ರಾಗಿಗುಡ್ಡದಲ್ಲಿ ಲಾಠಿ ಚಾರ್ಜ್ ಕಲ್ಲುತೂರಾಟ 144 ಸೆಕ್ಷನ್ ಜಾರಿ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದ 8/1 ತಿರುವಿನಲ್ಲಿ ವಾಹನಗಳ ಮೇಲೆ ಕಲ್ಲುತೂರಲಾಗಿದೆ. ಲಾಠಿಚಾರ್ಜ್ ನಡೆದಿದೆ. ಮಾರುತಿ ವ್ಯಾನ್ ಮತ್ತು ದ್ವಿಚಕ್ರವಾಹನಗಳ ಮೇಲೆ ಕಲ್ಲು ತೂರಲಾಗಿದ್ದು ಕೆಲ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ರಾಗಿಗುಡ್ಡದ 9 ನೇ ತಿರುವಿನಲ್ಲಿ ಎಸ್ಪಿ ಮೇಲೆ ಕಲ್ಲು ತೂರಲಾಗಿದೆ
ರಾಗಿಗುಡ್ಡದಲ್ಲಿ ಸೆಕ್ಷನ್ 144 ಜಾರಿಹೊಳಸಲಾಗಿದೆ. ವಾಹನಗಳಲ್ಲಿ ಅನೌನ್ಸ್ ಮಾಡಲಾಗುತ್ತಿದೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಈದ್ ಮೆರವಣಿಗೆಯ ವೇಳೆ ಮೆರವಣಿಗೆಯ ಮೇಲೆ ಕಲ್ಲು ತೂರಲಾಗಿದೆ. ಎಂಬ ವಿಷಯದಲ್ಲಿ ಗಲಾಟೆಯಾಗಿದೆ. ಸ್ಥಳದಲ್ಲಿ ಎಸ್ಪಿ ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ ಸ್ಥಳದಲ್ಲಿಯೇ ಮೊಕ್ಕಂ ಹೂಡಿದ್ದಾರೆ.
ಬೆಳಿಗ್ಗೆ ಇಲ್ಲೆ ಚಾನೆಲ್ ಏರಿಯಾ ಮೇಲೆ ಟಿಪ್ಪು ಕಟೌಟ್ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಎಸ್ಪಿ ಸ್ಥಳದಲ್ಲಿ ಮೊಕ್ಕಂ ಹೂಡಿದ್ದರು. ಆದರೆ ಸಂಜೆಯ ವೇಳೆ ಕಲ್ಲು ತೂರಲಾಗಿದೆ. ಕಲ್ಲು ತೂರಿದ ಏಳು ಜನರನ್ನ ಪೊಲೀಸರು ವಶಕ್ಕೆ ಪಡೆಯಲಾಗಿದೆ. ಕಲ್ಲು ತೂರಿದ ಏಳು ಜನರ ಯುವಕರು ಮನೆಯೊಳಗೆ ಸೇರಿಕೊಂಡಿದ್ದರು.
ಇದಾದ ಬಳಕ ವಾಹನ ಮತ್ತು ಮನೆಗಳ ಗ್ಲಾಜುಗಳನ್ನ ಒಡೆಯಲಾಗಿದೆ. ಸ್ಥಳದಲ್ಲಿ ಪೊಲೀಸರು ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಅನೌನ್ಸ್ ಮಾಡುತ್ತಿದ್ದು ಜನರು ಗುಂಪು ಗುಂಪಾಗಿ ಸೇರಿಕೊಂಡಿದ್ದಾರೆ. ಗುಂಪು ಕಟ್ಟಿಕೊಂಡವರಿಗೆ ಪೊಲೀಸರು ಲಾಠಿ ಚಾರ್ಚ್ ಮಾಡಿ ಪರಿಸ್ಥಿತಿ ನಿಯಂತದರಿಸಿದ್ದಾರೆ.
ಇದನ್ನು ಓದಿ-https://suddilive.in/2023/10/01/ಈದ್-ಮೆರವಣಿಗೆಗೆ-ಚಾಲನೆ/
