ರಾಜ್ಯ ಸುದ್ದಿಗಳು

ಮತದಾನದ ವೇಳೆ ಮತಗಟ್ಟಗಳಲ್ಲಿ ವಿವಿಧ ಸಿದ್ಧತೆ

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನಕ್ಕೆ ಚುನಾವಣೆ ಆಯೋಗ ಸಿದ್ದಗೊಂಡಿದೆ. ಬೈಙದೂರು ಸೇರಿ 17,52,855, 325 ಮತಗಟ್ಟೆಗಳನ್ನ ರಚಿಸಲಾಗಿದೆ, 80 ಫ್ಲೈಯಿಂಗ್ ಸ್ಕ್ಯಾರ್ಡ್, 2868 ಪೊಲೀಸರನ್ನ ಬಳಕೆ ಮಾಡಲಾಗಿದೆ, ಮತಗಟ್ಟಯಲ್ಲಿ ಕನಿಷ್ಠ ಸೌಲಭ್ಯ, ಶೌಚಾಲಯಗಳನ್ನ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ‌ಹೆಗಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಚ್ಚಿನ ತಾಪಮಾನ ಹೆಲ್ತ್ ಕಿಟ್ ಗಳನ್ನ ನೀಡಲಾಗುತ್ತಿದೆ. 87 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ಶಾಮೀಯನ ವ್ಯವಸ್ಥೆ ಮಾಡಲಾಗಿದೆ, 1200 ಮತದಾರರು ಇದ್ದರೆ ಹೆಚ್ಚಿನ‌ ಪೋಲಿಂಗ್ ಆಫೀಸರ್ ಗಳನ್ನ ನೇಮಕ ಮಾಡಲಾಗಿದೆ, ಪಂಚಾಯಿತಿ ಕಡೆಯಿಂದ ಕುಡಿಯುವ ನೀರಿನ ವ್ಯವಸ್ಣತೆ ಮಾಡಲಾಗಿದೆ, 2012 ರಲ್ಲಿ 24 ನಕ್ಸಲ್ ಎಫೆಕ್ಟೆಡ್ ಮತಗಟ್ಟಗಳಿದ್ದವು. ಅವುಗಳನ್ನೂ ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದೆ.

17 ಲಕ್ಷ ವೋಟರ್ ಗೆ ಸ್ಲಿಪ್ ಹಂಚಲಾಗಿದೆ. ಈಗಾಗಲೇ 532-321 ಜನ ಮತ ಚಲಾವಣೆ, 3½ ಸಾವಿರ ವೃದ್ಧ ಮತ್ತು ದಿವ್ಯಾಂಗರಿಗೆ ಮನೆಯಿಂದ ಮತವ್ಯವಸ್ಥೆ ಮಾಡಲಾಗಿದೆ, 1950 ಗೆ ಸಹಾಯವಾಣಿಗೆ ಕರೆ ಮಾಡಿದರೆ ಮತದಾನದ ಸಮಸ್ಯೆ ಬಗೆಹರಿಸಲಾಗುವುದು ಎಂದರು.

18 ಹಳ್ಳಿಗಳಲ್ಲಿ ಮತದಾನ‌ಬಹಿಷ್ಕಾರ ಬಂದಿತ್ತು. ಇದರಲ್ಲಿ 15 ಹಳ್ಳಿಗಳಿಗೆ ಮನವರಿಕೆ ಮಾಡಿ ಬಹಿಷ್ಕಾರ ಹಿಂಪಡೆಯುವಂತೆ ಮಾಡಾಗಿದೆ ಅವರೆಲ್ಲಾ‌ಮತದಾನದಲ್ಲಿ ಭಾಗಿಯಾಗಲಿದ್ದಾರೆ.‌ ಮೂರು ಹಳ್ಳಿಗಳ ಸಮಸ್ಯೆಯಿದೆ. ಚುನಾವಣೆ ನಂತರ ಸಮಸ್ಯೆ ಬಗೆಹರಿಸಲಾಗುವುದು. ಗ್ಯಾರೆಂಟಿ ಕಾರ್ಡನ್ನ ಅಂಟಿಸಲು ಅವಕಾಶವಿಲ್ಲ. ಕರಪತ್ರ ರೀತಿ ಹಂಚಲು ಅವಕಾಶವಿದೆ ಎಂದರು.

