ಸ್ಥಳೀಯ ಸುದ್ದಿಗಳು

ಭಾರತೀಯ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಗೆ ಜಿಲ್ಲಾ ಲಾರಿ ಚಾಲಕರ ಸಂಘದ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಭಾರತೀಯ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿರುವುದನ್ನ ವಿರೋಧಿಸಿ ಇಂದು ಜಿಲ್ಲಾ ಲಾರಿ ಚಾಲಕರ ಸಂಘ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸಿದೆ.

ಬೈಪಾಸ್ ರಸ್ತೆಯಲ್ಲಿರುವ ಲಾರಿ ಚಾಲಕರ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಬಂದ ಚಾಲಕರು ಭಾರತ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ವಾಹನ ಕಾಯ್ದೆಯ ತಿದ್ದುಪಡಿಯನ್ನ ಕೈಬಿಡುವಂತೆ ಆಗ್ರಹಿಸಿದೆ.

ರಾಷ್ಟ್ರೀಯ ಪರವಾನಗಿ ಪಡೆದಿರುವ ವಾಹನಗಳಲ್ಲಿ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವಂತೆ ಸೂಚಿಸಿರುವುದು, ರೆಟ್ರೋ ರಿಫ್ಲೆಕ್ಟ್ ಮತ್ತು ಕ್ಯೂ ಆರ್ ಕೋಡ್ ನ್ನ ಮತ್ತೆ ಜಾರಿಗೊಳಿಸಿರುವುದು. ಭಾರತೀಯ ಮೋಟಾರ್ ವಾಹನ ಕಾಯ್ದೆ ಇದ್ದ ದಂಡವನ್ನ 5 ಸಾವಿರ ರೂ.ನಿಂದ 20 ಸಾವಿರ ಕ್ಕೆ ಏರಿಸಿರುವ ಬಗ್ಗೆ ಸಂಘ ಆಕ್ಷೇಪಿಸಿದೆ.

ಈ ಕಾನೂನುಗಳು ಲಾರಿ ಚಾಲಕರ ವೃತ್ತಿಗೆ ಮಾರಕವಾಗಿದೆ. ಮತ್ತು ಚಾಲಕರ ಆತ್ಮಸ್ಥರ್ಯವನ್ನ ಕುಗ್ಗಿಸುವಂತಾಗಿದೆ. ಸರ್ಕಾರ ಚಾಲಕರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಜಾರಿ ಮಾಡಿದಂತಾಗಿದೆ. ಆದುದರಿಂದ ಕಾನೂನನ್ನ ತಕ್ಷಣ ಹಿಂದಕ್ಕೆ ಪಡೆಯುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ-https://suddilive.in/archives/6089

Related Articles

Leave a Reply

Your email address will not be published. Required fields are marked *

Back to top button