ಸ್ಥಳೀಯ ಸುದ್ದಿಗಳು

ಐದು ದಿನಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆ

ಸುದ್ದಿಲೈವ್/ಶಿವಮೊಗ್ಗ

ಎಂದಿನಂತೆ ಜಿಲ್ಲೆಯಲ್ಲಿ ಕೊರೋನದ ಆರ್ಭಟ ಮುಂದು ವರೆದಿದೆ. ಇಂದು ಮೂರು ಜನರಲ್ಲಿ ಸೋಂಕು ಪತ್ತೆಯಾಗಿದೆ. ಪತ್ತೆಯಾದ ಸೋಂಕಿತರೆಲ್ಲರೂ ಶಿವಮೊಗ್ಗ ನಗರ ಮತ್ತು ತಾಲುಕಿಗೆ ಸೇರಿದವರೆಂದು‌ ಹೆಲ್ತ್ ಬುಲಿಟಿನ್ ತಿಳಿಸಿದೆ.

ಇವತ್ತು 303 ಜನರನ್ನ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. 303 ಜನರಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ. ಎರಡು ದಿನಗಳ ಹಿಂದಷ್ಟೆ 14 ಜನರಲ್ಲಿ ಸೋಂಕು ಪತ್ತೆಯಾಗಿತ್ತು.‌ ಆದರೆ ಎರಡು ದಿನಗಳಲ್ಲಿ 8 ಜನರಿಗೆ ಸೋಂಕು ಪತ್ತೆಯಾಗಿದೆ.

ನಿನ್ನೆ ಹೆಲ್ತ್ ಬುಲಿಟಿನ್ ದೊರೆತಿರಲಿಲ್ಲ.  ಹಾಗಾಗಿ ನಿನ್ನೆಯ ಕಥೆ ಗೊತ್ತಿಲ್ಲ. ಇಂದು ಮೂರು ಜನರಿಗೆ ಸೋಂಕು ಪತ್ತೆಯಾಗಿದೆ. ಇದರಂದ ಸೋಂಕಿತರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ. ಇದುವರೆಗೂ ಸೋಂಕು ಪತ್ತೆಯಾದ 22 ಜನರಲ್ಲಿ 21 ಜನರಿಗೆ ಹೋಂ‌ ಐಸೋಲೇಷನ್ ಗೆ ಒಳಪಡಲು ಸೂಚಿಸಲಾಗಿದೆ.  ಒಬ್ಬರಿಗೆ ಮಾತ್ರ ಜನರಿಗೆ ನಿಗದಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿಗೆ ಯಾರೂ ಬಲಿಯಾಗಿಲ್ಲ ಎಂದು  ಇಂದು ಬಿಡುಗಡೆಯಾದ ಕೊರೋನ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.‌

ಇದನ್ನೂ ಓದಿ-https://suddilive.in/archives/5762

Related Articles

Leave a Reply

Your email address will not be published. Required fields are marked *

Back to top button