ಸ್ಥಳೀಯ ಸುದ್ದಿಗಳು
ಆಪರೆಷನ್ ಗೆ ಮಳೆ ಅಡ್ಡಿ

ಸುದ್ದಿಲೈವ್-ಶಿವಮೊಗ್ಗ

ಪೆಟ್ಟಿಗೆಯಲ್ಲಿ ಏನಿದೆ ಎಂಬ ಕುತೂಹಲಕ್ಕಾಗಿ ನಡೆಯುತ್ತಿದ್ದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯದಳದ ಆಪರೇಷನ್ ಗೆ ಮಳೆ ಅಡ್ಡಿಯಾಗಿದೆ.
ರೈಲ್ವೆ ಅಧಿಕಾರಿಗಳ ಗೆಸ್ಟ್ ಹೌಸ್ ನ ಕಾಂಪೌಂಡ್ ಬಳಿ ಮೂರು ದಿನಗಳ ಹಿಂದೆ ಎರಡು ಪೆಟ್ಟಿಗೆಗೆಗಳಿದ್ದು ಇಂದು ಸಾರ್ವಜನಿಕವಾಗಿ ಬಹಿರಂಗಗೊಂಡಿದೆ. ಪೆಟ್ಟಿಗೆಯಲ್ಲಿ ಸ್ಪೋಟಕ ವಸ್ತುಗಳಿವೆಯ ಎಂಬ ಕುತೂಹಲಕ್ಕೆ ಬೆಂಗಳೂರಿನ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದೆ.
ದಳದ ಓರ್ವ ಅಧಿಕಾರಿ ಉಪಕರಣ ಸಮೇತ ಪೆಟ್ಟಿಗೆ ಬಳಿ ಹೋಗಿ ವಿವಿಧ ಉಪಕರಣಗಳನ್ನಬಳಿಸಿ ವಸ್ತುವಿನ ಪತ್ತೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಮಳೆ ಸುರಿದು ಆಪರೇಷನ್ ಗೆ ಅಡ್ಡಿ ಉಂಟು ಮಾಡಿದೆ.
ಇದನ್ನೂ ಓದಿ-https://suddilive.in/archives/2516
