ರಾಷ್ಟ್ರೀಯ ಸುದ್ದಿಗಳು

ಗೋವಕ್ಕೆ ತೆರಳಬೇಕಿದ್ದ ವಿಮಾನ ರದ್ದು

ಸುದ್ದಿಲೈವ್/ಶಿವಮೊಗ್ಗ/20/12/2023

ಇಂದು ಬೆಳಿಗ್ಗೆ ಶಿವಮೊಗ್ಗದಿಂದ ಗೋವಾಗೆ ತೆರಳಬೇಕಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ಇಂದು ಕೊನೇ ಕ್ಷಣದಲ್ಲಿ ರದ್ದಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಂತ್ರಿಕ ದೋಷದ ಕಾರಣಕ್ಕೆ ಕೊನೇ ಕ್ಷಣದಲ್ಲಿ ವಿಮಾನ ರದ್ದಾಗಿದೆ. ಆಗಲೇ ಗೋವಾಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿಯೇ ಪರದಾಡುವಂತಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದಿಂದ ಗೋವಾಕ್ಕೆ ವಿಮಾನ ಹಾರಾಟ ನಡೆಸಬೇಕಿತ್ತು.

ನಿನ್ನೆ ಕೂಡ ಗೋವಾಕ್ಕೆ ತೆರಳಬೇಕಿದ್ದ ವಿಮಾನ ರದ್ದಾಗಿತ್ತು. ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ ಎಂದು ನೆಪ ಹೇಳಿ ವಿಮಾನ ರದ್ದು ಮಾಡಿರುವುದಕ್ಕೆ ಪ್ರಯಾಣಿಕರು ವಿಮಾನ ಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ಯಾನ ಸಂಸ್ಥೆ ಯಾವುದೇ ಬದಲಿ ವ್ಯವಸ್ಥೆಯನ್ನು ಮಾಡಿಲ್ಲ. ಅಲ್ಲದೇ ಅಧಿಕಾರಿಗಳು ಕೂಡ ಪ್ರಯಾಣಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಕಿಡಿಕಾರಿದ್ದಾರೆ.

ಮತ್ತೆ ಅದೇ ವಿಸಿಬಲಿಟಿ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜನರ ತಾಳ್ಮೆ ಸ್ಪೋಟಗೊಳ್ಳುವುದರಲ್ಲಿ ಅನುಮಾನವಿಲ್ಲ. ಈ ಹಿಂದೆಯೂ‌ ಗೋವ ವಿಮಾನ ಪ್ರಯಾಣ ರದ್ದಾಗಿತ್ತು. ಇದು ನಮ್ಮ ಲೆಕ್ಕಕ್ಕೆ ಸಿಕ್ಕಿರುವುದು ನೂರನೇ ಬಾರಿಗೆ.

ಇಂದು ಗೋವ ಪ್ರಯಾಣ ರದ್ದಾಗಿದ್ದ ಪರಿಣಾಮ ನಾಳೆ ಪ್ರಯಾಣಕ್ಕೆ ಕೆಲವರಿಗೆ ಹೈದರಾಬಾದ್ ನಿಂದ ಹಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತ್ತೆ ಕೆಲವರಿಗೆ ಶಿವಮೊಗ್ಗದಿಂದಲೇ ಅವಕಾಶ ಕಲ್ಪಿಸಲಾಗಿದೆ. ಟಿಕೇಟ್ ಹಣ ವಾಪಾಸ್ ಪಡೆಯಲು ಇಚ್ಚಿಸುವವರಿಗೂ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ-https://suddilive.in/archives/5149

Related Articles

Leave a Reply

Your email address will not be published. Required fields are marked *

Back to top button