ರಾಜಕೀಯ ಸುದ್ದಿಗಳು

‘ಶಾಹೀ’ ರಾಷ್ಟ್ರ ಭಕ್ತರ ಬಹುದೊಡ್ಡ ಹಗರಣ ಆಯನೂರು ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಶಾಸಕ ಗೋಪಾಲ ಕೃಷ್ಣ ಬೇಳೂರು ಅವರು ಎತ್ತಿರುವ ಶಾಹೀ ಗಾರ್ಮೆಂಟ್ಸ್ ವಿಚಾರಕ್ಕೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸಾಥ್ ನೀಡಿದ್ದಾರೆ. ಶಿವಮೊಗ್ಗದ ಬಹುದೊಡ್ಡ ಹಗರಣ ಎಂದರು‌..

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ ಭಕ್ತರ ಭ್ರಷ್ಠಾಚಾರ ಇದು. ಶಾಹೀ ಗಾರ್ಮೆಂಟ್ಸ್ ್ಎ ಸೈಲೆಂಟ್ ಪಾರ್ಟನರ್ ಯಾರು, ಸ್ಲೀಪರ್ ಯಾರು? ಜಿಲ್ಲಾ ಬಿಜೆಲಿ ಮಹಿಳಾ ಮೋರ್ಚದ ಅಧ್ಯಕ್ಷರು ಹೋರಾಟ ನಡೆಸಿ ಸುಮ್ಮನಾಗಿದ್ದು ಯಾಕೆ? ಎಂದು ಗುಡುಗಿದರು.

ಒಂದು ಎಕರೆಗೆ 8 ಲಕ್ಷ ರೂಗೆ ನೀಡಲಾಗಿದೆ.ಹಾಗೆನೋಡಿದರೆ 23 ಕೋಟಿ ರೂ.ಕಟ್ಟಿದ ಕಾರ್ಖಾನೆಗೆ 25 ಕೋಟಿ ನಂತರ ಸಬ್ಸಿಡಿ ಕೊಡಲಾಗಿದೆ. ಅಂದರೆ ಉಚಿತವಾಗಿ ನೀಡಲಾಗಿದೆ. ದೆಹಲಿಯ ಅಗರವಾಲನ ಹೆಸರು ಇದೆ ಸ್ಲೀಪರ್ ಪಾರ್ಟನರ್ ಯಾರು? ಹಾಗಾಗಿ ಆಳಕ್ಕೆ ಇಳಿಯಬೇಕಿದೆ. ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಪ

ಬಂಗಾರಪ್ಪನವರನ್ನ 2004 ರಲ್ಲಿ ಗೆಲ್ಲಿಸಿದ್ದು ಇದೇ ಬಿಜೆಪಿ ಚೇಲಾಗಳೆ ಎಂದಿರುವ ಸಂಸದರ ಹೇಳಿಕೆಗೆ ಪ್ರತಿದಾಳಿ ನಡೆಸಿದ ಕೆಪಿಸಿಸಿ ವಕ್ತಾರ ಆಯೂರು ಮಂಜುನಾಥ್, ರಾಜಕೀಯ ಹಿಸ್ಟರಿ ಹೇಳಿ, ಬಂಗಾರಪ್ಪ ಬಿಜೆಪಿಗೆ ಬಂದ ಮೇಲೆ ನೀವು ಗೆದ್ದಿದ್ದು ಎಂದು ಟಾಂಗ್ ನೀಡಿದರು.

1999-2000 ರಲ್ಲಿ ಸೋತ ಬಿಜೆಪಿ ನಾಯಕರು ಅನಂತ್ ಕುಮಾರ್ ಮೂಲಕ ಬಂಗಾರಪ್ಪನವರನ್ನ ಪಕ್ಷಕ್ಕೆ ಕರತರಲಾಗಿತ್ತು. ರಾಜಕೀಯ ಶರಣಾಗತಿ ಮಾಡಲಾಯಿತು.

