ಸ್ಥಳೀಯ ಸುದ್ದಿಗಳು

ಯುವನಿಧಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಆಕ್ಷೇಪಗಳ ಸುರಿಮಳೆ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್, ಉನ್ನತವಶಿಕ್ಷಣ ಸಚಿವ ಸುಧಾಕರ್ ಮತ್ತು ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಜನವರಿ‌ 12 ರಂದು ನಗರದ ಫ್ರೀಂಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾದ ಯುವನಿಧಿ ಕಾರ್ಯಕ್ರಮ‌ ಉದ್ಘಾಟನೆಯ ಪೂರ್ವಭಾವಿ ಸಭೆ ನಡೆದಿದೆ.

ಸಭೆಯಲ್ಲಿ ಶ್ರೀರಾಮ ಮಂದಿರ ವಿಚಾರದಲ್ಲಿ ಬಿಜೆಪಿಯ ಮತ್ತು ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ  ಹೇಳಿಯನ್ನ ಕಾಂಗ್ರೆಸ್ ಪಕ್ಷ ಸರಿಯಾಗಿ ಕೌಂಟರ್ ನೀಡಲಿಲ್ಲ ಎಂದು ಪಕ್ಷದ ಮುಖಂಡರಾದ  ಮುಕ್ತಿಯಾರ್ ಅಹ್ಮದ್, ಸಿಎಂ ಖಾದರ್ ಅವರು ಆಕ್ಷೇಪಿಸಿದರು. ಅಧ್ಯಕ್ಷ ಸುಂದರೇಶ್ ಭಾಷಣದ ವೇಳೆ ಬಿಜೆಪಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನ ತಮ್ಮದೆಂದು ಬಿಂಬಿಸುತ್ತಿದೆ. ಅಲ್ಪಸಂಖ್ಯಾತರ ಭಾವನೆಯನ್ನ‌ ಕೆರಳಿಸುತ್ತಿದ್ದಾರೆ ಎಂದರು.

ತಕ್ಷಣವೇ ಕಾರ್ಯಕರ್ತೊಬ್ಬರು ಆಕ್ಷೇಪಿಸಿದರು. ಇವರು ಆದ ತಕ್ಷಣ ಮುಕ್ತಿಯಾರ್ ಅಹ್ಮದ್ ಬಿಜೆಪಿಯವರ ಹೇಳಿಕೆಯನ್ನ ಕಾಂಗ್ರೆಸ್ ಸರಿಯಾಗಿ ಕೌಂಟರ್ ನೀಡಲಿಲ್ಲ ಎಂದು ಆಕ್ಷೇಪಿಸಿದರು. ಹಿಂದಕ್ಕೆ ಕೂತಿದ್ದ ಸಿಎಂ‌ಖಾದರ್ ಈ ಆಕ್ಷೇಪಣೆಯನ್ನ‌ ಬೆಂಬಲಿಸಿ ಕಾಂಗ್ರೆಸ್ ನಡೆಯನ್ನ ಖಂಡಿಸುತ್ತೇವೆ ಎಂದು ಹೇಳಿದರು. ಇವರ ಆಕ್ಷೇಪಣೆ ಸಭೆಯಲ್ಲಿ ಗೊಂದಲ ಮೂಡಿಸಿತ್ತು.

ಇದಕ್ಕೂ ಮೊದಲು ಜಿಲ್ಲಾಧ್ಯಕ್ಷ ಸುಂದರೇಶ್ ರವರಿಗೆ  ಮಹಿಳಾ ಕಾರ್ಯಕರ್ತರೊಬ್ಬರು ಭದ್ರಾವತಿಯ ತಾಲೂಕು ಅಧ್ಯಕ್ಷರನ್ನ ವೇದಿಕೆಗೆ ಕೂರಿಸುವುದಿಲ್ಲ. ಇದೊಂದೇ ಕಾರ್ಯಕ್ರಮವಲ್ಲ ಯಾವುದೇ ಕಾರ್ಯಕ್ರಮಕ್ಕೆ ಭದ್ರಾವತಿ ತಾಲೂಕು ಅಧ್ಯಕ್ಷರನ್ನ ಕರೆಯೊಲ್ಲವೆಂದು ವೇದಿಕೆ ಮೇಲಿದ್ದ ಸಿವರ ಮುಂದೆ ಆಕ್ಷೇಪ ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮ ಅಂತ್ಯದಲ್ಲಿ ಕಾರ್ಯಕ್ರಮದಲ್ಲಿ ಸಚಿವರು ಉದ್ದೀರ ಪಕ್ಷದ ಕಾರ್ಯಕರ್ತರಿಗೆ ನೋಂದಣಿಗೆ ಯಾವಾಗ ಅವಕಾಶ ಎಂದು ಕೇಳಿದರು. ಈ ವೇಳೆ ಸಚಿವ ಶರಣಪ್ರಕಾಶ್ ಪಾಟೀಲ್ ಭಾಷಣ ಮುಗಿಸಿ ವಿಮಾನ ನಿಲ್ದಾಣಕ್ಕೆ ತೆರಳುವ ತಯಾರಿಯಲ್ಲಿದ್ದರು.

Related Articles

Leave a Reply

Your email address will not be published. Required fields are marked *

Back to top button