ರಾಜಕೀಯ ಸುದ್ದಿಗಳು

ಬಿಜೆಪಿ ಸಮಾವೇಶವೋ ಅಥವಾ ಮಾದಿಗ ಮುನ್ನಡೆ ಕಾರ್ಯಕ್ರಮವೋ…?

ಸುದ್ದಿಲೈವ್/ಶಿವಮೊಗ್ಗ

ಮಾದಿಗ ಮುನ್ನಡೆ ರಾಜ್ಯಾದ್ಯಂತ ಕಾರ್ಯಕ್ರಮ ನಡೆಯುತ್ತಿದ್ದು, ನಾಳೆ ಗಾಂಧಿ ಪಾರ್ಕ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಯಲಿದೆ.

ಈ ಕುರಿತು ಮಾತನಾಡಿದ ಮಾದಿಗ ಮುನ್ನಡೆ ಸಂಘಟನೆ ಶಿವಪ್ಪ ಒಳ ಮೀಸಲಾತಿ ಜಾರಿ ಕುರಿತು ಕಳೆದ 32 ವರ್ಷ ಹೋರಾಟ ನಡೆದಿದೆ. ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಸದಾಶಿವ ಆಯೋಗವನ್ನ ರಚಿಸಿದ್ದು ಆಯೋಗದ ವರದಿ ಜಾರಿಯಾಗಿಲ್ಲ ಎಂದು ಆರೋಪಿಸಿದರು.

11 ಕೋಟಿ ರೂ. ಹಣವನ್ನ ಸರ್ವೆಗೆ ಮೀಸಲಾಗಿಡಲಾಗಿತ್ತು. ಸರ್ವೆನೂ ನಡೆದಿತ್ತು. ವೈಚಾರಿಕ ನಿಲುವನ್ನ ಮಂಡಿಸಲು ಮನನ ಅದಿಗ ಮುನ್ನಡೆ ಸಭೆಯನ್ನ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಗೆ ಮನವಿ ಮಾಡಲಿದ್ದೇವೆ. ಪ್ರಧಾನಿ ಮನ್ನಣೆ ಮಾಡಲಿದ್ದಾರೆ ಎಂಬ ಭರವಸೆ ಇದೆ ಎಂದರು.

ಪಕ್ಷಬೇಧ ಸಮಾವೇಶ ಎಂದ ಶಿವಪ್ಪರಿಗೆ ಪಕ್ಷತೀತ ಎಂಬ ಹೇಳಿಕೆಗೆ ಸಂಘಟನೆಯ ಕರಪತ್ರದಲ್ಲಿ ಬಿಜೆಪಿಯ ನಾಯಕರ ಫೋಟೊ ಹಾಕಿದ್ದೀರಿ, ಉಳಿದ ಪಕ್ಷದ ನಾಯಕರ ಫೊಟೊ ಹಾಕಿಲ್ಲ ಎಂಬ ಪ್ರಶ್ನೆಗೆ ಸಂಘಟನೆ ಮುಜುಗರ ಹೊಂದಿತು. ಇದು ನೇರವಾಗಿ ಬಿಜೆಪಿ ಸಮಾವೇಶ ಅಲ್ಲವಾ ಎಂಬ ಪ್ರಶ್ನೆಗೆ ಸಂಘಟಿಕರ ಸಮ್ಜಾಯಿಷಿ ನೀಡಲು ಪರದಾಡಿದರು.

ಒಳಮೀಸಾತಿ ವಿಷಯವನ್ನ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಜವಬ್ದಾರಿ ಹಾಕಿದೆ. ಕೇಂದ್ರ ಸರ್ಕಾರವನ್ನ ಯಾಕೆ ಒತ್ತಾಯಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಪ್ಪ ಎಲ್ಲರನ್ನೂ ಸಮಾವೇಶಕ್ಕೆ ಕರೆದಿದ್ದೇವೆ. ಬಿಜೆಪಿ ಪಕ್ಷ ಅಧಿಕರದಲ್ಲಿದ್ದಾಗ ಮಾದಿಗ ಸಮುದಾಯಕ್ಕೆ ಅನುಕೂಲವಾಗಿದೆ. ಹಾಗಾಗಿ ಬಿಜೆಪಿ ನಾಯಕರನ್ನ ಕರೆದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯ, ಶಿವಾಜಿ, ಚಂದ್ರಣ್ಣ, ಭದ್ರಾವತಿಯ ರಾಜು ರವೀಂದ್ರ, ಲೋಲಾಕ್ಷಿ, ಬೀರನಕೆರೆ ಮಂಜಣ್ಣ, ರಮೇಶ್ ಹೊಳೆಹೊನ್ನೂರು, ಕೆಂಪಮ್ಮ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/7239

Related Articles

Leave a Reply

Your email address will not be published. Required fields are marked *

Back to top button