ಬಂಗಾರಪ್ಪ ಬಿಟ್ಟುಕೊಟ್ಟ ಸ್ಥಳದಲ್ಲಿ ಬಿಜೆಪಿ 2004 ರಲ್ಲಿ ಚುನಾವಣೆ ಎದುರಿಸಲಾಗಿತ್ತು. ಶಿಕಾರಿಪುರ ಮತ್ತು ಶಿವಮೊಗ್ಗ ಗೆದ್ದರೆ ಸಾಕು ಎಂಬ ಮನಸ್ಥಿತಿ ನಿರ್ಅಣವಾಯಿತು‌. ಬಂಗಾರಪ್ಪ ಬಂದ ನಂತರ 78 ಸ್ಥಾನ ಪಡೆಯಲಾಯಿತು. ನಾನು ಕಾಂಗ್ರೆಸ್ ಗೆ ಹೋದೆ. ಕಿಮ್ಮನೆ, ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಲ್ಲಿದ್ದರು.

ಬಂಗಾರಪ್ಪನವರನ್ನ ರೇಗಿಸಿದರೆ ಪಕ್ಷ ಬಿಡ್ತಾರೆ ಎಂಬ ಮಾಹಿರಿ ಇತ್ತು. ಬಹಳ ದಿನ ಬಂಗಾರಪ್ಪ ಬಿಜೆಪಿಯಲ್ಲಿ ಉಳಿಯಲಿಲ್ಲ. 1994 ರಲ್ಲಿ 42 ಸ್ಥಾನವಿತ್ತು‌. ಬಂಗಾರಪ್ಪನವರನ್ನ ಗೆಲ್ಲಿಸಿದ್ದು ಅದೇ ಬಿಜೆಪಿಯ ಚೇಲಾಗಳು ಎಂದು ಸಂಸದರು ಹೇಳಿದ್ದಾರೆ.

ರಾಘಣ್ಣ ತಬ್ಬಿಬ್ವು ಆದಂತೆ ಕಾಣಿಸಿಕೊಂಡಿದ್ದಾರೆ. ಈಶ್ವರಪ್ಪನವರಿಗೆ ಹೊಡೆತ ಬಿದ್ದಿದೆ ಹಾಗಾಗಿ ಹೊರಬಂದು ಸ್ಪರ್ಧಿಸುತ್ತಿದ್ದಾರೆ. ಹೋರಾಟ ಮಾಡಿಕೊಂಡು ಬಂದಿದ್ದ ನನನ್ನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ತಲು ಬಲಿಕೊಡಲಾಯಿತು. ಇವತ್ತು ಅಪ್ಪಮಕ್ಕಳ ವಿರುದ್ಧ ದೂರು ದಾಖಲಾಗಿದೆ.

2009 ರ ವರೆಗೆ ಅನ್ ನೌನ್ ಆಗಿದ್ದ ರಾಘವೇಂದ್ರರನ್ನ ಗೆಲ್ಲಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷರು ಕೊಡುಗೆ ಎನು ಎಂದಿದ್ದಾರೆ ಸೂಕ್ತ ಸಯದಲ್ಲಿ ಮಾತನಾಡುವೆ. ಲಾಠಿ ಏಟು, ಜೈಲುವಾಸ, ಹೋರಾಟದ ಮೂಲಕ ಬಂದ ನನ್ನನ್ನ ರಾಜಕೀಯ ಲಾಭ ಪಡೆದಿದ್ದಾರೆ ಎಂದು ಹೇಳಿದರೆ ಬಿಡಕ್ಕೆ ಆಗುತ್ತಾ ಎಂದು ಡಾ ಸರ್ಜಿ ಹೆಸರುಹೇಳದೆ ಮಾತನಾಡಿದರು.

ಈ ಬಾರಿ ಕಾಂಗ್ರೆಸ್ ನ ಗೀತಾ ಶಿವರಾಜ್ ಕುಮಾರ್ ಅವರನ್ನ ಗೆಲ್ಲಿಸಲಾಗುತ್ತದೆ.ಎಂದು ಆಯನೂರು ಹೇಳಿದರು.

ಇದನ್ನೂ ಓದಿ-https://suddilive.in/archives/12127

Related Articles

Leave a Reply

Your email address will not be published. Required fields are marked *

Back to top button