ರಾಜಕೀಯ ಸುದ್ದಿಗಳು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿಗಿಯಾಗಿದೆ-ಸುರ್ಜೇವಾಲ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಕಾಂಗ್ರೆಸ್ ನ 20 + ಸ್ಥಾನ ಪಡೆಯಲಿದೆ. ಬೂತ್ ಮಟ್ಟದ ಗ್ಯಾರೆಂಟಿ ಉತ್ಸವ ನಡೆಲಾಗಿದೆ. ನಾವು ವಿಧಾನ ಸಭೆಯ ಚುನಾವಣೆಯ ವೇಳೆ ಗ್ಯಾರೆಂಟಿಯನ್ನ ಕೊಟ್ಟಾಗ ಬಿಜೆಪಿಯ ಮೋದಿ ಮತ್ತು ಯಡಿಯೂರಪ್ಪ ವ್ಯಂಗ್ಯವಾಡಿದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇವತ್ತು ಅದೇ ಗ್ಯಾರೆಂಟಿಯ ಭಜನೆಯನ್ನ ಮೋದಿ ಮಾಡ್ತಾ ಇದ್ದಾರೆ. 200 ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ನೀಡಲಾಗಿತ್ತು. ಅಕ್ಕಿ ಕೊಡುವುದಾಗಿ ಭರಸೆ ನೀಡಲಾಗಿತ್ತು. ಅಕ್ಕಿ ಕೊಡಿ ಎಂದು ಕೇಳಿಕೊಂಡು ಎಫ್ ಸಿಐ ಬಳಿ ಹೋದಾಗ ಯಡಿಯೂರಪ್ಪ ಹೋಗಿ ಅಕ್ಕಿಕೊಡದಂತೆ ಹೇಳಿ ಬಡವರಿಗೆ ಅನ್ಯಾಯಮಾಡಿದರು ಎಂದು ದೂರಿದರು.

ಐದು ಗ್ಯಾರೆಂಟಿಯನ್ನ ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿದೆ. ಈಗ ದೆಹಲಿಯ ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆ ಮತ್ತು ಮಹಾಲಕ್ಷ್ಮೀ ಯೋಜನೆಯಿಂದ ಕರ್ನಾಟಕದ ಮಹಿಳೆಯರಿಗೆ 10 ಸಾವಿರ ಪ್ರತಿಮಹಿಳೆಯರಿಗೆ ನೀಡುವ ಭರವಸೆ ನೀಡಿದೆ.

ರೈತರಿಗೆ 1 ಲಕ್ಷ ರೂ ಸಾಲ ಮನ್ನಮಾಡುವುದಾಗಿ ಭರವಸೆ ನೀಡಿದೆ. ಮೋದಿ ಶ್ರೀಮಂತರ ಸಾಲ ಮನ್ನ ಮಾಡಿದ್ದಾರೆ. ನಾವು ಬಡವರ ನೆಮ್ಮದಿಯ ಬದುಕಿಗೆ ಏನು ಬೇಕೋ ಅದನ್ನ ಗ್ಯಾರೆಂಟಿ ಮೂಲಕ ನೀಡುತ್ತಿದ್ದೇವೆ. ಪ್ರತಿ ಕುಟುಂಬ 25 ಸಾವಿರ ವರೆಗೆ ಕ್ಯಾಶ್ ಲೆಸ್ ವಿಮೆ‌ ನೀಡಲಾಗುವ‌ ಭರವಸೆ ನೀಡಿದ್ದೇವೆ ಎಂದರು.

ನರೇಗಾದಲ್ಲಿ 125 ರೂ ನೀಡಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅದನ್ನ 530 ರೂ ಎರಿಸಲಾಗುವುದು. ಜು. 3 ರ ನಂತರ ಈ ಎಲ್ಲಾ ಗ್ಯಾರೆಂಟಿ ಇಡೆರಿಸುವುದಾಗಿ ಹೇಳಿದರು.

