ರಾಜಕೀಯ ಸುದ್ದಿಗಳು

ನಾಡಗೀತೆ ಬದಲು ಆಜಾನ್ ಹೇಳುಸ್ತೀರಾ-ಶಾಸಕ ಚೆನ್ನಬಸಪ್ಪ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರದ ನಡೆಯ ಬಗ್ಗೆ ಮತ್ತು ಶಿವಮೊಗ್ಗದಲ್ಲಿ ರಾಗಿಗುಡ್ಡದಲ್ಲಿ ನಡೆದ ಕೋಮುಗಲಭೆ ಮತ್ತು ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಪೆಟ್ಟಿಗೆ ವಿಚಾರ ಮತ್ತು ನಾಡ ಗೀತೆ ಕಡ್ಡಾಯವಲ್ಲ ಎಂಬುದರ‌ ಬಗ್ಗೆ ಶಾಸಕ ಚೆನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ. ನಾಡ ಗೀತೆ ಬದಲು‌ ಆಜಾನ್ ಹಾಕ್ತೀರಾ ಎಂದು ಅವರು ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವರು ಪರೀಕ್ಷಾ ವೇಳಾ ಪಟ್ಟಿಯ ಬಗ್ಗೆ ಮಾತನಾಡಿ ವಾರವಿಡೀ ಬೆಳಿಗ್ಗೆ ಮತ್ತು ಮಧ್ಯಾಹ್ನ ಪರೀಕ್ಣೆ ನಡೆಯುತ್ತಿದೆ. ಶುಕ್ರವಾರ ಮಾತ್ರಮಧ್ಯಾಹ್ನದ ನಂತರ ಪರೀಕ್ಷೆ ಯಾಕೆ ಎಂದು ಗುಡುಗಿದರು.

ನಾಡಗೀತೆಯನ್ನ ನಿಲ್ಲಿಸಿದ್ದೀರಿ. ಜ್ಞಾನದೇಗುಲ ವಿದು ಕೈಮುಗಿದುಬೊಳಗೆ ಬಾ ಎಂಬ ರಾಷ್ಟ್ರಕವಿಯ ಸ್ಲೀಗನ್ ಮತ್ತು ಹಾಡನ್ನೇ ಟಾರ್ಗೆಟ್ ಯಾಕೆ ಮಾಡಲಾಗಿದೆ. ಕೇರಳದಲ್ಲಿ ಆನೆ ತುಳಿತಕ್ಕೆ ಸಾವನ್ನಪ್ಪಿದರೆ ಕರ್ನಾಟಕ ರಾಜ್ಯ ಪರಿಹಾರ ಕೊಡುತ್ತೆ. ಆದರೆ ಸಿಎಂ ನೇತೃತ್ವದಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ನಡೆಸಿದ್ದೇಕೆ ಎಂದು ಗುಡುಗಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾವು ಅಂದುಕೊಂಡತಿಲ್ಲ ಎಂದು ಸದನದಲ್ಲಿ ಮಾತನಾಡಿದ್ದೆ. ರೈಲ್ವೆ ನಿಲ್ದಾಣದ ಬಳಿ ನಡೆದ ಘಟನೆಯ ಬಗ್ಗೆ ವಿವರವಾಗಿ ಮತ್ತೆ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪುಸಿದ ಶಾಸಕರು, ಪೆಟ್ಟಿಗೆಯಲ್ಲಿ ದೊರೆತ ಉಪ್ಪು ಯಾವ ಕಂಪನಿದು? ಮೊದಲಿಗೆ ಪೌಡರ್ ಎಂದ್ರಿ ಮತ್ತೊಂದು ಕಡೆ ಉಪ್ಪು ಎಂದ್ರಿ,

