ಪಿಐ ಮತ್ತು ಡಿವೈಎಸ್ಪಿಗಳ ವರ್ಗಾವಣೆ

ಸುದ್ದಿಲೈವ್/ಶಿವಮೊಗ್ಗ

40 ಡಿವೈಎಸ್ಪಿ ಮತ್ತು 71 ಪಿಐಗಳನ್ನ ರಾಜ್ಯಾದ್ಯಂತ ವರ್ಗಾಯಿಸಲಾಗಿದೆ. ಅದರಂತೆ ಯಾರೂ ಬರೊಲ್ಲ ಎನ್ನಿತ್ತಿದ್ದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿರುವುದು ಸಂತೋಷ ತಂದರೂ ಇವರೆಲ್ಲ ಅಧಿಕಾರ ವಹಿಸಿಕೊಂಡ ಮೇಲೆನೆ ಖಚಿತತೆ ಪಡೆದುಕೊಳ್ಳಲಿದೆ. ಶಿವಮೊಗ್ಗದ ಪಿಐಗಳ ವರ್ಗಾವಣೆಯಾಗಿರುವುದರಿಂದ ಹೆಚ್ಚುವರಿ ಅಧಿಕಾರ ವಹಿಸಿಕೊಂಡ ಪಿಐಗಳಿಗೆ ರಿಲೀವ್ ಸಿಕ್ಕಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಿಐಡಿಯಲ್ಲಿದ್ದ ರವಿಸಂಗನಗೌಡ ಪಾಟೀಲ್ ಅವರನ್ನ ವರ್ಗಾಯಿಸಲಾಗಿದೆ. ಅಂತೂ ಇಂತೂ ಪಿಐ ಅಂಜನ್ ಕುಮಾರ್ ಗೆ ರಿಲೀವ್ ಸಿಕ್ಕಿದೆ. ಇವರು ಬೆಂಗಳೂರಿಗೆ ವರ್ಗಾವಣೆಗೊಂಡು ತಿಂಗಳಾಗಿತ್ತು. ಕೋಟೆ ಠಾಣೆಯ ಪಿಐ ಆಗಿ ಇನ್ಚಾರ್ಜ್ ಆಗಿದ್ದರು.
ಖಾನಾಪುರದ ಪಿಟಿಎಸ್ ನ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸಿದ್ದೇಗೌಡರನ್ನ ಜಯನಗರ ಪೊಲೀಸ್ಠಾಣೆಯ ಪಿಐಗೆ ವರ್ಗಾಯಿಸಲಾಗಿದೆ. ಇದರಿಂದ ಮಹಿಳಾ ಪೊಲೀಸ್ ಠಾಣೆ ಪಿಐ ಭರತ್ ಗೆ ರಿಲೀವ್ ಸಿಕ್ಕಿದೆ. ಕರ್ನಾಟಕ ಲೋಕಾಯುಕ್ತ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಚಂದ್ರಶೇಖರ್ ಎನ್ ಹರಿಹರ ಅವರನ್ನ ಕೋಟೆ ಪೊಲೀಸ್ ಠಾಣೆಯ ಒಇಐ ಆಗಿ ವರ್ಗಾವಣೆಗೊಂಡಿದ್ದಾರೆ.
ಐಎಸ್ ಡಿಐಗೆ ವರ್ಗಾವಣೆ ನಿರೀಕ್ಷೆಯಲ್ಲಿದ್ದ ರೋಹಿತ್ ಸಿ.ಐಗೆ ಸಾಗರ ಗ್ರಾಮಾಂತರ ಸಿಪಿಐ ಆಗಿ ವರ್ಗಾವಣೆಯಾಗಿದ್ದಾರೆ. ಹಾಗೇ 40 ಜನ ಡಿವೈ ಎಸ್ಪಿ ಗಳು ವರ್ಗಾವಣೆಯಾಗಿದ್ದು ಶಿವಮೊಗ್ಗದ ಡಿಸಿಆರ್ ಬಿಯಲ್ಲಿದ್ದ ಡಿವೈಎಸ್ಪಿ ಪ್ರಭು.ಡಿ.ಟಿಯವರನ್ನ ಸಿಐಡಿಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ-https://suddilive.in/archives/3185
