ರಾಜ್ಯ ಸುದ್ದಿಗಳು

ಆಯನೂರಿನ ಗುರುಬಲ ಬಿಜೆಪಿಯಲ್ಲಿದ್ದಾಗ ಮಾತ್ರ-ಎಸ್ಪಿ ದಿನೇಶ್

ಸುದ್ದಿ ಲೈವ್/ಶಿವಮೊಗ್ಗ

ನೈರುತ್ಯಪದವೀಧರ ಕ್ಷೇತ್ರದಲ್ಲಿ 2006 ರಿಂದ ತಯಾರಿ ಮಾಡಿಕೊಂಡು ಬಂದಿದ್ದು, ಪಕ್ಷ 2006 ರಲ್ಲಿ ಸ್ಪರ್ಧಿಸಲಿಲ್ಲ,2012 ರಲ್ಲಿ ಶಂಕರ ಮೂರ್ತಿ ವಿರುದ್ಧ ಅಲ್ಪ ಮತಗಳೊಂದಿಗೆ ಸೋಲು ,2018 ರಲ್ಲಿ 16900ಕ್ಕೂ ಹೆಚ್ಚು ಮತ ಪಡೆದಿದ್ದೆ ಎಂದು ಕಾಂಗ್ರೆಸ್ ನ ಎಸ್ಪಿ ದಿನೇಶ್ ತಿಳಿಸಿದರು.

ಈ ಬಾರಿಯೂ ಪಕ್ಷದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇನೆ. ಪಕ್ಷದಿಂದ ಅಧಿಕೃತ ಹೆಸರು ಪ್ರಕಟವಾಗಬೇಕಿದೆ. ಆಯನೂರು ಮಂಜುನಾಥ್ ಮತ್ತು ನನ್ನ ಹೆಸರು ಎಐಸಿಸಿಗೆ ಹೆಸರು ಹೋಗಿದೆ ಎಂದು ತಿಳಿದಿದರು.

2012 ರಿಂದ 63 ಸಾವಿರ ಮತ ಪಕ್ಷದಲ್ಲಿ ನೋಂದಣಿ ಆಗಿ ಮತವಾಗಿತ್ತು. 2018 65 ಸಾವಿರ ಮತಗಳು ನೋಂದಣಿ ಆಗಿತ್ತು. ಈ ಬಾರಿ 74 ಸಾವಿರ ಮತಗಳು ನೋಂದಣಿ ಆಗಿದೆ. 6 ಜಿಲ್ಲಾ ಕ್ಷೇತ್ರಗಳು ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸೇರಲಿದೆ.

40% ಮತಗಳು ಇಲಾಖೆಯಿಂದಲೇ ನೋಂದಣಿ ಆಗಿದೆ. ಆರೋಗ್ಯ, ಶಿಕ್ಷಣ ಇಲಾಖೆಯಿಂದಲೇ ನೋಂದಣಿ ಆಗಿದೆ. 32 ವರ್ಷದಿಂದ ಕಾಂಗ್ರೆಸ್ ನ ವಿವಿಧ ವಿಭಾಗದಲ್ಲಿ ಕೆಲಸ ಮಾಡಿರುವೆ. ಸೋತರೂ ಯಾವ ಪಕ್ಷಕ್ಕೂ ಜಂಪ್ ಆಗಿಲ್ಲ. ಪಕ್ಷದ ನಿಷ್ಠೆಯನ್ನ ಗುರುತಿಸಿ ನನ್ನ ಹೆಸರನ್ನ ಪ್ರಕಟಿಸುವ ನಿರೀಕ್ಷೆ ಇದೆ ಎಂದರು.

ಆಯನೂರು ಕುರಿತು ದಿನೇಶ್ ಮಾತು

ಆಯನೂರು ಮಂಜುನಾಥ್ ತಾನೇ ಅಭ್ಯರ್ಥಿಯೆಂದು ಘೋಷಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ದಿನೇಶ್ ಯಾರ ಹೆಸರು ಫೈನಲ್ ಆಗಿಲ್ಲ. ಯಾವ ಕಮಿಟ್ ಮೆಂಟ್ ಕೆಪಿಸಿಸಿ ಮಾಡಿಕೊಂಡಿಲ್ಲವೆಂದು ಸ್ಪಷ್ಟಪಡಿಸಿದರು.

