ಕ್ರೈಂ ನ್ಯೂಸ್

ಶರಾವತಿ ಡೆಂಟಲ್ ಕಾಲೇಜಿನ ಬಳಿಯ ತಡೆಗೋಡೆ ಕುಸಿತ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮೂರು ನಾಲ್ಕು ದಿನಗಳಿಂದ ಬಿಡದೇ ಸುರಿದ ಮಳೆಗೆ ಅವಾಂತರ ಸೃಷ್ಠಿಯಾಗಿದೆ. ಈಗ ಮತದಾನ ನಡೆದಿದ್ದರೆ ಅಭಿವೃದ್ಧಿಯ ಮಂತ್ರ ಜಪಿಸುವವರಿಗೆ ಸರಿಯಾದ ಗುನ್ನ ಬೀಳುವಂತೆ ಜನ ಸಿಟ್ಟಿಗೆದ್ದಿರುವಂತೆ ವಾತಾವರಣ ನಿರ್ಮಾಣವಾಗಿದೆ.

ಮಳೆಗೆ ಶಿವಮೊಗ್ಗ ನಗರದಲ್ಲಿ ಸೃಷ್ಠಿಯಾಗಿರುವ ಸಮಸ್ಯೆಗಳಿಗೆ ಜನ ಹಿಡಿಶಾಪ ಹಾಕುವ ಸಂದರ್ಭದಲ್ಲಿಯೇ ಮತ್ತೊಂದು ಕಾಮಗಾರಿಯ ಅವ್ಯವಸ್ಥೆ ಹೊರಬುದ್ದಿದೆ. ಹೊರವಲಯದ ಗಾಡಿಕೊಪ್ಪದ ಶರಾವತಿ ಡೆಂಟಲ್ ಕಾಲೇಜು ಮುಂಭಾಗವಿರುವ ತಡೆಗೋಡೆಯೊಂದು ಮಳೆಯ ನೀರಿಗೆ ಕುಸಿದು ಬಿದ್ದಿದೆ.

ಗಾಡಿಕೊಪ್ಪದ ದೊಡ್ಡ ಚಾನೆಲ್‌ ಗೆ ನಿರ್ಮಿಸಿದ್ದ ತಡೆಗೋಡೆ ಇದಾಗಿದೆ. ತುಂಗಾ ಎಡದಂಡೆ ಕಾಲುವೆಗೆ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದು ವಾಲಿದೆ. ಮಳೆ ನಿಂತರೆ ವಾಲಿದ ತಡೆಗೋಡೆ ಹೀಗೆ ಪಳುವಳಿಕೆಯ ರೀತಿ ನಿಲ್ಲುತ್ತದೆ. ಒಂದು ವೇಳೆ ಮಳೆ ಮುಂದುವರೆದರೆ ಸಾಗರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗೂ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚಿದೆ.

ತಡೆಗೋಡೆ ಮೂವತ್ತಕ್ಕೂ ಅಡಿ ಆಳ ಕುಸಿದಿರ ಬಹುದು ಎಂದು ಅಂದಾಜಿಸಲಾಗಿದೆ. ಎಚ್ಚೆತ್ತುಕೊಳ್ಳದಿದ್ದರೆ, 11 ಕೆವಿ ವಿದ್ಯುತ್ ಕಂಭವೂ ಕುಸಿಯುವ ಸಾಧ್ಯತೆಯಿದೆ. ಅವೈಜ್ಞಾನಿಕ ಡ್ರೈನೇಜ್ ನಿರ್ಮಾಣದಿಂದ ತಡೆಗೋಡೆ ಕುಸಿದಿರಬಹುದು ಎಂದು ಅಂದಾಜಿಸಲಾಗಿದೆ.

ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಜನರ ತೆರಿಗೆ ಹಣದಿಂದ ನಿರ್ಮಾಣವಾಗುವ ಕಟ್ಟಡಗಳು,‌ತಡೆಗೋಡೆಗಳು, ಸೇತುವೆ ಮತ್ತಿತರೆ ಕಾಮಗಾರಿಗಳ ಅಯಸ್ಸು ಸಹ ಅಲ್ಪಾವದಿ ಎಂಬುದು ಬಹಿರಂಗವಾಗುತ್ತಿದೆ.

ಇದನ್ನೂ ಓದಿ-https://suddilive.in/archives/15241

Related Articles

Leave a Reply

Your email address will not be published. Required fields are marked *

Back to top button