ಸ್ಥಳೀಯ ಸುದ್ದಿಗಳು

ಸ್ಕೋಡಾ ಕಾರಿನಲ್ಲಿ ಗಾಂಜಾ ಮಾರಾಟ-ಗಾಂಜಾ ರೈಡ್ ನಲ್ಲಿ ಸಿಕ್ಕಿದ್ದು ಬರೋಬ್ಬರಿ 5 ಕಾಲುಕೆ.ಜಿ

ಸುದ್ದಿಲೈವ್/ಶಿವಮೊಗ್ಗ

ಮೆಡಿಕಲ್ ಕಾಲೇಜಿನಲ್ಲಿ ಗಾಂಜಾ ಮಾರಾಟ, ಸೇವನೆ ಎಲ್ಲಾ ಮುಗಿಸಿರುವ ಗಾಂಜಾ ಪ್ರಕರಣ ಈಗ ಕಾರುಗಳಲ್ಲಿ ಮಾರಾಟವಾಗುತ್ತಿರುವುದು  ಬೆಳಕಿಗೆ ಬಂದಿವೆ.

ನಿನ್ನೆ ಬೆಳಗ್ಗೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ನಗರದ ಅನುಪಿನಕಟ್ಟೆ ರಸ್ತೆಯ ತುಂಗಾ ಮೇಲ್ದಂಡೆ ಚಾನಲ್ ನ ಸೇತುವೆಯ ಹತ್ತಿರ ಇಬ್ವರು ವ್ಯಕ್ತಿಗಳು ಸಿಲ್ವರ್ ಬಣ್ಣದ ಸ್ಕೋಡ ಕಾರ್ ಅನ್ನು ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಮತ್ತು ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಲರಾಜ್ ಮತ್ತು ತುಂಗ ನಗರ ಪಿಐ  ಮಂಜುನಾಥ್ ಬಿರವರ ಮೇಲ್ವಿಚಾರಣೆಯಲ್ಲಿ ಪಿಎಸ್ಐ  ಶಿವಪ್ರಸಾದ್  ಮತ್ತು ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ,

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1) ಸಾಗರದ ರಾಮನಗರದ ನಿವಾಸಿ ಅಲ್ತಾಫ್ @ ಮಚ್ಚಿ, 38 ವರ್ಷ, ಮತ್ತು 2) ಶಿವಮೊಗ್ಗದ ಟಿಪ್ಪುನಗರದ  ಇನಾಯತ್, (29) ರವರುಗಳನ್ನು ದಸ್ತಗಿರಿ ಮಾಡಿ,  ಅಂದಾಜು ಮೌಲ್ಯ 2,10,000/- ರೂಗಳ 5 ಕೆ.ಜಿ 250 ಗ್ರಾಂ ತೂಕದ ಒಣ ಗಾಂಜಾ ಅಂದಾಜು ಮೌಲ್ಯ 2,50,000/- ರೂಗಳ ಸ್ಕೋಡ ಕಾರು ಮತ್ತು 02 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಆರೋಪಿತರ ವಿರುದ್ಧ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0437/2023 ಕಲಂ 8(ಸಿ), 20(ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.‌

Related Articles

Leave a Reply

Your email address will not be published. Required fields are marked *

Back to top button