ನಾವು ತಪ್ಪು ಮಾಡಿದ್ರೆ ಕಪಾಳಕ್ಕೆ ಹೊಡಿರಿ, ಇಲ್ಲದಿದ್ದರೆ ನಾವು ನಿಮ್ಮ ಕಪಾಳಕ್ಕೆ ಹೊಡೆಯುತ್ತೇವೆ-ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡ ಕೋಮು ಗಲಭೆಯನ್ನ ಬಿಜೆಪಿ ವೇಷ ಬದಲಿಸಿಕೊಂಡು ಮಾಡ್ತಾರೆ ಎಂಬ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ವಿಚಾರದಲ್ಲಿ ಶಾಸಕ ಚೆನ್ನಬಸಪ್ಪ ಗರಂ ಆಗಿದ್ದಾರೆ. ಹೊಟ್ಟೆಗೆ ಅನ್ನ ತಿನ್ನುವವರು ಈ ಕೆಲಸ ಮಾಡಲ್ಲ ಎಂದರು.
ಶಿವಮೊಗ್ಗಕ್ಕೆ ನೀವು ಬನ್ನಿ, ನಿಮ್ಮನ್ನ ನಾವು ಘಟನೆ ಸ್ಥಳಕ್ಮೆ ಕರೆದುಕೊಂಡು ಹೋಗ್ತೀವಿ. ನಾವು ಏನಾದರೂ ತಪ್ಪು ಮಾಡಿದ್ದೀವಾ, ಅವರು ತಪ್ಪು ಮಾಡಿದ್ದಾರಾ ನೋಡಲಿ. ನಾವು ತಪ್ಪು ಮಾಡಿದ್ರೆ ಕಪಾಳಕ್ಕೆ ಹೊಡಿರಿ. ಇಲ್ಲದಿದ್ದರೆ ನಾವು ನಿಮ್ಮ ಕಪಾಳಕ್ಕೆ ಹೊಡೆಯುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬಿಜೆಪಿಗೆ ಅಂತಹ ಸ್ಥಿತಿ ಬಂದಿಲ್ಲ. ಶಿವಮೊಗ್ಗ ಶಾಂತವಾಗಿದೆ ಮತ್ತೆ ಹುಳಿ ಹಿಂಡುವ ಕೆಲಸ ಮಾಡ್ತೀರಾ ನೀವು? ಗೃಹ ಸಚಿವರಾಗಿದ್ದವರು ನೀವು ಸರಿಯಾಗಿ ಮಾತನಾಡಿ, ಕ್ರಮ ಕೈಗೊಳ್ಳುವ ತಾಕತ್ ಇಲ್ವಾ ನಿಮಗೆ, ಎಸ್ ಪಿ ಅವರು ಕ್ರಮ ಕೈಗೊಳ್ಳುತ್ತಾರೆ ನೀವು ಸುಮ್ಮನಿರಿ, ನಿಮಗೆ ತಾಕತ್ ಇದ್ದರೆ ಶಿವಮೊಗ್ಗಕ್ಕೆ ಬಂದು ಅಲ್ಲಿ ಸ್ಥಳ ಪರಿಶೀಲನೆ ನಡೆಸಿ ಎಂದು ಗುಡುಗಿದರು.
ನೀವುಗಳು ಈ ರೀತಿ ಮಾತನಾಡಿದ್ರೆ ಕ್ರಮಕೈಗೊಳ್ಳಬೇಕು ಅಂದುಕೊಂಡಿರುವ ಅಧಿಕಾರಿಗಳಿಗೆ ಧೈರ್ಯ ಬರುತ್ತದಾ? ಮಾನ ಮರ್ಯಾದೆ ಇಟ್ಟುಕೊಂಡು ಮಾತನಾಡಿ, ರಾಗಿಗುಡ್ಡವನ್ನೇ ನೋಡಿಲ್ಲ ಹೇಳಿಕೆ ಕೊಡ್ತೀರಿ, ನೀವು ಮೊದಲು ರಾಗಿಗುಡ್ಡಕ್ಕೆ ಬಂದು ನೋಡಿ. ಮೊದಲು ರಾಜಕಾರಣ ಮಾಡೋದು ಬಿಡಿ ಎಂದರು.
ಘಟನೆ ಏನಾದರೂ ಉಲ್ಟಾ ಆಗಿದ್ರೆ ಇಷ್ಟೋತ್ತಿಗೆ ಅವರ ಮನೆಗಳಿಗೆ ಪರಿಹಾರದ ಚೆಕ್ ಬಂದು ಬೀಳುತಿತ್ತು. ಅಧಿಕಾರಿಗಳ ಕೈಕಾಲು ಕಟ್ಟಿ ಹಾಕಿದ್ದಾರೆ. ಮರೆಮಾಚುವ ಸಲುವಾಗಿ ಪುರುಸೊತ್ತಾದಾಗ ಒಂದೊಂದು ಹೇಳಿಕೆ ಕೊಡ್ತೀರಾ? ಇಂತಹ ಕೆಲಸ ಮಾಡಬೇಡಿ. ಹುಬ್ಬಳ್ಳಿ ಪ್ರಕರಣ ಕೈಬಿಡುವಂತೆ ಡಿಕೆಶಿ ಪತ್ರ ಬರೆದಿದ್ದಾರೆ. ಈ ಮೊದಲು ತನ್ವೀರ್ ಸೇಠ್ ಹೇಳಿದ್ರು, ಈಗ ಡಿಕೆಶಿ ಹೇಳ್ತಿದ್ದಾರೆ ಎಂದು ಆರೋಪಿಸಿದರು.
ಮುಂದೆ ಸಿದ್ದರಾಮಯ್ಯ ಅವರೇ ಈ ಮಾತನ್ನು ಹೇಳಿದರೇ ಯಾವ ಅಸ್ಚರ್ಯವಿಲ್ಲ. ಮುಸ್ಲಿಂರ ಓಟಿಗೋಸ್ಕರ ಏನು ಬೇಕಾದರೂ ಹೇಳುದ್ರೆ ಕೇಳಿಸಿಕೊಳ್ಳೋಕೆ ಯಾರೂ ಇಲ್ಲ ಎಂದರು.
ಇದನ್ನೂ ಓದಿ-https://suddilive.in/archives/537
