ರಾಜಕೀಯ ಸುದ್ದಿಗಳು

ರಾಜ್ಯ ಸರ್ಕಾರ ರಜೆ ಘೋಷಿಸಲಿ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ವೇಳೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ರಜೆ ಘೋಷಿಸಿದಂತೆ ರಾಜ್ಯ ಸರ್ಕಾರವೂ ರಜೆ ಘೋಷಿಸಬೇಕು ಮತ್ತು ಉದ್ಘಾಟನೆ ಆಗುವ ವರೆಗೂ ಯಾರೊಬ್ಬರೂ ರಾಮನ ಬಗ್ಗೆ ಮಾತನಾಡದಂತೆ ಮಾಜಿ ಡಿಸಿಎಂ ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 500 ವರ್ಷಗಳ ರಾಮ ಮಂದಿರವನ್ನ ಮುಕ್ತಮಾಡಿ, ವಿದೇಶಿ‌ ಬಾಬರ್ ನ ಮಸೀದಿ ಎಂದು ಕರೆಯಲಾಗುತ್ತಿರುವ ಮಸೀದಿಯನ್ನ ಕೆಡವಿ ರಾಮ ಮಂದಿರ ನಿರ್ಮಿಸಿದ್ದಕ್ಕೆ ಕೋಟಿ ರಾಮಭಕ್ತರಿಗೆ ಜ.22 ರಂದು ಸಂತೋಷದ ದಿನವಾಗಿದೆ. ಇವತ್ತಿನಿಂದ ಮುಂದಿನ ನಾಲ್ಕೈದು ದಿನ ಶ್ರೀರಾಮನ ಬಗ್ಗೆ ಯಾರೂ ಟೀಕೆ ಟಿಪ್ಪಣಿ ಮಾಡದಂತೆ ಎಚ್ಚರ ವಹಿಸೋಣ ಎಂದು ತಿಳಿಸಿದರು.

ಗುಲಾಮಗಿರಿಯ ಸಂಕೇತವಾಗಿದ್ದ ಬಾಬರ್ ಮಸೀದಿಯ ಜಾಗದಲ್ಲಿಯೇ ರಾಮನ ಮಂದಿರ ನಿರ್ಮಿಸಲಾಗಿದೆ. ಮರ್ಯಾದೆ ಪುರುಷೋತ್ತಮ ರಾಮ ಮಂದಿರ ಕ್ಕೆ ಕರ್ನಾಟಕ ಸರ್ಕಾರ ಉದ್ಘಾಟನೆಯ ದಿನ ರಜೆ ಘೋಷಿಸಬೇಕೆಂದು ಮನವಿ ಮಾಡಿಕೊಂಡರು.

ಅಯೋಧ್ಯದಲ್ಲಿ ರಾಮಮಂದಿರ ಉದ್ಘಾಟನೆಯನ್ನ ಎಲ್ಲಾ ಟಿವಿಯಲ್ಲಿ ತೋರಿಸಲಾಗುತ್ತಿದೆ. ಹಾಗಾಗಿ ರಾಜ್ಯದ ಸಿಎಂರಿಗೆ ಜನ ಸಂತೋಷವಾಗಿ ರಾಮ ಮಂದಿರ ಸಂಭ್ರಮಾಚರಣೆಯನ್ನ ವೀಕ್ಷಿಸಲು ಮತ್ತು ಭಾಗಿಯಾಗಲು ರಜೆ ಘೋಷಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.
ರಾಮನ ಅಸ್ಥಿತ್ವವನ್ನೇ ಪ್ರಶ್ನಿಸಲಾಗುತ್ತಿದ್ದ ಸಮಯದಲ್ಲಿ ರಾಮ ಮಂದಿರ ಉದ್ಘಾಟನೆಗೆ ಮುಸ್ಲೀಂರು ಸಹ ಭಾಗಿಯಾಗುತ್ತಿದ್ದಾರೆ. ಮತ್ತು ಅಯೋಧ್ಯಗೆ ಹೋಗುವುದಾಗಿ ಹೇಳಿದ್ದಾರೆ. ಎಐಸಿಸಿ ಗೊಂದಲದಲ್ಲಿತ್ತು. ಮೊದಲಿಗೆ ಯಾರು ಬೇಕಾದರೂ ಹೋಗಿ ಎಂದರು. ನಂತರ ಬೇಡ ಎಂದರು. ಕೆಪಿಸಿಸಿಯವರು ಜ.22 ರ ನಂತರ ಹೋಗುವುದಾಗಿ ಹೇಳಿದರು. ನಂತರ ಇಲ್ಲ ಎಂದರು. ನಾವು ಏನೇ ರಾಜಕಾರಣ ಮಾಡೋಣ ಆದರೆ ರಾಮನ ಬಗ್ಗೆ ರಾಜಕಾರಣ ಮಾಡುವುದನ್ನ ನಿಲ್ಲಿಸೋಣ ಎಂದರು.

