ಪೂಸಲಾಯಿಸಿ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿಗಳಿಗೆ ಶಿಕ್ಷೆ ಪ್ರಕಟ

ಸುದ್ದಿಲೈವ್/ಶಿವಮೊಗ್ಗ

ಕೊರೋನಾ ಸಂದರ್ಭದಲ್ಲಿ ತಾಯಿಯ ಆರೈಕೆ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿಯನ್ನ ಪೂಸಲಾಯಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿದ ತಲಾ ನಾಲ್ವರಿಗೂ 20 ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ ಒಂದು ಲಕ್ಷ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ಎಫ್ ಟಿ ಎಸ್ ಸಿ (ತ್ವರಿತ ವಿಶೇಷ ನ್ಯಾಯಾಲಯ-2 ಪೋಕ್ಸೋ ನ್ಯಾಯಾಧೀಶರು) ತೀರ್ಪು ನೀಡಿ ಆದೇಶಿಸಿದ್ದಾರೆ.
ಮನೋಜ್, ಪ್ರಜ್ವಲ್, ವಿನಯ್, ಸಂದೀಪ್ ಶಿಕ್ಷೆಗೆ ಒಳಗಾದವರು, 2020 ಡಿ. 06 ರಂದು ಕೊರೋನ ಹಿನ್ನಲೆಯಲ್ಲಿ ಮೆಗ್ಗಾನ್ ಗೆ ದಾಖಲಾಗಿದ್ದ ತಾಯಿಯನ್ನ ನೋಡಿಕೊಳ್ಳಲು ಬಂದಿದ್ದ ಬಾಲಕಿಯನ್ನ ಊಟದ ವಿಚಾರದಲ್ಲಿ ಪೂಸಲಾಯಿಸಿ ಅಲ್ಲಿನ ವಾರ್ಡ್ ಬಾಯ್ ಕಾರಿನಲ್ಲಿ ಕರೆದೊಯ್ದಿದ್ದನು.
ಕೊರೋನ ವಿಚಾರದಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದ ವೇಳೆ ಊಟ ಸಿಗದ ಕಾರಣ ಊಟ ಸಿಗದೆ ಕಂಗಾಲಾಗಿದ್ದ ಅಪ್ರಪ್ತೆಯನ್ನ ವಾರ್ಡ್ ಬಾಯ್ ಮನೋಜ್ ಹೊರಡೆ ಊಟ ಕೊಡಿಸುವುದಾಗಿ ಸ್ನೇಹಿತರೊಂದಿಗೆ ತೆರಳಿದ್ದನು. ಕಾರಿನಲ್ಲಿಯೇ ಬಾಲಕಿಯ ಅತ್ಯಾಚಾರ ನಡೆದಿತ್ತು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಿಡಲಾಗಿತ್ತು.
ಅಲ್ಲಿದ್ದವರು ಗಮನಿಸಿ ಆಸ್ಪತ್ರೆ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿ ನಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆ ಸಂಬಂಧ ನಾಲ್ವರನ್ನ ಮಹಿಳಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಅಭಯ ಪ್ರಕಾಶ್ ಸೋಮನಾಳ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿ.ಎಸ್.ಮೋಹನ್ ಪ್ರಕರಣ ಕುರಿತು ತೀರ್ಪು ನೀಡಿ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 20 ವರ್ಷ ಸಜೆ ತಲಾ ಒಂದು ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ವಿಧಿಸಲು ವಿಫಲನಾದರೆ 6 ತಿಂಗಳ ಕಾರಾಗೃಹ ಶಿಕ್ಷೆ ಮತ್ತು ಅತ್ಯಾಚಾರಕ್ಕೊಳಗಾದ ವಾಲಕಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ-https://suddilive.in/archives/722
