ಸ್ಥಳೀಯ ಸುದ್ದಿಗಳು

ಡಿಜಿಟಲ್ ಮಾಧ್ಯಮಗಳಿಗೆ ಮೂಗುದಾರ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಡಿಜಿಟಲ್ ಮಾಧ್ಯಮ ಗಳಿಗೆ ಈ ಹಿಂದೆ ಚುನಾವಣೆಯ ವರದಿ ಮಾಡಲು ಅವಕಾಶ ಇರುವುದನ್ನ ಕಿತ್ತುಕೊಳ್ಳಲಾಗಿದೆಯಾ ಎಂಬ ಅನುಮಾನಕ್ಕೆ ಈ ಘಟನೆ ನಡೆದಿದೆ. ಅನುಕೂಲ ಸಿಂಧು ಕಾನೂನುಗಳು ಜಾರಿಯಲ್ಲಿದೆ.

ಈ ಹಿಂದೆ ಚುನಾವಣೆಗೆ ವೆಬ್ ಪೋರ್ಟಲ್ ಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಆ ಅವಕಾಶಗಳು ಇಲ್ಲ ಎಂದು ಜಿಲ್ಲಾಧಿಕಾರಿಗಳೆ ಸ್ಪಷ್ಟಪಡಿಸಿದ್ದಾರೆ. ಈ ಸ್ಪಷ್ಟನೆ ಗೊಂದಲ ಮೂಡಿಸಿದೆ.

2024 ರ ಚುನಾವಣೆ ಘೋಷಣೆಯಾದ ನಂತರ ವೆಬ್ ಪೋರ್ಟಲ್ ಮತ್ತು ಯೂಟ್ಯೂಬ್ ಗಳ ಸಭೆ ನಡೆಸಲಾಗಿತ್ತು. ಕೇವಲ ನಿರ್ಬಂಧಗಳಿಗೆ ಮಾತ್ರ ಒಳಪಡಿಸದೆ ಡಿಜಿಟಲ್ ಮೀಡಿಯಾಗಳಿಗೆ ಚುನಾವಣೆ ವರದಿಗೆ ಅವಕಾಶಕೊಡಿ ಎಂದಾಗ ಕೊಡುವ ಬಗ್ಗೆ ಆಶ್ವಾಸನೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಡಿಜಿಟಲ್ ಮೀಡಿಯಾಗಳಿಗೆ. ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಮೋದಿ ಕಾರ್ಯಕ್ರಮದಲ್ಲಿ ಹಾಗೆ ಹೇಳಲಾಯಿತು. ಡಿಜಿಟಲ್ ಮಾಧ್ಯಮಗಳಿಗೆ ಅವಕಾಶವಿಲ್ಲ ಎಸ್ ಜಿಪಿ ಸಮಸ್ಯೆ ಆಗಲಿದೆ ಎನ್ನಲಾಯಿತು. ಬಿಜೆಪಿ ಸೋಷಿಯಲ್ ಮೀಡಿಯಾಕ್ಕೆ ಮಾಧ್ಯಮಗಳ ಕಾರ್ಡ್ ಹಂಚಲಾಗಿತ್ತು. ಇಂತಹ ಅನಕೂಲಕರ ಕಾನೂನುಗಳು ನಿರ್ಬಂಧಗಳು ಜಾರಿಯಲ್ಲಿವೆ. ಡಿಜಿಟಲ್ ಮೀಡಿಯಾ ಜನರನ್ನ ಬೇಗ ಸಂಪರ್ಕಿಸಲಿದೆ ಜನರ ಮಧ್ಯೆ ನಿಂತು ವರದಿ ಮಾಡಲಾಗುವುದು.

ಇದನ್ನೂ ಓದಿ-https://suddilive.in/archives/14170

Related Articles

Leave a Reply

Your email address will not be published. Required fields are marked *

Back to top button