ಪೆಟ್ಟಿಗೆಯಲ್ಲಿಯ ವಸ್ತು ಪತ್ತೆ ಮಾಡಿ ಇನ್ನೂ ಠಾಣೆಗೆ ತೆಗೆದುಕೊಂಡು ಹೋಗಿಲ್ಲ. ಎಫ್ ಎಸ್ ಎಲ್ ವರದಿ ಬಂದಿಲ್ಲ. ಪೆಟ್ಟಿಗೆಯಲ್ಲಿ ಏನಿದೆ ಎಂಬುದನ್ನ ಎಸ್ಪಿ ಬೆಳಗ್ಗಿನ ಜಾವ ಮಾಧ್ಯಮ‌ ಪ್ರಕಟಣೆ ಮಾಡಿ ಉಪ್ಪು ಎನ್ನುತ್ತಾರೆ. ಅವತ್ತು ಪೌಡರ್ ಎನ್ನಲಾಗಿತ್ತು. ಅದಕ್ಕೆ ನಾನು ಮುಖಕ್ಕೆ ಹಚ್ಚಿಕೊಳ್ಳುವ ಪೌಡರ್ ಅಲ್ಲ ಎಂದಿದ್ದೆ. ತಿಪಟೂರಿನಲ್ಲಿ ನಡೆದ ಘಟನೆಯನ್ನ ಶಿವಮೊಗ್ಗದಲ್ಲಿ ನಡೆದಿದೆ ಎನ್ನಲಾಯಿತು.

ಆದರೆ ಶಿವಮೊಗ್ಗ ಸೂಷ್ಮ ಪ್ರದೇಶವಾಗಿದೆ. ಪೌಡರ್ ಇದ್ದರೆ ಸತ್ಯಸಂಗತಿ ಹೊರಗೆ ಬರಬೇಕು. ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿರುವುದು ದಾಖಲಾತಿ ಇಲ್ಲದೆ ಪ್ರಸ್ತಾಪಿಸಿಲ್ಲ.ಬಾಂಬ್ ಸ್ಕ್ವಾಡ್ ಗೆ ನಾನು ಎಂಎಲ್ ಎ ಅಂತ ಗೊತ್ತಿರಲಿಲ್ಲ. ಆಷ್ಟು ಹೊತ್ತಿಗೆ‌ಮಾಹಿತಿ ನೀಡಿದ್ದರು. ನನು ಎಂಎಲ್ ಎ ಅಂದ ನಂತರ ಅವರು ವಿವರವಾಗಿ ನೀಡಿದರು. ಅಷ್ಟು ಹೊತ್ತಿಗೆ ಉಪ್ಪು ಎಂದು ಹೇಳಲಾಯಿತು. ಈ ಅವಸರವೇಕೆ ಎಂದು ಪ್ರಶ್ನಿಸಿದರು.

ರಾಗಿಗುಡ್ಡದಲ್ಲಿ ನಡೆದ ಗಲಭೆ ಏನಾಯಿತು? ಹಿಂದೂಗಳ ಮನೆ ಹಾನಿಯಾಗಿದೆ ಪರಿಹಾರ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದ ಶಾಸಕರು, ಹಿಂದೂಗಳು ಮುಸ್ಲೀಂಗೆ ಹೊಡೆದರೆ ಮಾತ್ರ ಕೋಮುಗಲಭೆನಾ? ಅಥವಾ ಮುಸ್ಲೀಂರು ಹಿಂದೂಗಳಿಗೆ ಹೊಡೆದರೂ ಕೋಮುಗಲಭೆ ಆಗುತ್ತ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ರಾಗಿಗುಡ್ಡದಲ್ಲಿ ಬರೀ ಮುಸ್ಲೀಂ ಮನೆ ಹಾನಿ ಮಾಡಿದರೆ ಇಷ್ಟು ಹೊತ್ತಿಗೆ ಪರಿಹಾರ ಕೊಡಲಾಗುತ್ತಿತ್ತು ಆದರೆ ಹಾನಿಯಾಗಿರುದು ಹಿಂದೂ ಮನೆಗಳು. ಪರಿಹಾರ ನೀಡಲಿಲ್ಲ. ಹೋಗಲಿ ಕೋಮುಗಲಭೆ ಎಂದರೆ ಏನು ಎಂಬ ವಿವರಣೆಕೊಡಿ. ಹಿಂದೂಗಳು ಗಲಾಟೆ ಮಾಡಿದಾಗ ಮಾತ್ರ ಅಂತನಾದರೂ ಹೇಳಿ ಎಂದು ಆಗ್ರಹಿಸಿದರು.

ಇದನ್ನೂ ಓದಿ-https://suddilive.in/archives/9362

Related Articles

Leave a Reply

Your email address will not be published. Required fields are marked *

Back to top button