ರಾಜಕೀಯ ಸುದ್ದಿಗಳು

ಅಭಿವೃದ್ಧಿ vs ಗ್ಯಾರೆಂಟಿ ಮತ್ತು ಈಶ್ವರಪ್ಪ ಪಡೆಯುವ ಮತಗಳ ಮೇಲೆ ನಡೆಯಲಿದೆ ಲೋಕ ಸಮರ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನಕ್ಕೆ ಎರಡು ದಿನ ಬಾಕಿ ಇದೆ. ಎರಡು ದಿನಗಳಲ್ಲಿ ನಡೆಯುವ  ಮತದಾನದಲ್ಲಿ 18 ನೇ ಲೋಕಸಭಾ ಚುನಾವಣೆಯ ಸಂಸದರು ಯಾರು ಆಗಲಿದ್ದಾರೆ ಎಂಬುದು ನಿರ್ಣಯವಾಗಬೇಕಿದೆ.

ಆರಂಭದಲ್ಲಿ ಇದ್ದ ಸಲೀಸಾದ ಗೆಲುವಿನ ಚಿತ್ರಣ ಕೊಂಚ ಬದಲಾದಂತೆ ಭಾಸವಾಗುತ್ತಿದೆ. ಗೀತ ಶಿವರಾಜ್ ಕುಮಾರ್ ನ ಸ್ಪರ್ಧೆ ಏನು ವ್ಯತ್ಯಾಸ ತಾರದಿದ್ದರು ಗ್ಯಾರಂಟಿ ಮಾತ್ರ ಅಂಡರ್ ಕರೆಂಟ್ ಆಗಿ ಕೆಲಸ ಮಾಡಲಿದೆ. ಈಶ್ವರಪ್ಪನವರ ಸ್ಪರ್ಧೆ ಮತ್ತು ಅವರು ಪಡೆಯುವ ಮತಗಳ ಮೇಲೆ ಈ ಬಾರಿಯ ಚುನಾವಣೆಯ ಗೆಲುವು ಮತ್ತು ಸೋಲನ್ನ ನಿರ್ಣಯಿಸಲಿದೆ.

ಇದರಿಂದ ಅಭಿವೃದ್ಧಿಯ ವಿಚಾರ ಗೌಣ್ಯವಾಗುವ ಸಂಭವನೀಯವಿದೆ. ಬಿಜೆಪಿಯ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಕಳೆದ ಬಾರಿಯ  2.23 ಲಕ್ಷ ಮತಗಳ ಅಂತರ ಈ ಬಾರಿಯ ಚುನಾವಣೆಯಲ್ಲಿ  ಕಷ್ಟವೆನಿಸುವಂತೆ ಗ್ಯಾರೆಂಟಿ ಕೆಲಸ ಮಾಡುವ ಸಂಭವವಿದೆ.

ಕೆಲವೊಂದು ಕಡೆ ಮತಹಾಕದಿದ್ದರೆ ಗ್ಯಾರೆಂಟಿಯ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಕಟ್ ಮಾಡುವುದಾಗಿ ಮತದಾರರು ಮಾತನಾಡುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಇನ್ನು ಜಾತಿ ಲೆಕ್ಕಾಚಾರಕ್ಕೆ ಇಳಿಯುವುದಾದರೆ ಎರಡು ಮೂರು ಸಮುದಾಯಗಳು ಒಂದು ಪಕ್ಷಕ್ಕೆ ಬೆಂಬಲಿಸಲಿದೆ. ಈ ಬಾರಿಯ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ ನ ಕೈಹಿಡಿಯಲಿದೆ.

ಸೊರಬ, ಶಿಕಾರಿಪುರ, ಸಾಗರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಪೈಪೋಟಿಯಿರುವುದನ್ನ ಖಚಿತ ಪಡಿಸುತ್ತಿದೆ. ಈಶ್ವರಪ್ಪನವರ ಸ್ಪರ್ಧೆ ಬಿಜೆಪಿ ಅಭ್ಯರ್ಥಿಯ ಮತಕಿತ್ತುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈಶ್ವರಪ್ಪನವರು ಎಷ್ಟು ಮತಗಳನ್ನ ಸೆಳೆಯಲಿದ್ದಾರೆ ಎಂಬುದರ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ನ ಅಭ್ಯರ್ಥಿಗಳ ಸೋಲು ಗೆಲುವಿನ ನಿರ್ಧಾರವಾಗಲಿದೆ. ಪ್ರಜ್ವಲ್ ರೇವಣ್ಣರ ಪ್ರಕರಣವೂ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ.

