಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಪುನೀತ, ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ, ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚನೆಯಾಗಿತ್ತು.

ಸದರಿ ತನಿಖಾ ತಂಡವು ಆರೋಪಿತರಾದ 1) ಮಹಮದ್ ತಬರಕ್ ವುಲ್ಲಾ @ ತಪ್ಪಣ್ಣ, (22) ಮತ್ತು 2) ಸೈಯದ್ ಹುಸೇನ್ @ ಶೇಟಾ, 23 ವರ್ಷ ರನ್ನ ದಸ್ತಗಿರಿ ಮಾಡಲಾಗಿದೆ. ಈ‌ ಪ್ರಕರಣದ ಆರೋಪಿತರಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 03 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು, 02 ಸುಲಿಗೆ ಪ್ರಕರಣಗಳು, 02 ಮನೆಗಳ್ಳತನ ಪ್ರಕರಣಗಳು, ಜಯನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ಸುಲಿಗೆ ಪ್ರಕರಣ, ವಿನೋಬನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ಸುಲಿಗೆ ಪ್ರಕರಣ ಮತ್ತು ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿದೆ.‌

ಅರೋಪಿಗಳಿಂದ ಅಂದಾಜು ಮೌಲ್ಯ 4,18,000/- ರೂಗಳ 76 ಗ್ರಾಂ ತೂಲದ ಬಂಗಾರದ ಆಭರಣಗಳು, 2) ಅಂದಾಜು ಮೌಲ್ಯ 10,000/- ರೂಗಳ ಮೊಬೈಲ್ ಫೋನ್ ಅಂದಾಜು ಮೌಲ್ಯ 1,50,000/- ರೂಗಳ 04 ದ್ವಿಚಕ್ರ ವಾಹನಗಳು ಮತ್ತು 4) 14,370/- ರೂ ನಗದು ಹಣ ಸೇರಿ ಒಟ್ಟು 5,92,370/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.‌

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/7528

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373