ರಾಷ್ಟ್ರೀಯ ಸುದ್ದಿಗಳು

ನ್ಯೂ ಇಯರ್ ಗೆ ಕಂಟ್ರಿ ಕ್ಲಬ್, ಮಲೆನಾಡು ಶೈರ್, ರಾಯಲ್ ಆರ್ಕೆಡ್ ಸಜ್ಜು

ಸುದ್ದಿಲೈವ್/ಶಿವಮೊಗ್ಗ

2023 ಕ್ಕೆ ಗುಡ್ ಬೈ ಹೇಳಲಾಗುತ್ತಿದೆ. 2024 ನೇ ಇಸವಿಯನ್ನ  ಸ್ವಾಗತ ಮಾಡಿಕೊಳ್ಳಲು ಶಿವಮೊಗ್ಗ ಸಜ್ಜಾಗಿದೆ. ಹೊಸವರ್ಷಾಚರಣೆ ಶಿವಮೊಗ್ಗದಲ್ಲಿ ಹಲವಾರು ಕಡೆ ಸಿದ್ದತೆ ಆಗುತ್ತಿದೆ. ಅದರಲ್ಲಿ ಶಿವಮೊಗ್ಗ ಕಂಟ್ರಿ ಕ್ಲಬ್, ಮಲೆನಾಡು ಶೈರ್ ಮತ್ತು ರಾಯಲ್ ಆರ್ಕಿಡ್ ಭರ್ಜರಿ ಸಿದ್ಧತೆಗೊಳ್ಳುತ್ತಿದೆ.

ಕಂಟ್ರಿ ಕ್ಲಬ್ ನಲ್ಲಿ ಅಲ್ಲಲ್ಲಿ ಊಟದ ಕೌಂಟರ್ ಗಳು, ಡ್ಯಾನ್ಸ್ ಸ್ಟೇಜ್ ಗಳು, ಕೂರುವ ಆಸನಗಳ ಸಿದ್ಧತೆ ನಡೆಯುತ್ತಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿಗಳನ್ನ ನೇಮಿಸಿಕೊಂಡು ಸದಸ್ಯರ ಹೊಸವರ್ಷಕ್ಕೆ 1250 ಮಕ್ಕಳಿಗೆ 850 ನಿಗದಿ ಪಡಿಸಲಾಗಿದೆ.

ಮಂಗಳೂರಿನಿಂದ ಡಿಜೆಯನ್ನ‌ಕರೆಸಲಾಗುತ್ತಿದೆ.ಸಿಂಗರ್ಮೈ ತ್ರಿ ಅಯ್ಯರ್, ಪರಿಣಿತ, , ಸಿಂಗರ್ ಮತ್ತು ಆಂಕರ್ ಪೃಥ್ವಿ , ಲಿಯೋ ಎಂಬುವರಿಂದ ಕಾರ್ಯಕ್ರಮ  ಆಯೋಜಿಸಲಾಗಿದೆ. Nextstep Here’s A cheers to 2024 new year pary ಎಂಬ ನಾಮ ಫಲಕ ಕಂಟ್ರಿಕ್ಲಬ್ ನ ಮುಂಭಾಗದಲ್ಲಿ ಅಳವಡಿಸಲಾಗಿದೆ.

ಕಂಟ್ರಿಕ್ಲಬ್ ನ  ಕಾರ್ಯದರ್ಶಿ, ಪ್ರಕಾಶ್ ಮಾತನಾಡಿ  ಹೊಸವರ್ಷಕ್ಕೆ ಕಂಟ್ರಿಕ್ಲಬ್ ನಲ್ಲಿ ಭಾರತೀಯ ಸಂಸ್ಕೃತಿ ಭರತನಾಟ್ಯವೂ ಇದೆ ವೆಸ್ಟರ್ನ್ ಸಂಸ್ಕೃತಿಯ ಹಾಡುಗಳು ಇರುತ್ತವೆ ಪೃಥ್ವೀ ಮತ್ತು ಪಾರ್ಥ ಎಂಬರಿದ ಡಿಜೆ ಇದೆ. ಸದಸ್ಯರು ಮತ್ತು ಅತಿಥಿಗಳಿಗೆ ಮಾತ್ರ ಅವಕಾಶವಿದ್ದು 800 ರಿಂದ 1000 ಜನ ಜಮಾವಣೆ ಆಗಲಿದ್ದಾರೆ ಎಂದರು.

ಕ್ಲಬ್ ನ ಅಧ್ಯಕ್ಷ ಅಶೋಕ್ ಮಾತನಾಡಿ, ಮಕ್ಕಳಿಗಾಗಿ ಗೇಮ್ಸ್, ಡ್ಯಾನ್ಸ್ ವಿವಿಧ 12 ಕಾದ್ಯಗಳು  ಸ್ನ್ಯಾಕ್ಸ್, ಸ್ಟಾರ್ಟ್ ಅಪ್ ಫುಡ್ ಗಳ ತಯಾರಿ ಭರದಿಂದ ಸಾಗಿದೆ. ಟ್ಯಾಟೋ, ಫೋಟೋ ಕಾರ್ನರ್, ಎಂಬುದಕ್ಕೆ ಅವಕಾಶವಿದೆ. ರಾತ್ರಿ 12 ರ ವರೆಗೆ ಮನರಂಜನೆ ನಡೆಯಲಿದೆ. ಶಾಖಾಹಾರಿ ಮತ್ತು ಸಸ್ಯಹಾರಿ ಖಾದ್ಯಗಳನ್ನ ರೂಪೇಶ್ ಮತ್ತು ಪ್ರಸನ್ನ ಮತ್ತು ಸುಧಾಕಾರ್ ಎಂಬುವರಿಂದ ತಯಾರಿಯಾಗುತ್ತಿದೆ ಎಂದರು.

ಶೈರ್ ನಲ್ಲಿ  ಆದಿತ್ಯ ಬ್ಯಾಂಡ್, ಗೇಮ್ಸ್ ಈವೆಂಟ್ ಲೈವ್ ಕೌಂಟರ್ ನಿರ್ಮಿಸಿ ನ್ಯೂ ಇಯರ್ ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿದೆ. ರೆಸಾರ್ಟ್ ನಲ್ಲಿಜೋಡಿಗೆ 7000 ರೂ ಶುಲ್ಕ ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ-https://suddilive.in/archives/5894

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373