ಸ್ಥಳೀಯ ಸುದ್ದಿಗಳು

ಕರವೇ ನಾರಣಗೌಡರನ್ನ ಬಂಧಿಸಿರುವುದನ್ನ ಖಂಡಿಸಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಕ್ಷಣ ವೇದಿಕೆಯ ಅಧ್ಯಕ್ಷರಾದ ನಾರಾಯಣ ಗೌಡರನ್ನ ಬಂಧಿಸಿರುವ ಕ್ರಮವನ್ನ‌ ಖಂಡಿಸಿ ಇಂದು ಕರವೇ ಜಿಲ್ಲಾ ಘಟಕ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.‌

ಬಹುರಾಷ್ಟ್ರ ಕಂಪನಿಗಳು ಅನ್ಯ ಭಾಷೆ ವಲಸಿಗರ ಆಕ್ರಮಣದಿಂದ ಇಂದು ಕನ್ನಡ ನುಡಿ, ನಾಡು, ಸಂಸ್ಕೃತಿ ನಶಿಸಿಹೋಗುತ್ತಿರುವ ಪರಿಸ್ಥಿತಿ ಉಂಟಾಗಿದ್ದರೂ ಯಾವ ಅಧಿಕಾರಿಗಳು, ರಾಜಕಾರಣಿಗಳಾಗಲೀ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಸಂಘಟನೆ ಆಗ್ರಹಿಸಿದೆ.‌

ನಾಡು, ನುಡಿ ಅದರ ಉಳಿವಿನ ಬಗ್ಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು, ವಲಸಿಗರೊಂದಿಗೆ ಶಾಮೀಲಾಗಿ ನಮ್ಮ ನಾಡು, ನುಡಿ, ಸಂಸ್ಕೃತಿಗಳ ಅಧೋಗತಿಗೆ ಇಳಿಸಿರವುದು ಶೋಚನೀಯ ಎಂದು ಸಂಘಟನೆ ಆಗ್ರಹಿಸಿದೆ.

ಕನ್ನಡ ನಾಡಲ್ಲಿ ಎಲ್ಲಾ ಕಡೆ ಕನ್ನಡ ಭಾಷೆ, ಕನ್ನಡ ನಾಮಫಲಕದಲ್ಲಿ ಶೇ.60% ರಷ್ಟು ಬಳಸಬೇಕು ಎಂದು ಕಾನೂನು ಇದ್ದರೂ ಇದನ್ನು ವ್ಯಾಪಾರಸ್ತರು, ಕೆಲವು ಅಧಿಕಾರಿಗಳು ಪಾಲಿಸದೇ ಕಾನೂನನ್ನು ಗಾಳಿಗೆ ತೂರಿದ್ದಾರೆ. ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕನ್ನಡ ನಾಡು ನುಡಿ ಉಳಿಸಲು ಕಂಕಣ ತೊಟ್ಟ ಸನ್ಮಾನ್ಯ ಟಿ.ಎ. ನಾರಾಯಣಗೌಡರು ಮತ್ತು ಅವರ ಕಾರ್ಯಕರ್ತರವನ್ನು ಬಂಧಿಸಿರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದೆ.

ಸರ್ಕಾರ ಈ ಕೂಡಲೇ ಎಲ್ಲಾ ನಾಮಫಲಕದಲ್ಲಿ ಕನ್ನಡ ಬಳಸುವುದು ಕಡ್ಡಾಯ ಮಾಡಿ, ಯಾರು ನಾಮಫಲಕದಲ್ಲಿ ಅನ್ಯ ಭಾಷೆಗೆ ಹೆಚ್ಚು ಒತ್ತು ಕೊಡುತ್ತಾರೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನವಶ್ಯಕವಾಗಿ ರಾಜ್ಯಾಧ್ಯಕ್ಷರನ್ನು ಮತ್ತು ಕಾರ್ಯಕರ್ತರವನ್ನು ಬಂಧಿಸಿರುವುದನ್ನು ಈ ಕೂಡಲೇ ಬೇಷರತ್ತಾಗಿ ಬಂಧಮುಕ್ತಗೊಳಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗನಾಥ್ ಎಸ್, ನಗರ ಉಪಾಧ್ಯಕ್ಷ ಮಂಜುನಾಥ್, ವಿನಯ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5839

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373