ಕ್ರೈಂ ನ್ಯೂಸ್

ತೀರ್ಥಹಳ್ಳಿ ತಾಲೂಕಿನಲ್ಲಿ ಕೆಎಫ್ ಡಿ ಕಾಯಿಲೆ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಬಗ್ಗೆ ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಆಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ ಮೂರು ಜಿಲ್ಲೆಯಿಂದ ಇಂದು ನಾಲ್ಕು ಜನಕ್ಕೆ ಈ ಸೋಂಕು ಪತ್ತೆಯಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಂದೊಂದು ಮಂಗನ ಕಾಯಿಲೆ ಪತ್ತೆಯಾದರೆ ಶಿರಸಿ ಜಿಲ್ಲೆಯಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಕೂಲಿ ಕಾರ್ಮಿಕನೋರ್ವನಿಗೆ ಕೆಎಫ್ ಡಿ ಕಾಯಿಲೆ ಬಂದಿದೆ.

ಮೂರು ಜಿಲ್ಲೆಯಿಂದ ಇದುವರೆಗೂ 6077 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಂದೇ ದಿನ 180 ಜನರಿಗೆ ಪರೀಕ್ಷೆ ನಡೆಸಲಾಗಿದೆ. ಇಂದು 4 ಜನರಿಗೆ ಕೆಎಫ್ ಡಿ ಸೋಂಕು ಪತ್ತೆಯಾದರೆ, ಇದುವರೆಗೂ 160 ಜನರಿಗೆ ಈ ಸೋಂಕು ತಗುಲಿದೆ. 160 ಜನರಲ್ಲಿ 117 ಜನ ಕಾಯಿಲೆಯಿಂದ ಗುಣಮುಖರಾದರೆ, 9 ಜನ ಸಾವನ್ನಪ್ಪಿದ್ದಾರೆ.

34 ಜನರಲ್ಲಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದರಲ್ಲಿ ಶಿವಮೊಗ್ಗದಲ್ಲಿ 4 ಜನರಲ್ಲಿ ಮಂಗನ ಕಾಯಿಲೆ ಆಕ್ಟಿವ್ ಆಗಿದ್ದರೆ, ಓರ್ವರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಶಿರಸಿ ಜಿಲ್ಲೆಯಲ್ಲಿ 11 ಜನರಲ್ಲಿ ಸೋಂಕು‌ ಆಕ್ಟಿವ್‌ ಆಗಿದೆ. ಐವರು ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 19 ಜನರಿಗೆ ಸೋಂಕು ಆಕ್ಟಿವ್ ಆಗಿದ್ದರೆ, ಮೂವರು ಸಾವನ್ಬಪ್ಪಿದ್ದಾರೆ.‌ ಉಡುಪಿ ಜಿಲ್ಲೆಯಲ್ಲಿ ಓರ್ವರಿಗೆ ಸೋಂಕು ಪತ್ತೆಯಾದರೂ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.

ಇದನ್ನೂ ಓದಿ-https://suddilive.in/archives/10248

Related Articles

Leave a Reply

Your email address will not be published. Required fields are marked *

Back to top button