ಸುವಿಧ ಆಪ್ ನಲ್ಲಿ 825 ಅರ್ಜಿ ಅಲ್ಲಿ 19 ಕೋಟಿ ಮೌಲ್ಯ ನಗದು ವಸ್ತು ವಶ, ಸಿಬ್ವಂದಿ ಮತ್ತು ಇವಿಎಂ ವಾಹನಗಳಿಗೆ ಜಿಪಿಆರ್ ಅಳವಡಿಕೆ ಮಾಡಲಾಗಿದೆ 276 ಕೆಎಸ್ ಆರ್ ಟಿಸಿ 11 ಖಾಸಗಿ ಬಸ್ 4 ಟಿಟಿ ಯನ್ನ ಇವಿಎಂ ಸ್ಟೋರ್ ಮಾಡಲಾಗಿದೆ 1021 ವೆಬ್ ಕಾಸ್ಟಿಂಗ್ ಇದೆ. ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ರಚಿಸಲಾಗಿದೆ. ಲೌಡ್ ಸ್ಪೀಕರ್ ಬಳಕೆ ಇಲ್ಲ. ಸೈಲೆಂಟ್ ಡೇ ಮೇ.6 ರಂದು ಇರುತ್ತದೆ. ಸೈಲೆಂಟ್ ಡೇ ದಿನ ಎಲ್ಲ ರಾಜಕೀಯ ಮತ್ತು ಸ್ಟಾರ್ ಪ್ರಚಾರಕರಿಗೆ ರೂಮ್ ಖಾಲಿ ಮಾಡಲು ಸೂಚನೆಯಾಗಿದೆ. ಅಭ್ಯರ್ಥಿಗೆ ಇರಲು ಅವಕಾಶವಿದೆ ಎಂದರು.

ನೈರುತ್ಯ ಪದವೀಧರ ಮತ್ತು ಶಿಕ್ಷಕರ ಚುನಾವಣೆಗೆ ಜೂ.3 ರಂದು ಮತದಾನ ನಡೆಯಲಿದೆ. ಮೇ.6 ರಂದು ಮತದಾರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. 3,907 ಶಿಕ್ಷಕರ ಕ್ಷೇತ್ರದಲ್ಲಿ ನೋಂದಣಿಯಾಗಿದೆ ,29202 ಮತದಾರರು ನೈರುತ್ಯ ಪದವೀಧರರು ಇದ್ದಾರೆ ಎಂದರು

ಫ್ಲೈಯಿಂಗ್ ಸ್ಕ್ವಾಡ್ ಗೆ ಸಹಕರಿಸಿ

ನಿನ್ನೆ ಪೆಟ್ರೋಲ್ ಬಂಕ್ ಗೆ ಫ್ಲೈಯಂಗ್ ಸ್ಕ್ಯಾಡ್ ಭೇಟಿ ನೋಡಿದಾಗ ಸಹಕರಿಸಬೇಕು. ತಡೆಯೊಡ್ಡೋದು ಗಲಾಟೆಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಸೂಕ್ತದಾಖಲೆ ಇದ್ದರೆ ಸೀಜ್ ಹಣ ಬಿಡುಗಡೆ ಮಾಡಲಾಗುತ್ತದೆ.

ಅನೇಕ ವಾಹನ ಔಟ್ ಸೋರ್ಸ್ ನಿಂದ ಪಡೆಯಲಾಗಿದೆ. ಅವರ ಆಕ್ಷೇಪಣೆ ಇದ್ದರೆ ನಮ್ಮ‌ಬಳಿ ಸೂಕ್ತ ದಾಖಲಾತಿ ನೀಡಿದರೆ ಆಯಿತು. ನಿನ್ನೆ ಅಡ್ಡ ಮಾಡಿರುವ ಘಟನೆ ನಡೆದಿದೆ. ವೀಡಿಯೋ ಮಾಡಲು ಅಡ್ಡಿಪಡಿಸಿರುವುದು ಸುಮೋಟೊ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/14147

Related Articles

Leave a Reply

Your email address will not be published. Required fields are marked *

Back to top button