2021 ರಲ್ಲಿ ವಿಜೇಂದ್ರರಿಗೆ ಮಂತ್ರಿಸ್ಥಾನ ನೀಡಲು ನಿರಾಕರಿಸಿದ್ದ ಬಿಜೆಪಿ ಇಂದು ರಾಜ್ಯಾಧ್ಯಕ್ಷ ಸ್ಥಾನ ನೀಡಿ ಆದೇಶ

ಸುದ್ದಿಲೈವ್/ಶಿವಮೊಗ್ಗ

ಶಿಕಾರಿಪುರದ ಶಾಸಕ ಬಿ.ವೈ.ವಿಜೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇಮಿಸಿ ಆದೇಶಿಸಿದ್ದಾರೆ. ವಿಜೇಂದ್ರರಿಗೆ ರಾಜ್ಯಾಧ್ಯಕ್ಷ ಪಟ್ಟಕಟ್ಟಿ ಪಕ್ಷ ಆದೇಶಿಸಿರುವುದು ಬಿಎಸ್ ವೈಗೆ ಸಮಾಧಾನ ಪಡಿಸುವ ಪ್ರಯತ್ನ ಎನ್ನಬಹುದು.
ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಹಲವು ಹೆಸರು ಕೇಳಿ ಬಂದಿತ್ತು. ಶೋಭಾಕರದ್ಲಾಂಜೆ, ಸಿಡಿ ರವಿ ಮತ್ತು ಇತರೆಯರ ಹೆಸರು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಕೇಳಿ ಬಂದಿತ್ತು. ಲಿಂಗಾಯತರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮ್ಯಾಂಡ್ ವಿಜೇಂದ್ರರನ್ನ ನೇಮಿಸಿ ಆದೇಶ ಹೊರಡಿಸಿದೆ.
1983 ರಲ್ಲಿ ಜನತಾಪಕ್ಷಕ್ಕೆ ಲಿಂಗಾಯಿತ ಮತ್ತು ಒಕ್ಕಲಿಗ ಮತಗಳೇ ಗೆದ್ದು ಬೀಗಲು ಕಾರಣವಾಗಿತ್ತು. ಈ ಬಾರಿ ಜೆಡಿಎಸ್ ಮೈತ್ರಿ ಮತ್ತು ವಿಜೇಂದ್ರರ ನಾಯಕತ್ವ ರಾಜ್ಯದಲ್ಲಿ ಕಮಾಲ್ ಮಾಡಲಿದೆಯಾ ಕಾದು ನೋಡಬೇಕಿದೆ.
ರಾಜ್ಯದಲ್ಲಿ ಲಿಂಗಾಯಿತ ಪ್ರಬಲ ಸಮುದಾಯದ ಮತಗಳನ್ನ ಸೆಳೆಯಲು ಬಿ.ವೈ.ವಿಜೇಂದ್ರರ ಮೂಲಕ ಬಿಎಸ್ ವೈಗೂ ಹೈಕಮ್ಯಾಂಡ್ ಟಾಸ್ಕ್ ನೀಡಿರುವಂತೆ ಕಂಡು ಬರುತ್ತಿದೆ. ಬಿಜೆಪಿಯನ್ನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಮೇಲೆ ಕಣ್ಣಿಟ್ಟಿರುವ ಪಕ್ಷ ವಿಜೇಂದ್ರರನ್ನ ನೇಮಿಸಿದೆ.
ಅಳೆದು ತೂಗಿ ವಿಜೇಂದ್ರರಿಗೆ ಸ್ಥಾನಮಾನ ನೀಡಲಾಗಿದೆ ಎನ್ನಲಾಗಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸುದ್ದಿಲೈವ್ ಗೆ ಮಾತನಾಡಿ ವಿಜೇಂದ್ರರ ಆಯ್ಕೆ ಸಂತೋಷವಾಗಿದೆ. ಧಕ್ಷ ನಾಯಕನನ್ನ ಬಿಜೆಪಿ ಆಯ್ಕೆ ಮಾಡಿದೆ ಎಂದು ಹಾರೈಸಿದ್ದಾರೆ.
ವಿಜೇಂದ್ರರ ಆಯ್ಕೆಯ ಮೂಲಕ ರಾಜ್ಯದಲ್ಲಿ ಬಿಎಸ್ ವೈ ಮುಖಾಂತರ ಮತ್ತೆ ಅಧಿಕಾರನ್ನ ತಮ್ಮ ಕುಟುಂಬದಲ್ಲಿ ಉಳಿಸಿಕೊಂಡಿದೆ. ಇದರಿಂದ ಬಿ.ಎಲ್ ಸಂತೋಷ್ ಹಿನ್ನಡೆಯಾಗಿದೆಯಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. 2021 ರಲ್ಲಿ ಬಿಜೆಪಿ ಇದೇ ವಿಜೇಂದ್ರರನ್ನ ಎಂಎಲ್ ಸಿ ಮಾಡಿ ಮಂತ್ರಿಯಾಗಿ ನೇಮಿಸಲು ಸಾಧ್ಯವಿಲ್ಲವೆಂದಿತ್ತು. ಆದರೆ ಇಂದು ಅವರನ್ನ ಅಧ್ಯಕ್ಷರನ್ನಾಗಿ ನೇಮಿಸಲು ಹೈಕಮ್ಯಾಂಡ್ ಮುಂದಾಗಿರುವುದು ಅವರ ಅನಿವಾರ್ಯತೆಯನ್ನ ಗುರುತಿಸಿದೆ ಎನ್ನಬಹುದು.
ಇದನ್ನೂ ಓದಿ-https://suddilive.in/archives/2855