ಮೋದಿ ಸರ್ಕಾರ ಚೆಂಬು ಮಾದರಿಯ ಆಡಳಿತ ನೀಡಿದ್ದಾರೆ. 2 ಕೋಟಿ ಉದ್ಯೋಗ ನೀಡಿ ಎಂದು ಮೋದಿ ಸರ್ಕಾರವನ್ನ ಪ್ರಶ್ನಿಸಿದರೆ ಚೆಂಬು ತೋರಿಸಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನ ಸೋಲಿಸಿ ಮೋದಿಜಿಗೆ ಚೆಂಬು ಏನಂತ ತೋರಿಸಬೇಕೆಂದರು.

ಈ ಬಾರಿ 400 ಗಡಿ ದಾಟುವುದಾಗಿ ಹೇಳಿಕೊಂಡಿರುವ ಬಿಜೆಪಿ 200ಗಡಿ ದಾಟುವುದು ಕಷ್ಟವಾಗಿದೆ. ಕಾಂಗ್ರೆಸ್ ಅಧಿಕಾರಕ್ಜೆ ಬಂದರೆ ಜಿಎಸ್ ಟಿ ರದ್ದು ಮಾಡುವುದಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಉಸ್ತುವಾರಿ ಸುರ್ಜೇವಾಲ, ಹೊಸ ಜಿಎಸ್ ಟಿ ಜಾರಿಗೆ ತರಲಾಗುವುದು. ಪ್ರಸ್ತುತ ಜಿಎಸ್ ಟಿಯನ್ನ 7 ಹಂತದಲ್ಲಿ ಜಾರಿಯಲ್ಲಿದೆ. ಇದನ್ನ 2 ಕ್ಕೆ ಇಳಿಸಲಾಗುವುದು. ಜಿಎಸ್ ಟಿಯಿಂದ ಸಂಗ್ರಹವಾಗುವ ಹಣದಲ್ಲಿ ರಾಜ್ಯಗಳಿಗೆ ಸಮನಾಗಿ ಹಂಚಲಾಗುವುದು. ಬಿಜೆಪಿ ರಾಜ್ಯದಲ್ಲಿ ಬರವಿದೆ. ಪರಿಹಾರ ನೀಡಿ ಎಂದರೆ 15 ನೇ ಹಣಕಾಸಿನ ಯೋಜನೆಯಲ್ಲಿ ನೀಡಲಾಗಿದೆ ಎಂದು ಹಣಕಾಸು ಸಚಿವೆ ಕೈತೊಳೆದುಕೊಂಡಿದ್ದಾರೆ.

ಪ್ರತಿ ರಾಜ್ಯವೂ ಹಣಕಾಸಿನ ವಿಚಾರದಲ್ಲಿ ಸಮನರೀತಿಯಲ್ಲಿ ಹಣ ಪಡೆಯಬೇಕಿದೆ. ಬೇರೆ ರಾಜ್ಯದ ಅಭಿವೃದ್ಧಿಗೆ ಕನ್ನಡಿಗ ಸಂತ್ರಸ್ತರನ್ನಾಗಿರಲು ಕಾಂಗ್ರೆಸ್ ಬಿಡುವುದಿಲ್ಲ ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎರಡು ಘಟನೆಯಿಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನ ಬಿಜೆಪಿ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಉತ್ತರಿಸಿದ ಸುರ್ಜೇವಾಲ ಪ್ರಕರಣಗಳಲ್ಲಿ ಯಾವುದೇ ಆರೋಪಿಯನ್ನ 6 ಗಂಟೆಯ ಒಳಗೆ ಬಂಧಿಸಬೇಕು. ಎರಡೂ ಪ್ರಕರಣದಲ್ಲಿ ಆರೋಪಿಗಳು ಬಂಧಿಸಲಾಗಿದೆ. ಯಾವುದೇ‌ ನೂನ್ಯತೆ ಆಗಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button