ಅಕ್ಕಪಕ್ಕದ ಊರಿನವರು

ಆಯನೂರು ಮಂಜುನಾಥ್ ನನ್ನ ಹೆಸರು‌ ಫೈನಲ್ ಆದರೆ ನನ್ನ ಪರ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನಾನು ಸಿರಿಗೆರೆಯವನು, ಅವರು ಆಯನೂರಿನವರು ಅಕ್ಕಪ್ಪದ ಊರಿನವರು. ಆದರೆ ಆಯನೂರಿಗೆ ಟಿಕೇಟ್ ಸಿಕ್ಕರೆ ತಮ್ಮ ನಿಲುವೇನು ಎಂಬುದು ದಿನೇಶ್ ಸ್ಪಷ್ಟಪಡಿಸದೆ ಇರುವುದು ಕುತೂಹಲ‌ದಿಂದ ಕೂಡಿದೆ. ಆಯನೂರಿಗೆ ಗುರುಬಲ ಬಿಜೆಪಿಯಂದ ಅಷ್ಟೆ ಆದರೆ ಬೇರೆ ಪಕ್ಷದಲ್ಲಿ ಅವರಿಗೆ ಗುರು ಬಲ ಇಲ್ಲ .

ಮೂಲಕಾಂಗ್ರೆಸ್ ಗರು ಎಂಬ ಪ್ರಶ್ನೆ ಇದೆಯಾ?

ನಾಲ್ಕು ಮನೆಯನ್ನ ಕಂಡ ಆಯನೂರು ಅವರಿಗೆ ಬಿಜೆಪಿಯಲ್ಲಿದ್ದಾಗ ಮಾತ್ರ. ಇತರೆ ಪಕ್ಷದಿಂದ ಸ್ಪರ್ಧಿಸಿದಾಗ ಸೋತಿದ್ದೇ ಹೆಚ್ಚು ಎಂದು ದಿನೇಶ್ ಅವರ ಸೋಲನ್ನ ನೆನಪಿಸಿದ್ದಾರೆ.

ಮೂಲಕಾಂಗ್ರೆಸ್ ಗೆ ಪಕ್ಷ ಟಿಕೇಟ್ ಕೊಡುತ್ತೆ  ಎಂಬ ವಿಶ್ವಾಸ ವ್ಯಕ್ತಪಡಿಸಿದ ದಿನೇಶ್ ಗೆ ಮಾಧ್ಯಮ ಪ್ರತಿನಿಧಿಗಳಿಂದ ತಕ್ಷಣವೇ ಹಾಗಾದರೆ ಮೂಲ ಮತ್ತು ವಲಸಿಗ ಎಂಬುದು ಪಕ್ಷದಲ್ಲಿ ಇದೆಯಾ ಎಂದು ಕೇಳಿ ಪ್ರಶ್ನೆಗೆ ದಿನೇಶ್ ಅಂತಹದ್ದೇನು ಇಲ್ಲ. 32 ವರ್ಷ ಪಕ್ಷಕ್ಕಾಗಿ ದುಡಿದವನು ನಾನು. ಸೋತಾಗಲೂ ಎಲ್ಲೂ ಹೋಗಿಲ್ಲ ಎಂದು ಪರೋಕ್ಷವಾಗಿ ಆಯನೂರವರನ್ನ ಕುಟುಕಿದರು.

ಆಯನೂರು ಮಂಜುನಾಥ್ ಅವರು ಪಕ್ಷಕ್ಕೆ ಸೇರುವ ಮೊದಲು ಮಂಜಣ್ಣನ ಸ್ನೇಹಿತರೊಬ್ಬರು ಬೆಂಗಳೂರಿನಲ್ಲಿದ್ದಾಗ ಬಂದು ಪಕ್ಷ ಸೇರ್ಪಡೆಗೆ ಆಕ್ಷೇಪಿಸದಂತೆ ಮನವಿ ಮಾಡಿಕೊಂಡಿದ್ದರು. ಯಾವ ಚುನಾವಣೆಗೂ ಸ್ಪರ್ಧಿಸೊಲ್ಲ ಎಂಬ ಮಾತು ಸಹ ಹೇಳಿದ್ದರು. ಪಕ್ಷ ಸೇರಿ ನಾಲ್ಕೇ ದಿನಕ್ಕೆ ಅರ್ಜಿ ಹಾಕಿದ್ದರು ಎಂದು ಎಸ್ಪಿ ದಿನೇಶ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಎನ್ ರಮೇಶ್, ವಿಶ್ವನಾಥ್ ಕಾಶಿ, ರಾಜಶೇಖರ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮರ್, ರಂಗನಾಥ್, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ, ಮಧುಸೂಧನ್, ಎನ್ ಎಸ್ ಯು ಐನಬಚೇತನ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/7234

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373