ರಾಷ್ಟ್ರೀಯ ಸುದ್ದಿಗಳು

ಬಹಳ ಸದ್ದು ಮಾಡುತ್ತಿರುವ ಎಮೆರ್ಜೆನ್ಸಿ ಅಲರ್ಟ್ ಸಂದೇಶ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯ ವಿಪತ್ತು ನಿರ್ವಾಹಣ ಪ್ರಾಧಿಕಾರದಿಂದ ಇಂದು ಬಹುತೇಕರ ಮೊಬೈಲ್ ಗಳಲ್ಲಿ ಎಚ್ಚರಿಕೆಯ ಸಂದೇಶ ರವಾನೆ ಆಗಿದೆ. ಬಹುತೇಕರ ಮೊಬೈಲ್ ಗಳಲ್ಲಿ  ಕೆಟ್ಟ ಶಬ್ದಗಳೊಂದಿಗೆ ಸಂದೇಶ ಬಂದಿದೆ. ಈ ಶಬ್ದ ಮತ್ತು ಸಂದೇಶದ ಪರ ಮತ್ತು ವಿರೋಧಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿವೆ.

ಟ್ವೀಟರ್ ಗಳಲ್ಲಿ ಈ ಸಂದೇಶವನ್ನ  ಕೆಲವರು ವ್ಯಂಗ್ಯವಾಡಿದ್ದಾರೆ. ಕೆಲವರು ಈ ಶಬ್ದ ಬಂದಿರುವುದು ಮುಂದಿನ ದಿನಗಳಲ್ಲಿ ದೇಶಕ್ಕೆ ಆಪತ್ತು ಕಾದಿದೆ ಎಂಬ ಟ್ವೀಟ್ ನ್ನ‌ಮಾಡಲಾಗಿದೆ. ಇದಕ್ಕೆ ನೂರಾರು ಪರ ವಿರೋಧಗಳು ವ್ಯಕ್ತವಾಗಿದೆ.

ಹಾಗೆ ಕೆಲವರು ಇದು ಕನ್ನಡದಲ್ಲಿ ಸಂದೇಶ ಬಂದಿಲ್ಲ. ಹಾಗಾಗಿ ಇದು ಹಿಂದಿಯನ್ ಸರ್ಕಾರದ ದಬ್ಬಾಳಿಕೆತನ ಎಂದು ಚರ್ಚೆ ನಡೆದಿದೆ. ಕೆಲ ಮೊಬೈಲ್ ಗಳಲ್ಲಿ ಕನ್ನಡದಲ್ಲೂ ಈ ಸಂದೇಶ ಬಂದಿದೆ. ಇನ್ನು‌ಕೆಲವರ ಮೊಬೈಲ್ ಗೆ ಈ ಸಂದೇಶ ಬರಬೇಕಿದೆ.

ಈ ಕುರಿತು ಕೇಂದ್ರ ಸರ್ಕಾರ ದೇಶದ ಆಪತ್ತು ವೇಳೆ ಮತ್ತು ತುರ್ತು ಸಂದರ್ಭದಲ್ಲಿ ಹೀಗೆ ಅಲಾರಾಮ್ ಶಬ್ದಗಳೊಂದಿಗೆ ಸಾರ್ವಜನಿಕರನ್ನ ಎಚ್ಚರಿಸಲಿದೆ ಎಂದು ಮಾಹಿತಿ ನೀಡಿತ್ತು. ಅದರಂತೆ ಕೆಲವರ ಮೊಬೈಲ್ ಶಬ್ದಗಳೊಂದಿಗೆ ಪ್ರಾಯೋಗಿಕ ಎಚ್ಚರಿಕೆನ್ನ ನೀಡಲಾಗಿದೆ.

ಇದನ್ಬೂ ಓದಿ-https://suddilive.in/archives/1137

Related Articles

Leave a Reply

Your email address will not be published. Required fields are marked *

Back to top button