ಗಾಂಧಿಯ ಸಮಾದಿಯ ಮೇಲೆ ಹೇ ರಾಮ್ ಎಂದು ಬರೆಯಲಾಗಿದೆ. ಮಥುರಾ, ಕಾಶಿ ವಿಚಾರದಲ್ಲಿ ಏನಾಗಲಿದೆ ಬಿಡಲಿದೆ ಗೊತ್ತಿಲ್ಲ. ಆದರೆ ನಮ್ಮ‌ಕಣ್ಣಮುಂದೆ ಆಗುತ್ತಿರುವ ಕಾರ್ಯಕ್ರಮ ಅಯೋದ್ಯ ರಾಮ ಮಂದಿರ ಹಾಗಾಗಿ ರಾಜಕಾರಣ ಬಿಟ್ಟು‌ಪಾಲ್ಗೊಳ್ಳೋಣ ಎಂದರು.

ಸ್ಕೇಟಿಂಗ್ ನಲ್ಲಿ ಬೈಕ್ ರ್ಯಾಲಿ ಯಲ್ಲಿ ಸಾರ್ವಜನಿಕರು ಅಯೋಧ್ಯವನ್ನ ತಲುಪುತ್ತಿದ್ದಾರೆ. ಇಡೀ ಪ್ರಪಂಚಕ್ಕೆ ಸಂಭ್ರಮಿಸಲಾಗುತ್ತಿದೆ.‌ಮನೆಯ ಮುಂದೆ ದೀಪ ಹಚ್ಚಬೇಕು ಎಂದು ಪ್ರಧಾನಿ‌ಮೋದಿ ಕರೆ ನೀಡಿದ್ದಾರೆ. ನಾಲ್ಕೈದು ದಿನ‌ಟೀಕೆ ಬಿಟ್ಟು ರಾಮ ಮಂದಿರ ನಿರ್ಮಾಣದ ಸಂತೋಷ ಹಂಚಿಕೊಳ್ಳೋಣ ಎಂದು ಕರೆ ನೀಡಿದ್ದಾರೆ.

ರಾಹುಲ್ ಗೆ ಅಧಿಕಾರವಿದೆಯಾ?

ಭಾರತ್ ಜೋಡೋ ಪದ ಬಳಸಲು ರಾಹುಲ್ ಗೆ ಅಧಿಕಾರ ಇದೆಯಾ? ಪಾಕ್ ವಿಭಾಗವಾದಾಗ ರಾಹುಲ್ ಅಜ್ಜನೇ ಇದ್ದರು. ಗಾಂಧೀಜಿಯವರ ಮಾತು ಮೀರಿ ವಿಭಾಗವಾಯಿತು.‌ ಅಧಿಕಾರಕ್ಕಾಗಿ ಭಾರತವನ್ನ ವಿಭಾಗ ಮಾಡಲಾಯಿತು. ಹಾಗಾಗಿ ರಾಹುಲ್ ಗೆ ಭಾರತ್ ಜೋಡೋ ಎಂಬ ಪಾದಯಾತ್ರೆ ಅನ್ಯಾವಾಗಿದೆ ಎಂದರು.

