ಕ್ರೈಂ ನ್ಯೂಸ್

ಜೀವ ರಕ್ಷಿಸಿದ ಪೊಲೀಸರಿಗೆ ಎಸ್ಪಿಯಿಂದ ಸನ್ಮಾನ

ಸುದ್ದಿಲೈವ್/ಶಿವಮೊಗ್ಗ

ಮಳೆ ನೀರಿಗೆ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನ ಪ್ರಾಣದ ಹಂಗುತೊರೆದು ರಕ್ಷಿಸಿದ ಪೊಲೀಸರನ್ನ ಎಸ್ಪಿ ಮಿಥುನ್ ಕುಮಾರ್ ಸನ್ಮಾನಿಸಿ ಗೌರವಿಸಿದ್ದಾರೆ.

ದಿನಾಂಕಃ 18-05-2024 ರಂದು ರಾತ್ರಿ ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನು ರಸ್ತೆಯ ಮೇಲೆ ಹರಿಯುತ್ತಿದ್ದ ಮಳೆಯ ನೀರಿನಿಂದ ಬೈಕ್ ನಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಬಗ್ಗೆ ERSS – 112 ತುರ್ತು ಸಹಾಯವಾಣಿಗೆ ಕರೆ ಬಂದಿತ್ತು.

ಕರೆಯ ಮೇರೆಗೆ, ERSS – 112 ವಾಹನದ ಅಧಿಕಾರಿಗಳಾದ  ರಂಗನಾಥ್, ಹೆಚ್. ಸಿ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು  ಪ್ರಸನ್ನ ಕುಮಾರ್, ಎ.ಹೆಚ್.ಸಿ ಡಿಎಆರ್ ಶಿವಮೊಗ್ಗ ರವರು ಕೂಡಲೇ ಸ್ಥಳಕ್ಕೆ ಹೋಗಿ ವ್ಯಕ್ತಿಯನ್ನು ರಕ್ಷಿಸಿ ಉತ್ತಮ ಕಾರ್ಯ ನಿರ್ವಹಿಸಿದ್ದರು.

ರಕ್ಷಿಸಿರುವ ಬೆನ್ನಲ್ಲೇ  ಇಂದು ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ. ಕೆ,  ಪೊಲೀಸ್ ಸಿಬ್ಬಂದಿಗಳಾದ ರಂಗನಾಥ್ ಮತ್ತು  ಪ್ರಸನ್ನ ಕುಮಾರ್  ರವರ ಉತ್ತಮವಾದ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/15246

Related Articles

Leave a Reply

Your email address will not be published. Required fields are marked *

Back to top button