ಮೇಲ್ವರ್ಗದ ಹೆಣ್ಣುಮಕ್ಕಳು ಮತ್ತು ಕಾಲೇಜಿನ‌ ಗ್ರಾಮೀಣ ಭಾಗದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಗ್ಯಾರೆಂಟಿಯನ್ನ ದೂಷಿಸುತ್ತಿದ್ದಾರೆ. ಕಾಲೇಜಿನ‌ ವಿದ್ಯಾರ್ಥಿಗಳಿಗೆ ಮತ್ತು ಮೇಲ್ವರ್ಗದ ಮಹಿಳೆಯರು ಗ್ಯಾರೆಂಟಿಯ ಶಕ್ತಿಯೋಜನೆಯನ್ನ ದೂಷಿಸುತ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ನೂಕು ನುಗ್ಗಲಾಗುವುದರಿಂದ ಪ್ರಯಾಣ ಕಷ್ಟವಾಗಿದೆ.

ಇನ್ನು ಖಾಸಗಿ ಬಸ್ ಗಳ ಹಾವಳಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ನವರು ಮಹಿಳೆಯರಿಗೆ ಮರ್ಯಾದೆ ಕೊಡುತ್ತಿಲ್ಲ ಎಂಬ ಆರೋಪವೂ ಇದೆ. ಖಾಸಗಿ ಟ್ರಾವೆಲ್ಸ್ ನವರು ಈ ಉಚಿತ ಬಸ್ ನ್ನ ವಿರೋಧಿಸುತ್ತಿದ್ದಾರೆ. ಆದರೆ ಗೃಹಲಕ್ಷ್ಮಿಯ ಬಗ್ಗೆ ಮತ್ತು ಗೃಹಜ್ಯೋತಿಯ ಬಗ್ಗೆ ಜನ ಇದನ್ನ ಸರ್ಕಾರ ಒಂದು ಕೈಯಿಂದ ನೀಡಿ, ಒಂದು ಕೈಯಿಂದ ಕಿತ್ತುಕೊಳ್ಳುವ ಯೋಜನೆ ಎಂದು ಜರಿಯುತ್ತಿದ್ದಾರೆ. ಒಬಿಸಿ ಸಮುದಾಯ ಹಾಗೂ ಸಣ್ಣಪುಟ್ಟ ಮೇಲ್ವರ್ಗದ ಸಮುದಾಯಗಳು  ಬಿಜೆಪಿಗೆ ಬಹುತೇಕ ಕೈಹಿಡಿಯಲಿದೆ.‌

ಆದರೆ ಅಲ್ಪಸಂಖ್ಯಾತ ಸಮುದಾಯ, ಬಹುದೊಡ್ಡ ಪ್ರಮಾಣದಲ್ಲಿ ದಲಿತ ಸಮುದಾಯಗಳು ಮತ್ತು ಒಬಿಸಿಯ ಪ್ರಮುಖ ಸಮುದಾಯ ಮತ್ತು  ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನ ಕೈ ಹಿಡಿಯಲಿದೆ. ಗ್ಯಾರೆಂಟಿ ವಿರುದ್ಧ ಅಸಮಾಧಾನ ಸಣ್ಣಪ್ರಮಾಣದಲ್ಲಿದ್ದರೂ ದೊಡ್ಡಪ್ರಮಾಣದಲ್ಲಿ ಗ್ಯಾರೆಂಟಿ ಕಾಂಗ್ರೆಸ್ ನ್ನ ಕೈಹಿಡಿಯುವ ಸಾಧ್ಯತೆ ಇದೆ. ಶಿಕಾರಿಪುರದಲ್ಲಿ ಅಂಜುಮಾನ್ ಸಂಸ್ಥೆಯ ನಿರ್ಣಯ ಈ ಬಾರಿ ಕಾಂಗ್ರೆಸ್ ಗೆ ಹೆಚ್ಚು ಶಕ್ತಿ ತುಂಬಲಿದೆ.

ಮಾಂಗಲ್ಯವನ್ನ ಕಾಂಗ್ರೆಸ್ ಕಸಿದುಕೊಳ್ಳಲಿದೆ ಎಂಬ ಪ್ರಧಾನಿಯವರ ಭಾಷಣ ಅಲ್ಪಸಂಖ್ಯಾತರ ಮತಗಳ ಕ್ರೂಢೀಕರಣಕ್ಕೆ ಕಾರಣವಾಗಿದೆ. ಈ ಹಿಂದೆ ಶಿಕಾರಿಪುರದಲ್ಲಿ ಚಿತ್ರಣ ಹೀಗೆ ಇರಲಿಲ್ಲ.  ಇವುಗಳ ನಡುವೆ ಈಶ್ವರಪ್ಪನವರ ಸ್ಪರ್ಧೆ ಯಾರಿಗೆ ಮುಳುವಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/14221

Related Articles

Leave a Reply

Your email address will not be published. Required fields are marked *

Back to top button