ಗೊಂಬೆಯಲ್ಲೂ ರಾಮನಿದ್ದಾನೆ

ಕೆಆರ್ ಎಸ್ ನ ಅಡಿಗಲ್ಲು ಹಾಕಿದವನು ಟಿಪ್ಪು ಎಂದು ಎನ್ ರಾಜಣ್ಣ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಕೆಲವರಿಗೆ ಟಿಪ್ಪು ರಕ್ತ ಇನ್ನೂ ಹರಿಯುತ್ತಿದೆ ಎಂದು ಆರೋಪಿಸಿದರು. ರಾಮನನ್ನ ಟೀಕಿಸುವವರು ರಾಮಾಯಣವನ್ನ ಓದುತ್ತಿದ್ದಾರೆ. ರಾಮನ ಬಗ್ಗೆ ಪೂರ್ಣವಾಗಿ ತಿಳಿಯಲಾದವರು ಹೆಚ್ಚು ಜನ ಇದ್ದಾರೆ ಎಂದರು.

ಗೊಂಬೆ ಎಂದು ಹೇಳಿರುವ ರಾಜಣ್ಣನಿಗೆ ಟೀಕಿಸಿದ ಈಶ್ವರಪ್ಪ‌ ಗೊಂಬೆಯಲ್ಲೂ ರಾಮ ಇದ್ದಾನೆ. ಸಂಸದ ಅನಂತ ಕುಮಾರ್ ಹೆಗಡೆ ಮತ್ತು ಸಿದ್ದರಾಮಯ್ಯನವರು ನಾಲ್ಕೈದು ದಿನ ರಾಮನ ಬಗ್ಗೆ ಮಾತನಾಡುವುದು ಬೇಡ ಎಂದ ಈಶ್ವರಪ್ಪ ಸಂಸದ ಹೆಗಡೆ ರಾಷ್ಟ್ರಭಕ್ತ, ರಾಮಭಕ್ತ, ಹುಬ್ಬಳ್ಳಿಯ ಈದ್ಗಾದಲ್ಲಿ ರಾಷ್ಟದ ಧ್ವಜ ಹಾರಿಸಲು ಮುಂದಾದ ವ್ಯಕ್ತಿ ಎಂದರು.

ಅಲ್ಲಮನ ಹೆಸರಿಟ್ಟ ತಕ್ಷಣ ಲಿಂಗಾಯಿತರು ಕಾಂಗ್ರೆಸ್ ಕಡೆ ವಾಲುತ್ತಾರಾ?

ನಾನು ಕುರುಬ,  ಮನೆದೇವರು ಮಲ್ಲೇಶ್ವರ, ಅಣ್ಣ ಗಂಗಾಧರ, ಅಕ್ಕ ಪಾರ್ವತಿ, ನನ್ನ ಹೆಸರು ಈಶ್ವರ, ಅಲ್ಲಮ ಒಂದು ಸಮುದಾಯಕ್ಕೆ ಸೀಮಿತನಲ್ಲ. ಫ್ರೀಡಂ ಪಾರ್ಕ್ ಗೆ ಅಲ್ಲಮನ ಹೆಸರು ಇಟ್ಟರೆ ಲಿಂಗಾಯಿತರೆಲ್ಲಾ ಒಂದಾಗಿಮತಗಳಾಗುತ್ತವೆ ಎಂಬುದು ಕಾಂಗ್ರೆಸ್ ನ ಭ್ರಮೆಯಲ್ಲಿದೆ. ಯತೀಂದ್ರ ಅತಿ ಹೆಚ್ಚು ಸ್ಥಾನ ಪಡೆದು ಸಿದ್ದರಾಮಯ್ಯನವರನ್ನ ಐದು ವರ್ಷ ಮುಂದುವರೆಸೋಣ ಎಂದಿದ್ದಾರೆ. ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಗೊತ್ತಾಗಿದೆ.

ಯತೀಂದ್ರ ಹೇಳಿದ ತಕ್ಷಣ ಉಳುದವರ ಪ್ರತಿಕ್ರಿಯೆ ಏನು? ಹೈಕಮ್ಯಾಂಡ್ ತೀರ್ಮಾನ ಎಂದು ಉಳಿದ ನಾಯಕರು ಹೇಳುವ ಮೂಲಕ ಭಿನ್ನಾಭಿಪ್ರಾಯ ಹೊರಹಾಕಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ 28 ಕ್ಕೆ 28 ಸ್ಥಾನವನ್ನ ಗೆಲ್ಳಿದೆ ಎಂದರು.

ಇದನ್ನೂ ಓದಿ-https://suddilive.in/archives/7172

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373