ಸ್ಥಳೀಯ ಸುದ್ದಿಗಳು

ಕಳುವಾಗಿದ್ದ ಒಂದು ಬೈಕ್ ನ ಜಾಡುಹಿಡಿದ ಪೊಲೀಸರಿಗೆ ಪತ್ತೆಯಾಗಿದ್ದು 17 ಬೈಕ್!

ಸುದ್ದಿಲೈವ್/ಶಿವಮೊಗ್ಗ

ಕೆಎ-14-EN-8461, ಕೆಎ-18 X -1022,  ಕೆಎ-42 X-9792 ಹೀಗೆ ಸಾಗರ, ಹೊನ್ನಾಳಿ, ದಾವಣಗೆರೆ,‌ಮೈಸೂರು, ನಗರಗಳಿಂದ 14 ದ್ವಿಚಕ್ರ ವಾಹನಗಳು ಪತ್ತೆಯಾಗಿದೆ. ಕಳುವಾಗಿದ್ದ ಒಂದು ಬೈಕ್ ನ ಬೆನ್ನುಹತ್ತಿದ ದೊಡ್ಡಪೇಟೆ ಪೊಲೀಸರಿಗೆ ಪತ್ತೆಯಾಗಿದ್ದು 17 ಬೈಕ್!

ಕಡಿಮೆ ದರಕ್ಕೆ,  ಕಳವು ಮಾಡಿದ ದ್ವಿಚಕ್ರವಾಹನಗಳನ್ನ ಮಾರಾಟ ಮಾಡುತ್ತಿದ್ದ ಈ ಖದೀಮರಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿದ್ದು,  ಆತನ ಹೆಸರನ್ನ ಮತ್ತು ಗುರುತನ್ನ ಗುಪ್ತವಾಗಿರಿಸಲಾಗಿದೆ. ಈತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈತನ ಜೊತೆಗಿದ್ದ ಜಬೀವುಲ್ಲಾ ಪರಾರಿಯಾಗಿದ್ದು ಆತನಿಗಾಗಿ ತೀವ್ರಶೋಧ ಆರಂಭಿಸಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿರುವ ದಿಲ್ಲಿ ದರ್ಬಾರ್ ಹೋಟೆಲ್ ಹಿಂದೆ ಕೆಎ 14 ಇಎನ್ 8461 ಕ್ರಮ ಸಂಖ್ಯೆ ಹೊಂಡಾ ಡಿಯೋ ವಾಹನವು ಕಳವಾಗಿತ್ತು. ಈ ಬಗ್ಗೆ ಪಿಐ ರವಿ ಸಂಗನಗೌಡ ಪಾಟೀಲ್ ನೇತೃತ್ವದಲ್ಲಿ  ಕಾರ್ಯಾಚರಣೆಗೆ ಇಳಿದ ಪೊಲೀಸರು‌ 20 ದಿನಗಳಲ್ಲಿ ವಾಹನ ಮತ್ತು ಆರೋಪಿಗಳನ್ನ ಪತ್ತೆ ಮಾಡಿ ಹಿಡಿಮುರಿ ಕಟ್ಟಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಶ್ರೀನಿವಾಸ್, ತಿಮ್ಮಪ್ಪ, ಸಿಬ್ಬಂದಿಗಳಾದ ಪಾಲಾಕ್ಷ ನಾಯ್ಕ್, ಚಂದ್ರ ನಾಯ್ಕ್, ಪಿ, ಚಂದ್ರನಾಯ್ಕ್ ಎಂ, ಹೇಮಂತ್ ಕುಮಾರ್, ಪುನೀತ್ ಮನೋಹರ ನಿತಿನ್ ನಹಿಳಾ ಸಿಬ್ಬಂದಿ ಸುಮಿತ್ರಾ ಬಾಯಿ ಪಾಲ್ಗೊಂಡಿದ್ದರು.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಮಿಥುನ್ ಕುಮಾರ್ ಪ್ರತ್ಯೇಕವಾಗಿ ಕಳುವು ಮಾಡಿದ್ದ ವಾಹನಗಳು ಸೇರಿ ಒಟ್ಟು 10,55,000 ರೂ ಮೌಲ್ಯದ 17 ಬೈಕ್ ಗಳನ್ನೂ ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4772

Related Articles

Leave a Reply

Your email address will not be published. Required fields are marked *

Back to top button