ರಾಜಕೀಯ ಸುದ್ದಿಗಳು

ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ-ಜೋರಾಗಿದೆ ಚರ್ಚೆ!

Bjp||ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಬಗ್ಗೆ ಹೆಚ್ಚು ಕುತೂಹಲ ಮೂಡಿಸಿದೆ. ಶಾಸಕರು ಸೇರಿ ನಾಲ್ವರ ಹೆಸರು ಮುನ್ನೆಲೆಯ ಚರ್ಚೆಯಲ್ಲಿದೆ. ಆದರೂ ಅದು ಬಿಜೆಪಿ ಅಚ್ಚರಿಯ ಹೆಸರು ಪ್ರಕಟವಾಗೋದ್ರಲ್ಲಿ ಡೌಟೇ ಬೇಡ!

  ಸುದ್ದಿಲೈವ್/ಶಿವಮೊಗ್ಗ

ಬಿ.ವೈ ವಿಜೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿಯ ಎಲ್ಲಾ ಪದಾಧಿಕಾರಗಳ ಬದಲಾವಣೆಯಾಗಲಿದೆ. ಬದಲಾವಣೆಯಾಗುವ ಬೆನ್ನಲ್ಲೇ ಯಾರು ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆಯಾಗಲಿದೆ ಎಂಬುದು ಮಾತ್ರ ಕುತೂಹಲ

ಬದಲಾವಣೆಗೆ ಶಿವಮೊಗ್ಗ ಜಿಲ್ಲಾಧ್ಯಕ್ಷರ ಆಯ್ಕೆ ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಜಿಲ್ಲಾಧ್ಯಕ್ಷನ ಅಧ್ಯಕ್ಷನ ಆಯ್ಕೆ ಮತ್ತು ಯಾವಾಗ ಆಗಲಿದೆ  ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ. ಆದರೆ ಬಿಜೆಪಿ ಪಕ್ಷ ಮಾತ್ರ ಯಾವ ಚರ್ಚೆಯನ್ನಾಗಲಿ ಅಥವ ಕುತೂಹಲವನ್ನಾಗಲಿ ಪರಿಗಣಿಸಿಯೇ ಇಲ್ಲ.

ಯಾವಗಲೂ ಸರ್ಪರೈಸ್ ಘೋಷಣೆಯೇ ಅಂತಿಮ. ಆದರೂ ಜನರ ಕುತೂಹಲಕ್ಕೆ ಈ ಆರ್ಟಿಕಲ್ ಮಹತ್ವ ಪಡೆದುಕೊಳ್ಳಲಿದೆ. ಹಾಲಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಆಯ್ಕೆ ಐದು ವರ್ಷಗಳು ಕಳೆದಿದ್ದು ರಾಜ್ಯಧ್ಯಕ್ಷ ನೂತನ ಆಯ್ಕೆಯಾದ ಬೆನ್ನಲ್ಲೇ ಹೊಸ ಪದಾಧಿಕಾರಿಗಳು ಅಸ್ಥತ್ವಕ್ಕೆ ಬರಲಿದ್ದಾರೆ.

ಈ ಕುರಿತು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಿಂದ ಜ.2 ರಂದು ಇಬ್ಬರು ವೀಕ್ಷಕರು ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರತ್ಯೇಕವಾಗಿ ಶಾಸಕರು, ಮಾಜಿ ಶಾಸಕರು, ಬೂತ್ ಅಧ್ಯಕ್ಷರನ್ನ ಒಳಗೊಂಡ 40 ಮಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಏನು ಮಾಹಿತಿ ಎಂಬುದು ಇನ್ನೂ ಸಸ್ಪೆನ್ಸ್ ಆಗಿದೆ. ಅಶ್ವಿನ್ ಗೌಡ ಮತ್ತು ಶೈಲೇಂದ್ರ ಬೆಂದಾಳೆಯಿಂದ ಮಾಹಿತಿ ಸಂಗ್ರಹವಾಗಿದೆ.

ಅನುಭವದ ಹಿನ್ನಲೆಯಲ್ಲಿ ನಾಲ್ಕು ಜನರ ಹಿರಿಯ ಹೆಸರು ಈಗಾಗಲೇ ಓಡಾಡುತ್ತಿದೆ. ಶಾಸಕ ಚೆನ್ನಬಸಪ್ಪ, ಶಿವರಾಜ್, ಪ್ರಸನ್ನ ಕೆರೆಕೈ, ಹಾಗೂ ಹರಿಕೃಷ್ಣರ ಹೆಸರು ಮುನ್ನೆಲೆಯಲ್ಲಿ ಚರ್ಚೆಯಾಗುತ್ತಿದೆ. ಇವರನ್ನೆಲ್ಲಾ ಬಿಟ್ಟು ಅಚ್ಚರಿಯ ಹೆಸರು ಆಯ್ಕೆಯಾದರೂ ಅಚ್ಚರಿ ಪಡುವಂತಿಲ್ಲ. ಕಾರಣ ಅದು ಬಿಜೆಪಿ. ಬಿಜೆಪಿಯಲ್ಲಿ ಅಚ್ಚರಿಯ ಹೆಸರು ಪ್ರಕಟವಾಗೋದೆ ಹೆಚ್ಚು.

ಯಾವಾಗ ಆಯ್ಕೆ?

ಇನ್ನು ಬಿಜೆಪಿಯಲ್ಲಿ ಯಾವಾಗ ನೂತನ ಜಿಲ್ಲಾ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗೋದು ಎಂಬುದು ಕುತೂಹಲ ಹೆಚ್ಚಾಗಿದೆ. ಕೆಲವರ ಪ್ರಕಾರ ನಾಳೆಯೇ ಆಗಲಿದೆ ಎಂದು ಕೇಳಿಬರುತ್ತಿದೆ. ಕೆಲವರ ಪ್ರಕಾರ ಸಂಕ್ರಮಣ ಹಬ್ಬದ ಒಳಗೆ ಎಂಬ ಮಾತು ಕೇಳಿ ಬರುತ್ತಿದೆ. ಇಂದು ಕೋರ್ ಕಮಿಟಿ ಸಭೆ ಬೆಂಗಳೂರಿನಲ್ಲಿ ನಡೆದರೆ ನಾಳೆಯೇ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕಟವೆಂಬುದು ಕೆಲವರ ಹೇಳಿಕೆ. ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/6457

Related Articles

Leave a Reply

Your email address will not be published. Required fields are marked *

Back to top button